ಕೈದಾಳ್ ಕೃಷ್ಣಮೂರ್ತಿ
ನಟಿಸಬೇಡ ಗೆಳತಿ ಬೆತ್ತಲೆಯ ಅರಿವಿಲ್ಲದವಳಂತೆ
ಎಷ್ಟು ಹೊದ್ದರೂ ಘನಿಸುತ್ತಿಲ್ಲ
ನಿನ್ನ ಕಣ್ಣಕಾಂತಿಯ ಮುಂದೆ
ಹಾರುವ ಅನಂತಕ್ಕೆ ಗಾಜು ತೊಡಿಸಿದವರು ನಾವು
ಆತ್ಮವಂಚನೆಯಿಂದ ದೂರವಾಗುವ ಕಾಲಕ್ಕೆ
ಕನ್ನಡಿಯಾಗೋಣ
ಕೂಡುವಾಗ ನಾನ್ಯಾರೋ? ನೀನ್ಯಾರೋ?
ಸುತ್ತಣವ ಒಪ್ಪಿಸಲೋದೆವು ನೋಡು
ನೆರೆಯಂತೆ ಉಕ್ಕಿ ಬಂತು ಕೇಡು
ಇಟ್ಟಂಗಿಗಳೆದ್ದು ಗೋಡೆಗಳಾದವು
ನಾನು ನೀನು ಕಾಣದಾದೆವು
ಕೂಡುವಾಗ ಕಾಡದ್ದಕ್ಕೆ
ಯಾವ ಅರ್ಥವೂ ಇಲ್ಲ ಜಗದಲ್ಲಿ
ನಾನು ಹೊರಗೆ
ಅವನು ಒಳಗೆ
ಯಾರು ಅಡಿಯಿಟ್ಟರೇನು?
ಮೈಲಿಗೆಯಾಗುವುದೇ ಮಣ್ಣಗರ್ಭ
ಹಸಿಯದವಗೆ ಮೊಲೆಹುಣ್ಣು
ಅರ್ಜಿ ಗುಜರಾಯಿಸಿ, ಕೂಪನ್ನಿಡಿದು ಹುಟ್ಟಲಿಲ್ಲ
ಸತ್ತ ಮೇಲೇನೋ ಗೊತ್ತೇ ಇಲ್ಲ
ಬದುಕೆಂಬುದು ಗಿರಗಿಟ್ಲೆ, ಅತ್ತಿಂದಿತ್ತ
ಮನಸ್ಸು ಐಷರಾಮಿ ನಗರದ ಹೈಟೆಕ್ ಸೂಳೆ
ಹುಟ್ಟು ಸಾವುಗಳೆರಡೂ ಬೆತ್ತಲು
ನಡುಬಂದ ನಾ ನಿನ್ನದೆಂಥ ಮುಚ್ಚುಗದಾಟ






ಧನ್ಯವಾದಗಳು ಮೋಹನ್ ಸರ್
mailigeyaguvude manna garbha ? embantha effective saalugalinda kavita bahala sashaktavagide…
Soole.. shabdavannu ..elladakkoo balasuvudu innadaroo kadime madabahudeno !!
ಇಷ್ಟವಾಯ್ತು ಕವಿತೆ
ಕವಿತೆ ಇಷ್ಟವಾಯ್ತು