ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ತುಟಿಯಂಚಿನಲಿ…

 ಸರೋಜಿನಿ ಪಡಸಲಗಿ, ಬೆಂಗಳೂರು

 

ಹಸಿರು ತಳಿರ ಅಂಚಿನಲಿ

ಭುವಿಯೊಡಲ ತುಂಬಿದ ಹಸಿರ ಮಡಿಲಲಿ
ಕವಿದ ಮಂಜಿನ ಹೊದಿಕೆಯಡಿಯಲಿ
ಗುಲಾಬಿ ದಳಗಳ ಕುಸುರಿನೆಡೆಯಲಿ
ಮುಗುಳು ಮುಕ್ಕಳಿಸಿದಂತೆ ಕಂಡೆ ನಿನ್ನ ತುಟಿಯಂಚಿನಲಿ

ಹೊಂಗಿರಣ ಸುಳಿದು ಕೆಂಬಣ್ಣ ಹರಡಿ
ಹೊಚ್ಚ ಹೊಸ ಮೊಗ್ಗು ದಳದಳಿಸಿ
ಮುತ್ತಿಕ್ಕೋ ಭೃಂಗದ ಬೆನ್ನೇರಿ ಸಾಗಿ
ಎದೆ ತುಂಬಿದ ಕನಸು ಕಣ್ಣ ಬಿರಿಸೆ
ನಿನ್ನ ಛಾಯೆ ಸುಳಿವು ಸುಳಿದಾಗ
ಮುಗುಳು ಮುಕ್ಕಳಿಸಿದಂತೆ ಕಂಡೆ ನಿನ್ನ ತುಟಿಯಂಚಿನಲಿ

ಓಲಾಡೋ ಹಸಿರು ತಳಿರ ಅಂಚಿನಲಿ
ಒಪ್ಪದಿಂದ ಪೋಣಿಸಿಟ್ಟ ಆಣಿಮುತ್ತ ಸಾಲು
ಒಂದು ಮುತ್ತು ಹೇಗೋ ಪಳಕ್ಕೆಂದು ಚಿಮ್ಮಿ
ಸಪ್ತವರ್ಣ ರಂಗು ಎರಚೆ ಕಳಕ್ಕೆಂದು ಮನದಿ
ಕಣ್ತುಂಬಿ ಕಟ್ಟು ದಾಟಿ ನೆನಪು ತುಳುಕಿದಾಗ
ಮುಗುಳು ಮುಕ್ಕಳಿಸಿದಂತೆ ಕಂಡೆ ನಿನ್ನ ತುಟಿಯಂಚಿನಲಿ

ಆಸೆ ಹಾಸಿ ನಿರೀಕ್ಷೆ ಅಲ್ಲಿ ಹಾಯಾಗಿ ಮೈಚೆಲ್ಲಿ
ನಿನ್ನ ತುಟಿಯಂಚಿನಲಿ ಮುಕ್ಕಳಿಸಿದ ಮುಗುಳ ಬೆಳಕಲಿ
ಒರಗಿದೆ ನಿನ್ನೆದೆಯ ಮಿಡಿತ ನನ್ನೆದೆಯ ಬಿಸುಪಿನಲಿ
ಮಿರುಗೋ ಕಣ್ಣಹನಿಯ ಮರೆಸಿ ಸರಿಸಿ ಆಗ
ಮುಗುಳು ನನ್ನ ತುಟಿಯಂಚಿನಲ್ಲಿ ಎನ್ನ ತುಟಿಯಂಚಿನಲಿ

‍ಲೇಖಕರು avadhi

23 September, 2019

1 Comment

  1. Sarojini Padasalgi

    ಧನ್ಯವಾದಗಳು ಅವಧಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading