ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಟ್ಟಬಾರದ,ನೋವುಂಡ ಮನಸುಗಳಿಗೆ ಜೋಲಿ

ಅಜ್ಜನ ಕಣ್ಣ ಬೆಳಕಿನ ಹಾದಿಯಲಿ

ಬಿದಲೋಟಿ ರಂಗನಾಥ್

ಬಿದಲೋಟಿ ರಂಗನಾಥ್

ಅಜ್ಜನ ಕಣ್ಣ ಬೆಳಕಿನ ಹಾದಿಯಲಿ
ಸಾಗಿದ ಬದುಕಿನ ಹೆಜ್ಜೆಗಳು
ಆತ್ಮಸ್ಥೈರ್ಯದ ರೆಕ್ಕೆಗಳು

ತಿರೆಯನು ನಂಬಿ
ತರಿದ ಕತ್ತಲೆಯಲಿ
ಬದುಕಿನ ಅಜ್ಜನ ಬೆವರಹನಿಗಳು
ಹಸಿರು ಕಂಡ ಕನಸುಗಳು

ink colorತುಳಿದ ಹೆಜ್ಜೆಗಳ ಮೇಲೆ
ಸಕ್ಕರೆ ತಿಂದ ಇರುವೆಗಳ ಸಾಲು..
ಸಕ್ಕರೆ ಕರಗಿದ ಮೇಲೆ
ಆ ಹೆಜ್ಜೆಯೋ ಮರಳುಗಾಡು.

ಬೋಳು ಗೋಳಿನ ಮರಕೆ
ಅಸ್ಮಿತೆಯನು ತುಂಬಿ
ನಗುವನು ಕೂರಿಸಿದ
ಅಜ್ಜನ ಮನಸಿನ ಇಷ್ಟ
ಸಮಾನತೆಯ ಬಾಗಿಲ ತೆರೆಯುವುದು.

ಕಾಗೆ ಕೂಗಿನ ಸದ್ದಿಗೆ
ಕಿವಿಗೊಡದ ಮನಸಿನ ಹೆದ್ದಾರಿಯಲಿ
ಮುಟ್ಟಬಾರದ,ನೋವುಂಡ ಮನಸುಗಳಿಗೆ ಜೋಲಿ.
ಪೊರೆಬಂದ ಕಣ್ಣ ಕೂಗಿನಲಿ
ನೊಂದ ಮನಸಿನ ಚೂರುಗಳಿಗೆ ಸಾಂತ್ವಾನ.

ಬೆಳಕಿಗಾಗಿ ಹಂಬಲಿಸಿ
ಬೆಳಕಾದ ಅಜ್ಜನ ಬದುಕಿನ ಪಾತ್ರ
ತೆರೆ ಸರಿಸಿದ ತೊರೆ.

‍ಲೇಖಕರು admin

13 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading