ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀಸೆ ಒಲಿಂಪಿಕ್ಸ್

ಮಹಿಪಾಲರೆಡ್ಡಿ ಸೇಡಂ

ಒಲಿಂಪಿಕ್ಸ್ ನಲ್ಲಿ ʻಮೀಸೆʼಗೂ ಪ್ರಶಸ್ತಿ.. ?!

ಹೌದು, ಬರ್ಲಿನ್ ಜರ್ಮನಿಯಲ್ಲಿ ನಡೆದ ಬಿಯರ್ಡ್ ಒಲಿಂಪಿಕ್ಸ್ ನಲ್ಲಿ ಉತ್ತಮವಾಗಿ ಗಡ್ಡ ಮೀಸೆ ಬೆಳೆಸಿ, ಅದಕ್ಕೊಂದು ವಿನ್ಯಾಸ ಮಾಡಿದ ಸುಮಾರು ೧೦೦ ಪುರುಷರು ವಿಶ್ವದ ನಾನಾ ಕಡೆಯಿಂದ ಭಾಗವಹಿಸಿದ್ದರು. ಇದು ʻಮೀಸೆ ವಿನ್ಯಾಸʼಕ್ಕೇ ಇರುವ ʻಪ್ರಶಸ್ತಿʼ ಅಂದರೆ ನಂಬಲೇಬೇಕು.

ಹೀಗೆ ಭಾಗಿಯಾದ ೧೦೦ ಪುರುಷರಲ್ಲಿ ಯಾರು ಉತ್ತಮ ಗಡ್ಡದ ವಿನ್ಯಾಸ ಮತ್ತು ಮೀಸೆಯ ಕೇಶ ವಿನ್ಯಾಸ ಮಾಡಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಯಾರು ಉತ್ತಮ ಮೀಸೆ ಹೊಂದಿರುತ್ತಾರೆ. ಅವರಿಗೆ ಮಾತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಅರೆಕ್ಷಣ ನಗು ಉಕ್ಕುತ್ತದೆ. ಅಲ್ಲವೇ..?

ನೆನಪಿರಲಿ, ಬಿಯರ್ಡ್ ಒಲಿಂಪಿಕ್ಸ್ ಮತ್ತು ಜರ್ಮನ್ ಬಿಯರ್ಡ್ ಚಾಂಪಿಯನ್‍ಶಿಪ್‍ಗಳಲ್ಲಿ ಭಾಗವಹಿಸಲು ನೆದರ್ ಲ್ಯಾಂಡ್, ಆಸ್ಟ್ರಿಯಾ, ಇಟಲಿ, ಸ್ವಿಡ್ಜರ್ಲ್ಯಾಂಡ್, ಇಸ್ರೇಲ್ ಹಾಗೂ ಜರ್ಮನಿಯಿಂದ ನೂರು ಜನ ʻಮೀಸೆ ಹೊತ್ತವರುʼ ಬಂದಿದ್ದರು. ಈ ಒಲಿಂಪಿಕ್ಸ್ ನಲ್ಲಿ ʻಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ʼ ಇರುತ್ತದೆ ಎಂಬುದು ವಿಶೇಷ.

ಈ ಬಿಯರ್ಡ್ ಒಲಿಂಪಿಕ್ಸ್ ಅನ್ನು ಜರ್ಮನಿಯ ಪುಲ್‍ಮ್ಯಾನ್ ಸಿಟಿಯ ವೆಸ್ಟರ್ನ್ ಥೀಮ್ ಪಾರ್ಕ್‍ನಲ್ಲಿ ಶನಿವಾರ ನಡೆಯಿತು. ʻಮೀಸೆʼ ಹೊತ್ತವರು, ಮೀಸೆ ಅಭಿಮಾನಿಗಳು, ಜರ್ಮನ್ ಮತ್ತು ಬಿಯರ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತಾರೆ. ಜಗತ್ತಿನ ಇಂತಹ ʻಮೀಸೆ ವಿನ್ಯಾಸʼಕಾರರು ಸ್ಪರ್ಧೆಗಾಗಿಯೇ ಜರ್ಮನಿಗೆ ಬರುತ್ತಾರೆ ಎಂಬುದು ವಿಶೇಷವಲ್ಲದೇ ಮತ್ತೇನು..?

ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ʻಯಾರು ಉತ್ತಮ ಮತ್ತು ಅತ್ಯುತ್ತಮ ವಿಸ್ಕರ್ಸ್ ಹೊಂದಿದ್ದಾರೆಂದು ಕಂಡುಹಿಡಿಯಲು ಜರ್ಮನಿಯಲ್ಲಿ ಸೇರುತ್ತಾರೆ. ಗಡ್ಡವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಈ ಸ್ಪರ್ಧೆಯ ಅತ್ಯಂತ ಮುಖ್ಯವಾದ ಸಂಗತಿಯೆಂಬುದು ಬೇರೆ ಹೇಳಬೇಕಿಲ್ಲ.
ʻಮೀಸೆ ವಿನ್ಯಾಸʼವೇ ಈ ಸ್ಪರ್ಧೆಗೆ ಕಾರಣ ಎಂಬುದನ್ನು ಈಸ್ಟ್ ಬವೇರಿಯನ್ ಬಿಯರ್ಡ್ ಮತ್ತು ಮೀಸೆ ಕ್ಲಬ್‍ನ ಅಧ್ಯಕ್ಷ ಕ್ರಿಶ್ಚಿಯನ್ ಫೀಚ್ಟ್ ಅವರು ಹೇಳಲು ಮರೆಯುವುದಿಲ್ಲ.

ನೆನಪಿರಲಿ, ಈ ʻಮೀಸೆ ಹೊತ್ತ ವಿನ್ಯಾಸʼದ ಕಾಂಪಿಟೇಷನ್ ನಲ್ಲಿ ಏಳು ಜನ ತೀರ್ಪುಗಾರರು ಇರುತ್ತಾರೆ. ಈ ಕ್ರೀಡಾಳುಗಳ ಗಡ್ಡ, ಮೀಸೆಯ ಉದ್ದ, ಲೆಕ್ಕಾಚಾರ ಮಾಡಿ, ವಿನ್ಯಾಸವನ್ನು ಪರಿಗಣಿಸಿ, ಅವರು ಫಲಿತಾಂಶ ಪ್ರಕಟಿಸುತ್ತಾರೆ. ‘ಮೀಸೆ ಡಾಲಿ’, ‘ವಿಸ್ಕರ್ಸ್ ಫ್ರೀಸ್ಟೈಲ್’, ‘ಫುಲ್ ಬಿಯರ್ಡ್ ನ್ಯಾಚುರಲ್ ವಿತ್ ಸ್ಟೈಲ್ಡ್ ಅಪ್ಪರ್ ಲಿಪ್’ ನಿಂದ ಹಲವಾರು ವಿಭಾಗಗಳಲ್ಲಿ ಸ್ಪರ್ಧಿಸುವುದಕ್ಕಾಗಿ ಬೇರೆ ಬೇರೆ ದೇಶಗಳಿಂದ ಬಂದಿದ್ದೇ ಈ ಕ್ರೀಡೆಯ ಹೆಚ್ಚುಗಾರಿಕೆ.

‍ಲೇಖಕರು Admin

28 October, 2021

1 Comment

  1. ರಮೇಶ ಗಬ್ಬೂರ್

    ಮೀಸೆಗೂ ಕಥೆ…. ತರವಾರಿ ಮೀಸೆ …ಸೂಪರ್ ಲೇಖನ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading