ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀರತ್ ಪಿತೂರಿ : ಶ್ರಮಜೀವಿಗಳು ಸದಾ ನೆನಪಿಸಿಕೊಳ್ಳಬೇಕಾದ ಚರಿತ್ರೆಯ ಪಾಠ

ಕೆ ಮಹಾಂತೇಶ

ಮೀರತ್ 1857 ರ ಪ್ರಥಮ ಸ್ವಾತಂತ್ರ ಸಂಗ್ರಾಮದ ಕೇಂದ್ರ ಬಿಂದು. ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಬೀಗುತ್ತಾ  ದೇಶದ ಜನರನ್ನು ತೀವ್ರವಾಗಿ ಶೋಷಣೆ ಮಾಡುತ್ತಿದ್ದ ಬ್ರಿಟಿಷ ಆಳರಸರ ಸೊಕ್ಕನ್ನಡಗಿಸಲು ಎದ್ದ ದೇಶಪ್ರೇಮಿ ಪ್ರಥಮ ಸ್ವಾತಂತ್ಯ್ರ ಹೋರಾಟಕ್ಕೆ ಕಹಳೆಯೂದಿದ್ದು ಇದೇ ಮೀರತ್ ಎಂಬ ಪುಟ್ಟ ನಗರ. ಈ ಪುಟ್ಟದಾದ ನಗರ ಆಗ ಆಂಗ್ಲರನ್ನು ಎಂತಹ  ದುಸ್ವಪ್ನವಾಗಿ ಕಾಡಿತ್ತೆಂದರೆ, ಸಿಪಾಯಿ ದಂಗೆ ಹತ್ತಿಕ್ಕಿದ ನಂತರ ಬ್ರಿಟಿಷರು ಅದನ್ನೇ ತಮ್ಮ ಸೇನೆಯ ನೆಲೆಯನ್ನಾಗಿಕೊಳ್ಳುವಷ್ಟರ ಮಟ್ಟಿಗೆ.
ಅದಾಗಿ ಸುಮಾರು ಏಳು ದಶಕದವರೆಗೂ ಆ ಸಣ್ಣದಾದ ಆದರೆ ಇಂಗೀಷರಿಗೆ ಮೊಟ್ಟಮೊದಲನೇ ಬಂಡಾಯದ ಬಿಸಿ ಮುಟ್ಟಿಸಿದ ಆ ಪಟ್ಟಣ ಶಾಂತವಾಗಿಯೇ.ಇತ್ತು. ಆದರೆ, ಮತ್ತೇ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ರಾಜದ್ರೋಹ ಅಪಾದನೆ ಮೇರೆಗೆ ಬಂಧಿಸಿದ 31 ಬಹುತೇಕ ಕಾರ್ಮಿಕ ನಾಯಕರನೊಳಗೊಂಡ ಕಮ್ಯೂನಿಷ್ಟ ನಾಯಕರನ್ನು ದೀರ್ಘ ಮತ್ತು ಅತಿ ಉದ್ದವಾದ ವಿಚಾರಣೆಗೆ ಒಳಪಡಿಸುವ ಮೂಲಕ ಮತ್ತೆ ಆ ನಗರ ಜಗತ್ತಿನ ಇತಿಹಾಸದಲ್ಲೇ ‘ಮಿರತ್ ಪಿತೂರಿ ಮೊಕ್ಕದಮೆ ವಿಚಾರಣೆ ‘ ಯೆಂದೇ ಖ್ಯಾತವಾಯಿತು.
ಕಾರ್ಮಿಕ ವರ್ಗದ ಬೆಳವಣಿಗೆ ಹಾಗೂ ಭುಗಿಲೆದ್ದ ಚಳುವಳಿಗಳು : ಅದು ಮೊದಲನೆ ಮಹಾಯುದ್ದದ ಕಾಲಘಟ್ಟ. ಭಾರತವನ್ನು ತನ್ನ ವಸಹಾತುವನ್ನಾಗಿ ಮಾಡಿಕೊಂಡಿದ್ದ ಬ್ರಿಟನ್ ಆ ಮಹಾಯುದ್ದದಲ್ಲಿ ದೇಶವನ್ನು, ಜನರನ್ನು ಅಪ್ರತ್ಯಕ್ಷವಾಗಿಯೇ ದೂಡಿತ್ತು. ಯುದ್ದದಲ್ಲಿ ಪಾಲ್ಗೊಂಡ ಸೈನಿಕರಿಗೆ ಬಟ್ಟೆ,ಆಹಾರ, ಸಮವಸ್ತ್ರ ಅನಿವಾರ್ಯವಾಗಿತ್ತು. ಅವುಗಳನ್ನು ಪೂರೈಸಲು ಭಾರತದಲ್ಲಿ ಹತ್ತಿ, ಸೆಣಬು, ಉಣ್ಣೆ, ಕಾಖರ್ಾನೆಗಳು ಸ್ಥಾಪನೆಯಾದವು. ಅವುಗಳಿಗೆ ಕಚ್ಚಾ ಸಾಮಾಗ್ರಿ ಪೂರೈಸಲು ರೈಲು, ರಸ್ತೆ, ಸೇತುವೆಗಳ ನಿಮರ್ಾಣ ಅದರ ಜೊತೆಯಲ್ಲೇ ಸಂಪರ್ಕ ಸಾಧನಗಳಾದ ದೂರಸಂಪರ್ಕ, ಅಂಚೆ, ತಂತಿ, ಸಾರಿಗೆ ಗಳನ್ನು ಆರಂಭಿಸಲಾಯಿತು.  ಪರಿಣಾಮವಾಗಿ ದೇಶದಲ್ಲಿ ಕೈಗಾರಿಕೆಗಳು ಬೆಳವಣಿಗೆ ಕಂಡವು. ಕಾಮರ್ಿಕರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿತು. 1919 ರ ಅಂಕಿ ಅಂಶಗಳು ಹೇಳುವಂತೆ ಅಂದು ದೇಶದ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ಒಟ್ಟು ಕಾರ್ಮಿಕರ ಸಂಖ್ಯೆ 1367000 ರಷ್ಟಿತ್ತು. ಅದರಲ್ಲಿ 3 ಲಕ್ಷಕ್ಕಿಂತ ಹೆಚ್ಚಿನ ಕಾರ್ಮಿಕರು ಹತ್ತಿ ಸ್ಪಿನ್ನಿಂಗ್ ಹಾಗೂ ನೇಯ್ಗೇ ಕಾರ್ಖಾನೆಗಳಲ್ಲಿ, ಕಾಟನ್ ಜಿನ್ನಿಂಗ್ನಲ್ಲಿ 2.50 ಲಕ್ಷ ಜನ, ಸೆಣಬು ಕಾರ್ಖಾನೆಯಲ್ಲಿ ಸುಮಾರು 3 ಲಕ್ಷ ಹಾಗೂ ರೇಲ್ವೆಯಲ್ಲಿ ಸುಮಾರು 1.5 ಲಕ್ಷ, ಕಲ್ಲಿದ್ದಲು ಕ್ಷೇತ್ರದಲ್ಲಿ ಸುಮಾರು 2,78 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಮತ್ತೊಂದೆಡೆ, ಯುದ್ದದ ಪರಿಣಾಮವು ನೇರವಾಗಿ ಕಾರ್ಮಿಕರ ಬದುಕಿನ ಮೇಲೆ ಉಂಟಾಗತೊಡಗಿತು. ಯುದ್ದದ  ರಕ್ಷಣಾ ವೆಚ್ಚಗಳನ್ನು ಸರಿದೂಗಿಸಲು ಬ್ರಿಟಿಷರು ಕಾರ್ಮಿಕರು ಹಾಗೂ ಜನಸಾಮಾನ್ಯರ ಮೇಲೆ ಭಾರೀ ಪ್ರಮಾಣದಲ್ಲಿ ತೆರಿಗೆಗಳನ್ನು ಹೇರಿದರು. ಬೆಲೆಗಳು ಗಗನಕ್ಕೇರಿದವು. ಇದರ ವಿರುದ್ದ ಭಾರತದ ಕಾರ್ಮಿಕ ವರ್ಗ ಒಂದೆಡೆ ವಸಹಾತು ಶಾಹಿ ಆಡಳಿತದಿಂದ ವಿಮೋಚನೆಗಾಗಿ ಮತ್ತೊಂದೆಡೆ ತನ್ನ ಮೇಲೆ ವಿದೇಶಿ  ಬ್ರಿಟಿಷರು ಹಾಗೂ ದೇಶಿಯ ಬಂಡವಾಳಿಗರು ನಡೆಸುತ್ತಿದ್ದ ತೀವ್ರ ರೀತಿಯ ಶೋಷಣೆ ಹಾಗೂ ದಬ್ಬಾಳಿಕೆ ವಿರುದ್ದ ಹೋರಾಟಕ್ಕಿಳಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. 1924-29 ರ ನಡುವಿನ ಅವಧಿಯಲ್ಲಿ ವಿಶೇಷವಾಗಿ ಅಲಹಬಾದ್, ಕೊಲ್ಕತ್ತಾ, ಬಾಂಬೆ, ದೆಹಲಿ,ಮದ್ರಾಸ್ ಮೊದಲಾದ ಕಡೆಗಳಲ್ಲಿನ ಹತ್ತಿ, ಸೆಣಬು,ರೇಲ್ವೆ, ಕಲ್ಲಿದ್ದಲು ಗಣಿ ಮೊದಲಾದ ನೂರಾರು ಉಧ್ಯಮಗಳ ಲಕ್ಷಾಂತರ ಕಾರ್ಮಿಕರು ಬೀದಿಗಳಿದು ನಿತ್ಯ ಪ್ರತಿಭಟನೆ ನಡೆಸಿದರು.

ಅಲ್ಲದೇ ಅದೇ ವೇಳೆಗೆ ರಷ್ಯಾದಲ್ಲಿ 1917ರಲ್ಲಿ ನಡೆದ ದುಡಿಯುವ ವರ್ಗದ ಕ್ರಾಂತಿ ಮತ್ತು ಸಮಾಜವಾದಿ ಸಮಾಜ ಸ್ಥಾಪನೆಯು ಭಾರತೀಯ ದುಡಿಯುವ ವರ್ಗಕ್ಕೊಂದು ಸಂಚಲನ ಮೂಡಿಸಿತು. ಅಲ್ಲದೇ ಹೂಸ ಸಮಾಜದ ಕನಸನ್ನು ಚಿಗುರಿಸಿತು. ಇದರ ಪರಿಣಾಮವಾಗಿಯೇ ಭಾರತದ ಸ್ವಾಂತಂತ್ರ್ಯ ಚಳುವಳಿಯ ಹೋರಾಟದ ಸ್ವರೂಪವೇ ಬದಲಾಗತೊಡಗಿತು. ಬಾಂಬೆ ಹತ್ತಿ ಗಿರಣಿ ಕಾರ್ಮಿಕರು ಬಾಲಗಂಗಾಧರ ತಿಲಕರ ಮತ್ತಿತರ ಕಾರ್ಮಿಕ ನಾಯಕರ ನೇತೃತ್ವದಲ್ಲಿ ಈ ಅವಧಿಯಲ್ಲಿ ನಡೆಸಿದ ಹತ್ತಾರು ದಿನಗಳ ನಿರ್ಣಾಯಕ ಹೋರಾಟಗಳು ಮತ್ತು ಅಲ್ಲಿ ನಡೆದ ಗೋಲಿಬಾರ್ ನಿಂದಾಗಿ ಹುತಾತ್ಮರಾದ ಹತ್ತಾರು ಕಾರ್ಮಿಕರ ಬಲಿದಾನಗಳು ಇಲ್ಲಿ ಉಲ್ಲೇಖನೀಯವಾದುದು. ಈ ಸರಣಿ ಹೋರಾಟಗಳ ಎಲ್ಲಾ ಪರಿಣಾಮಗಳು ಒಂದು ಅಖಿಲ ಭಾರತ ಮಟ್ಟದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಉದಯಕ್ಕೆ ನಾಂದಿಯಾದವು.
ಇದು ಬಂಡವಾಳಶಾಹಿಯ ತೌರೂರಾದ ಬ್ರಿಟನ್ಗೆ ಎಚ್ಚರಿಕೆ ಗಂಟೆಯಾಯಿತು. ಅವರ ಹೆದರಿಕೆಗೆ ಮತ್ತೂ ಕಾರಣವಾಗಿದ್ದು ಈ ಎಲ್ಲಾ ಕಾರ್ಮಿಕ ಚಳುವಳಿಯ ಹಿಂದಿದ್ದ ನಾಯಕರಲ್ಲಿ ಬಹುತೇಕರು ಆಗಲೇ ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿದ್ದವರು.! ಹಾಗಾಗಿ ಮತ್ತೊಂದು ಬಂಡಾಯ ಏಳುವ ಮುನ್ನವೇ ಅದನ್ನು ಚಿವುಟಲು ಅವರು ಕಾರ್ಯವ್ಯೂಹವೂಂದನ್ನು ಹೆಣೆದಿದ್ದರು. ಬ್ರಿಟಿಷ್ ರಾಜದ್ರೋಹದ ಅಪಾದನೆ ಹೊರಿಸಿ 31 ಕಾಮರ್ಿಕ ನಾಯಕರ ಮೇಲೆ ಸುಳ್ಳು ಮೊಕದ್ದಮೆ ಹೂಡಿದರು. ಮಾತ್ರವಲ್ಲ ಬಂಧಿಸಲಾದ ನಾಯಕರಲ್ಲರಿಗೂ ಶಿಕ್ಷಗೆ ಗುರಿಪಡಿಸುವ ಪಿತೂರಿಯಿಂದಲೇ ಈ ಪ್ರಕರಣದ ವಿಚಾರಣೆಯನ್ನು ದೆಹಲಿಯಿಂದ ಕೇವಲ ನೂರು ಮೈಲಿ ದೂರವಿದ್ದ ಮತ್ತು ಎಲ್ಲಾ ಪ್ರತಿಭಟನಾ ಸ್ಥಳಗಳಿಂದ ದೂವಿದ್ದ ಹಾಗೂ ತಮ್ಮ ಸೇನಾ ನೆಲೆಯಾದ ಮೀರತ್ ನಲ್ಲೇ ಸುಮಾರು ನಾಲ್ಕುವರೆ ವರ್ಷಗಳಷ್ಟು ದೀರ್ಘ ಕಾಲ ನಡೆಸಿದರು.ಮೀರತ್ ಪಿತೂರಿ ಪ್ರಕರಣದ ಅಪಾಧಿತರು1920 ಮಾರ್ಚ 20 ರಂದು ಇದ್ದಕ್ಕಿದ್ದಂತೆ 31 ನಾಯಕರುಗಳನ್ನು ಬ್ರಿಟಿಷರು ದೇಶಾದ್ಯಂತ ಬಂಧಿಸಿದರು.
ಇವರಲ್ಲಿ ಬೊಂಬಾಯಿಯ 13 ಜನ, ಕೊಲ್ಕತ್ತಾದಲ್ಲಿ 10 ಜನ ಉತ್ತರಪ್ರದೇಶದಲ್ಲಿ 5, ಪಂಜಾಬ್ನಿಂದ 3 ಹಾಗೂ 3 ಜನ ಭಾರತದಲ್ಲಿದ್ದ ಬ್ರಿಟಿಷ್ ನಾಗರೀಕರು ಅದರಲ್ಲಿ ಒಬ್ಬ ಪತ್ರಕರ್ತ ಸೇರಿದ್ದರು. ಬಂಧಿಸಲ್ಪಟ್ಟವರಲ್ಲಿ ಬಹುತೇಕರು ಆಗಲೇ ಜನಪ್ರಿಯ ಕಾರ್ಮಿಕ ನಾಯಕರಾಗಿದ್ದರು.ಮತ್ತು ಅವರೆಲ್ಲರೂ ದೇಶದಲ್ಲಿ ಕ್ರೀಯಾಶೀಲವಾಗಿದ್ದ ಕಾರ್ಮಿಕ ಹಾಗೂ ರೈತ ಆಂದೋಲನವನ್ನು ಸಂಘಟಿಸುತ್ತಾ ಬ್ರಿಟಿಷರ ನಿದ್ದೆಗೆಡಿಸಿದ್ದರು. ಅವರೆಂದರೆ, ಎಐಟಿಯುಸಿ ಉಪಾಧ್ಯಕ್ಷರು ಹಾಗೂ ಬಂಗಾಳದಲ್ಲಿ ಕಾರ್ಮಿಕ ಹಾಗೂ ರೈತ ಪಕ್ಷದ ನಾಯಕ ಮತ್ತು ಗಣಶಕ್ತಿ ಪತ್ರಿಕೆ ಸಂಪಾದಕ ಮುಜಾಫ್ರ ಅಹಮ್ಮದ್,ಎಐಟಿಯುಸಿ ಸಹಾಯಕ ಕಾರ್ಯದರ್ಶಿಯಾಗಿದ್ದ ಮತ್ತು ಮುಂಬೈ ಹತ್ತಿಗಿರಣಿ ಕಾಮಗಾರ್ ಯೂನಿಯನ್ ಕಾರ್ಯದರ್ಶಿ ಎಸ್.ಎ ಡಾಂಗೇ,(ಕಾನ್ಪೂರ ಪಿತೂರಿಯಲ್ಲೂ ಇವರನ್ನು ಸೇರಿಸಲಾಗಿತ್ತು) ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರೂ ಹಾಗೂ ರೇಲ್ವೆ ಅಂಚೆ ನೌಕರರ ಮುಖಂಡರಾದ ಕೆ .ಎನ್ ಜೋಗಳೇಕರ್, ಎಐಟಿಯುಸಿ ಮಾಜಿ ಸಹಾಯಕ ಕಾರ್ಯದರ್ಶಿ ಎಸ್.ವಿ ಘಾಟೆ, ಎಐಟಿಯುಸಿ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರೂ ಆದ ಡಿ.ಆರ್. ತೇಂಗಡಿ, ಕಿಶೋರಿಲಾಲ್ ಘೋಶ್ ಕಾರ್ಯದರ್ಶಿ ಬೆಂಗಾಳ ಟ್ರೇಡ್ ಯೂನಿಯನ್ ಫೆಡರೇಷನ್, ಎಸ್,ಎಚ್, ಜಾಬ್ವಾಲ್,ರೇಲ್ವೆ ಹಾಗೂ ಬಾಂಬೆ ಹತ್ತಿಗಿರಣಿ ಕಾಮಗಾರ್ ಯೂನಿಯನ್, ಶೌಕತ್ ಉನ್ಮಾನಿ, ಇವರು ಎಂ.ಎನ್ ರಾಯ್ ಜೊತೆ ಸಂಪರ್ಕ ಇದ್ದವರು ಮತ್ತು ಕಾನ್ಪೂರ ಮೊಕ್ಕದ್ದಮೆ ಅಪಾದಿತರು.ತಾಷ್ಕೆಂಟ್, ಮಾಸ್ಕೋ ಇತರೆ ಪ್ರದೇಶಗಳಲ್ಲಿ ಸಂಚರಿಸಿ ಭಾರತಕ್ಕೆ 1924 ರಂದು ಬಂದಾಗ ಈ ಪ್ರಕರಣದಲ್ಲೂ ಇವರನ್ನು ಸೇರಿಸಿ ಬಂಧಿಸಲಾಯಿತು.
ಎಸ್.ಎಸ್ ಮೀರ್ಜಾ ಗಿರಣಿ ಕಾಮಗಾರ್ಯೂನಿಯನ್ ಅಸಿಸ್ಟೆಂಟ್ ಸೆಕ್ರಟರಿ, ಪಿ.ಸಿ ಜೋಷಿ.  ಸೆಕ್ರಟರಿ ಯೂನೈಟೆಡ್ ಪ್ರೋಗೇವ್ ವರ್ಕರ್ಸ್, ಪೀಸೆಂಟ್ ಪಾರ್ಟರ್, ಗೋಪಾಲ ಬಾಸಾಕ್, ಸೋಷಿಯಲಿಸ್ಟ್ ಯೂತ್ ಲೀಗ್ ಪ್ರೆಸಿಡೆಂಟ್, ಎಂ.ಎ ಮಸೀದ್, ಪಂಜಾಬ್ ಕೀರ್ತಿ ಕಿಸಾನ್ ಸೆಕ್ರಟರಿ, ಆರ್.ಎಸ್ ನಿಂಬಾಕರ್, ಬಾಂಬೆ ಕಾಂಗ್ರೆಸ್ ಹಾಗೂ ಆಲ್ ಇಂಡಿಯಾ ವರ್ಕರ್ಸ್,ಪೀಸೆಂಟ್ ಪಾರ್ಟಿ ಸೆಕ್ರಟರಿ, ವಿಶ್ವನಾಥ್ ಮುಖರ್ಜಿ, ಆದ್ಯಕ್ಷರು, ಯೂನೈಟೆಡ್ ಪ್ರೋಗೇವ್ ವರ್ಕರ್ಸ್,ಪೀಸೆಂಟ್ ಪಾರ್ಟಿ,  ರಾಧರಾಮನ್ ಮಿತ್ರಾ, ಸೆಕ್ರಟರಿ ಬೆಂಗಾಲ ಜೂಟ್ ಯೂನಿಯನ್, ಧರಣಿ ಗೋಸಾಮಿ ಅಸಿಸ್ಟೆಂಟ್ ಸೆಕ್ರಟರಿ ಯೂನೈಟೆಡ್ ಪ್ರೋಗೇವ್ ವರ್ಕರ್ಸ್,ಪೀಸೆಂಟ್ ಪಾರ್ಟಿ,  ಗೋಪೆನ್ ಚಕ್ರವರ್ತಿ ಈಸ್ಟ್ ಇಂಡಿಯಾ ರೇಲ್ವೆ ವರ್ಕರ್ಸ್ ಯೂನಿಯನ್ ಮುಖಂಡರು, ಸ್ಯಾಮುಯಲ್ ಹುಡಾ, ಬೆಂಗಾಲ್ ಟ್ರಾನ್ಸ್ಫರ್ಟ ವರ್ಕರ್ಸ್ ಯೂನಿಯನ್ ಸೆಕ್ರಟರಿ, ಸೋಹನ್ ಸಿಂಗ್ ಜೋಸ್, ಆಲ್ ಇಂಡಿಯಾ ವರ್ಕರ್ಸ್,ಪೀಸೆಂಟ್ ಪಾರ್ಟಿ ಪ್ರಥಮ ಸಮ್ಮೇಳನದ ಅಧ್ಯಕ್ಷರು, ಗೌರಿ ಶಂಕರ್, ಯೂನೈಟೆಡ್ ಪ್ರೋಗೇವ್ ವರ್ಕರ್ಸ್, ಪೀಸೆಂಟ್ ಪಾರ್ಟಿ ನಾಯಕರು, ಗಂಗಾಧರ್ ಅಧಿಕಾರಿ, ಆಗಷ್ಟೇ ಜರ್ಮನಿಯಿಂದ ಹಿಂದಿರುಗಿದ್ದ ಯುವ ಮಾಕ್ರ್ಸವಾದಿ ಹಾಗೂ ಬಾಂಬೆ ಯಿಂದ ಪ್ರಕಟವಾಗುತ್ತಿದ್ದ ‘ಸ್ಪಾರ್ಕ’ ಎಂಬ ಸಮಾಜವಾದಿ ಪತ್ರಿಕೆಯ ಅಂಕಣಕಾರ, ಸಿಬ್ನಾಥ್ ಬ್ಯಾನರ್ಜಿ,ಬೆಂಗಾಳ ಜೂಟ್ ಯೂನಿಯನ್ ಪೆಸಿಡೆಂಟ್, ಅಜೋಧ್ ಪ್ರಸಾದ್, ಯೂನೈಟೆಡ್ ಪ್ರೋಗೇವ್ ವರ್ಕರ್ಸ್,ಪೀಸೆಂಟ್ ಪಾರ್ಟಿ ನಾಯಕರು, ಕೇದಾರನಾಥ್ ಸೆಹಗಲ್ ಪಂಜಾಬ್ ಕಾಂಗ್ರೆಸ್ ಕಮಿಟಿ ಪ್ರೆಸಿಡೆಂಟ್ ಮತ್ತು ಅಲ್ ಇಂಡಿಯಾ ಯೂತ್ ಲೀಗ್ ಮುಖಂಡರು, ಅಜರ್ನ್ ಆತ್ಮರಾಮ್ ಆಳ್ವ, ಪ್ರೆಸಿಡೆಂಟ್,ಬಾಂಬೆ ಗಿರಣಿ ಕಾಮಗಾರ ಯೂನಿಯನ್, ಗೋಬಿಂದಾ ರಾಮಚಂದ್ರ ಕಾಸ್ಲೇ, ಲೀಡರ್, ಗಿರಣಿ ಕಾಮಗಾರ ಯೂನಿಯನ್, ಗೋಬಿಂದಾ, ಎಂ,ಜಿ, ದೇಸಾಯಿ, ‘ಸ್ಪಾರ್ಕ’ ಪತ್ರಿಕೆ ಎಡಿಟಾರ್, ಲಕ್ಷ್ಮಣ್ರಾವ್ ಖಂಡೋಮಾ ಜರೀಯಾ ಮುನ್ಸಿಪಲ್ ವರ್ಕರ್ಸ್ ಯೂನಿಯನ್ ಸಂಘಟಕ, ಇನ್ನೂ ಬ್ರಿಟನ್ ಕಮ್ಯೂನಿಸ್ಟ್ ಪಾಟರ್ಿ ಸದಸ್ಯರಾದ ಹಾಗೂ ಬಾಂಬೆ ಹತ್ತಿಗಿರಣಿ, ರೇಲ್ವೆ ಮತ್ತಿತರೆ ಯೂನಿಯನ್ನಲ್ಲಿ ಸಕ್ರಿಯಾವಾಗಿದ್ದ ಬೆಂಜಮಿನ್ ಪ್ರಾನ್ಸಿಸ್ ಬೆಂಡ್ಲೀ, ಬ್ರಿಟನ್ ಕಮ್ಯೂನಿಸ್ಟ್ ಪಾಟರ್ಿ ಸದಸ್ಯ ಹಾಗೂ ಎಐಟಿಯುಸಿ ಕಾರ್ಯಕರ್ತ ಫೀಲೀಪ್ ಸ್ಪಾರ್ಟ, ಹಾಗೂ ಬ್ರಿಟನ್ ಪತ್ರಕರ್ತ ಹಾಗೂ ‘ನ್ಯೂ ಸ್ಪಾರ್ಕ’ ಪತ್ರಿಕೆ ಸಂಪಾದಕರಾದ ಹೂಗ್ ಲೇಸ್ಟರ್ ಹುಟ್ಚಿನ್ಸನ್ ಮೀರತ್ ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಿ ಬ್ರಿಟಿಷ್ ಸಕರ್ಾರ ಬಂಧಿಸಿತು.
ಇದಾದ ನಂತರ ಇದರಲ್ಲಿ ಮತ್ತೊಬ್ಬ ಆರೋಪಿ ಹೆಸರನ್ನು ಸೇರಿಸಲಾಯಿತು. ಆವರೇ ಅಮೀರ್ ಹೈದರ್ ಖಾನ್. ಬ್ರೀಟಿಷ್ ಪೊಲೀಸರು ತನ್ನನ್ನು ಬಂಧಿಸುವ ವಾಸನೆ ಅರಿತ ಅವರು ತಪ್ಪಿಸಿಕೊಂಡು ಯೋರೋಪ್ಗ್ ಹೋಗಿ ಕೂಡಲೇ ಹಿಂತಿರುಗಿ ಮದ್ರಾಸ್ನಲ್ಲಿ ಕಮ್ಯೂನಿಸ್ಟ್ ಚಟುವಟಿಕೆಯಲ್ಲಿ ಸಕ್ರಿಯರಾದರು.ಆದರೆ ಮೀರತ್ ಪ್ರಕರಣದ ಕೊನೆ ಹಂತದಲ್ಲಿರುವಾಗ ಇವರನ್ನು ಪತ್ತೆ ಮಾಡಿ ಮದಾಸ್ನಲ್ಲೇ ವಿಚಾರಣೆ ನಡೆಸಿ ಎರಡು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಯಿತು.
ಭಾರೀ ವೆಚ್ಚದ ಹಾಗೂ ದೀರ್ಘ ವಿಚಾರಣಾ ಪ್ರಕರಣ : ಮೀರತ್ ಪಿತೂರಿ ಪ್ರಕರಣವು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೀರ್ಘ ಕಾಲ ವಿಚಾರಣೆ ನಡೆಸಿದ ಪ್ರಕರಣ ಮತ್ತು ಹಲವು ವಿಶೇಷಗಳೊಂದಿಗೆ ಪ್ರಸಿದ್ದಿ ಪಡೆಯಿತು. ಒಟ್ಟಾರೆ ಈ ಪ್ರಕರಣದ ವಿಚಾರಣೆಯು 1929 ರ ಜೂನ್ 12 ರಂದು ಆರಂಭಗೊಂಡು 1933 ಆಗಸ್ಟ್ 3 ರಂದು ಅಲಹಬಾದ್ ಹೈಕೋರ್ಟ್ನ ಲ್ಲಿ ಮುಕ್ತಾಯಗೊಂಡಿತು. ವಿಚಾರಣೆ ಅವಧಿ ಒಟ್ಟು ನಾಲ್ಕುವರೆ ವರ್ಷ, ಇದಲ್ಲದೆ ಈ ಪ್ರಕರಣದಲ್ಲಿ 25 ಸಂಪುಟಗಳ ಒಟ್ಟು 3500 ಪ್ರಾಸಿಕ್ಯೂಸನ್ ಪರ ಹಾಗೂ 1500 ಆರೋಪಿಗಳ ಪರವಾದ ಸಾಕ್ಷ್ಯಧಾರಗಳನ್ನು ಕೋರ್ಟ ಪರೀಶಿಲಿಸಿತು. 320 ಸಾಕ್ಷಿಗಳನ್ನು ವಿಚಾರಣೆ ನಡೆಸಿತು. ಈ ಪ್ರಕರಣದಲ್ಲಿ ನೀಡಿದ ತೀರ್ಪಿನ ಒಟ್ಟು ಪುಟಗಳ ಸಂಖ್ಯೆ 676 !
ಇದಕ್ಕಾಗಿ ಸರ್ಕಾರ ಖಾಸಗೀ ಬ್ರಿಟಿಷ್ ಬ್ಯಾರಿಸ್ಟ್ರನ್ನು ಭಾರೀ ಮೊತ್ತದ ಫೀಜು ನೀಡಿ ನಿಯೋಜಿಸಿತ್ತು. ಅಂದಿನ ಕಾಲಕ್ಕೆ ಸರ್ಕಾರ ವಿಚಾರಣೆಗಾಗಿ ಖರ್ಚು ಮಾಡಿದ ಒಟ್ಟು ಮೊತ್ತ 16 ಲಕ್ಷ ರುಪಾಯಿಗಳು! ಇನ್ನೂ ಇದರ ವಿಚಾರಣೆ ಹಂತ ನೋಡುವುದಾದರೆ, ಪ್ರಕರಣದ ಪಾಥಮಿಕ ತನಿಖೆಯನ್ನೇ ಮಾಡಲು ಮ್ಯಾಜಿಸ್ಟ್ರೇಟ್ ಏಳು ತಿಂಗಳು, ಪ್ರಾಸೀಕ್ಯೂಸನ್ ಪರ ಸಾಕ್ಷಿಗಳನ್ನು ಹಾಜರು ಪಡಿಸಲು ಹದಿಮೂರು ತಿಂಗಳು, ಆರೋಪಿಗಳ ಹೇಳಿಕೆ ಪಡೆಯಲು 10 ತಿಂಗಳು, ಆರೋಪಿಗಳ ಪರವಾದಕ್ಕೆ  ಸುಮಾರು ಎರಡು ತಿಂಗಳು ಮತ್ತು ವಾದ ಪ್ರತಿವಾದಗಳಿಗೆ ನಾಲ್ಕುವರೆ ತಿಂಗಳುಗಳು ಬೇಕಾದವು. ಇದಾದ ನಂತರ ಪ್ರಕರಣದ ತೀರ್ಪು ಪ್ರಕಟಿಸಲು ನ್ಯಾಯಧೀಶರು ತೆಗೆದುಕೊಂಡ ಕಾಲವಧಿ ಐದು ತಿಂಗಳು ! ನಂತರವಷ್ಟೇ 1933 ಜನವರಿ 14 ರಂದು ತೀಪರ್ು  ಪ್ರಕಟಿಸಿ 27 ಜನರಿಗೆ ಜೀವಾವಧಿಯಿಂದ ಮೂರು ವರ್ಷಗಳ ವರೆಗೆ ಶಿಕ್ಷೆ ನೀಡಲಾಯಿತು ಮತ್ತು ಮೂವರನ್ನು ಬಿಡುಗಡೆ ಮಾಡಲಾಯಿತು ಮತ್ತೆ ಒಬ್ಬ ಆರೋಪಿಯಾದ ಡಿ.ಆರ್. ತೇಂಗಡಿ, ವಿಚಾರಣೆ ಹಂತದಲ್ಲೇ ಅಸು ನೀಗಿದ್ದರು.
ಇದರ ವಿರುದ್ದ ಕೊನೆಯ ಮೇಲ್ಮನವಿಯನ್ನು 1933 ಮಾರ್ಚ 17 ರಂದು ಸಲ್ಲಿಸಲಾಯಿತು. ಅಷ್ಟೊತ್ತಿಗಾಗಲೇ ಸರ್ಕಾರ ಮಿರತ್ ಪ್ರಕರಣವನ್ನು ನಿರ್ವಹಣೆ ಮಾಡುತ್ತಿದ್ದ ಕ್ರಮದ ವಿರುದ್ದ ಜಗತ್ತಿನಾಧ್ಯಂತ ಪ್ರತಿಭಟನೆಗಳು ಎದ್ದಿದ್ದವು. ಅಲ್ಲದೆ ಬ್ರಿಟನ್ನಲ್ಲಿ ಹಾಗೂ ದೇಶದ ಹಲವಡೆ ಮೀರತ್ ಆರೋಪಿಗಳ ರಕ್ಷಣೆಗಾಗಿ ಸೌಹಾರ್ಧ ಸಮಿತಿಗಳು ರಚನೆಯಾಗಿ ಹಣ ಸಂಗ್ರಹ ಹಾಗೂ ನ್ಯಾಯವಾದಿಗಳ ನೇಮಕ ಇತ್ಯಾಧಿ ಕೆಲಸಗಳು ತೀವ್ರಗತಿಯಲ್ಲಿ ನಡೆದು ಸರ್ಕಾರಕ್ಕೆ ಕಿರಿಕಿರಿ ಉಂಟಾಗಿತ್ತು. ಈ ಎಲ್ಲಾ  ಒತ್ತಡದಿಂದಾಗಿ ಹೈಕೋರ್ಟ  ವಿಚಾರಣೆಯನ್ನು 1933 ಏಪ್ರಿಲ್ 10 ಕ್ಕೆ ನಿಗದಿ ಪಡಿಸಿತ್ತು. ಆದರೆ ಆ ನಂತರ ಧೀರ್ಘ ಕಾಲದ ರಜೆ ಆರಂಭಗೊಳ್ಳುವುದರಿಂದ ಅಂತಿಮ ವಿಚಾರಣೆಯನ್ನು ರಜೆಯ ನಂತರವೇ ನಡೆಸುವಂತೆ ಆರೋಪಿಗಳ ಪರ ಮನವಿ ಮಾಡಲಾಯಿತು. ಅದರಂತೆ ಜುಲೈ 24 1933 ರಂದು ಆರಂಭಗೊಂಡ ಪ್ರಕರಣದ ವಾದಗಳು ನಿರಂತವಾಗಿ ಎಂಟು ದಿನಗಳ ಕಾಲ ನಡೆದು ಆಗಸ್ಟ್ 2,1933 ರಂದು ಮುಕ್ತಾಯಗೊಂಡಿತು. ಅಂತಿಮವಾಗಿ 1933 ಆಗಸ್ಟ್ 3 ರಂದು ಅಲಹಾಬಾದ್ ನಾಯಲಯದ ಮುಖ್ಯ ನ್ಯಾಯಧೀಶರು ಮೀರತ್ ಪ್ರಕರಣದ ಅಂತಿಮ ತೀಪರ್ು ಪ್ರಕಟಿಸಿ 27 ಜನರಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕಡಿಮೆಗೊಳಿಸಿದರು.
ಸಂಘಟಿತ ರಾಜಕೀಯಕೆ ಅಡಿಪಾಯಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಮತ್ತು ಶಿಕ್ಷೆಗೊಳಗಾದ ನಾಯಕರ ಮೇಲೆ ಬ್ರಿಟಿಷರು ಹಲವು ಅಪಾದನೆಗಳನ್ನು  ಹೊರಿಸಿದ್ದರು.
ಅವುಗಳಲ್ಲಿ  ಪ್ರಮುಖವಾದವುಗಳೆಂದರೆ, ದೇಶದಲ್ಲಿ ಕಮ್ಯೂನಿಷ್ಟ್ ಚಟುವಟಿಕೆಗಳನ್ನು ನಡೆಸುತ್ತಿರುವುದು ಮತ್ತು ಅದಕ್ಕೆ ಹೂರ ದೇಶಗಳ ಸಹಾಯ ಪಡೆಯುತ್ತಿರುವುದು, ಕಾರ್ಮಿಕ ಸಂಘಗಳನ್ನು ರಚಿಸಿ ಸರ್ಕಾರದ ವಿರುದ್ದ ಚಳುವಳಿಗಳನ್ನು ಪ್ರಚೋಧಿಸುತ್ತಿರುವುದು ಮತ್ತು ಬ್ರಿಟನ್ ರಾಜರ ವಿರುದ್ದ ರಾಜದ್ರೋಹ ಸಂಚಿನಲ್ಲಿ ಭಾಗಿಯಾಗಿರುವುದು, ಮೊದಲಾದವುಗಳು. ಭಾರತದಲ್ಲಿ ಅವತ್ತಿನ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಮುಖ್ಯಧಾರೆಯಿಂದ ಕಮ್ಯೂನಿಸ್ಟರನ್ನು ಹೂರಗಿಡುವ ಭಾಗವಾಗಿಯೇ ಬ್ರಿಟಿಷರು ಈ ಮೀರತ್ ಪ್ರಕರಣವನ್ನು ಹೆಣೆದು ಅದರಲ್ಲಿ ಕಾರ್ಮಿಕ-ರೈತ ಚಳುವಳಿಯಲ್ಲಿ ತೊಡಗಿಕೊಂಡಿದ್ದ ಪ್ರಮುಖ ನಾಯಕರನ್ನು ಅವರು ಆರೋಪಿಗಳನ್ನಾಗಿಸಿ ಜೈಲಿಗೆ ದೂಡಿದ್ದರು. ಮಾತ್ರವಲ್ಲ ಅದಕ್ಕಾಗಿ ಶಾಸನ ಸಭೆಯಲ್ಲಿ 1929 ರ ಏಪ್ರಿಲ್ನಲ್ಲಿ ಕಾರ್ಮಿಕ ವಿವಾದಗಳ ಮಸೂದೆ ಹಾಗೂ ಸಾರ್ವಜನಿಕ ಸಂರಕ್ಷಣಾ ಮಸೂದೆಗಳನ್ನು ಮಂಡಿಸಿದ್ದರು. ಇದನ್ನು ವಿರೋಧಿಸಿಯೇ ಮತ್ತೊಂದು ಹೋರಾಟದ ಮಜಲನ್ನು ಆರಂಭಿಸಿದ್ದ ಭಗತ್ಸಿಂಗ್,ರಾಜಗುರು ಹಾಗೂ ಸುಖದೇವ್ ಪಂಜಾಬ್ ಶಾಸನ ಸಭೆಯಲ್ಲಿ ಕಿವುಡು ಸಕರ್ಾರವನ್ನು ಎಚ್ಚರಿಸಲು ‘ಬಾಂಬು’ಗಳನ್ನು ಹಾಕಿ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂಬ ಮೈನವೀರೇಳುವ ಘೋಷಣೆಗಳನ್ನು ಕೂಗುತ್ತಾ ಸ್ವಯಂಬಂಧನಕ್ಕೊಳಗಾಗಿದ್ದರು.
ಆದರೆ ಬ್ರಿಟಷರು ಭಗತ್ಸಿಂಗ್ ಮತ್ತು ಆತನ ಸಂಗಾತಿಗಳನ್ನು ಗಲ್ಲಿಗೇರಿಸಿ ಮತ್ತು ಮೀರತ್ ಆಪಾಧಿತರನ್ನು ಜೈಲಿಗೆ ತಳ್ಳಿ ಎದ್ದು ಬರುತ್ತಿದ್ದ ಕ್ರಾಂತಿಕಾರಿ ಚಳುವಳಿಯನ್ನು ಹತ್ತಿಕ್ಕಲು ನೂರಾರು ಕಸರತ್ತುಗಳನ್ನು ನಡೆಸಿದರು. ಆದರೆ ಮೀರತ್ ಪ್ರಕರಣದ ನಂತರ ಭಾರತದ ಸ್ವಾತಂತ್ರ್ಯದ ಚಳುವಳಿಯ ಸ್ವರೂಪವೇ ಬದಲಾಗಿ ಕ್ರಾಂತಿಕಾರಿ ಆಂದೋಲನದ ಪ್ರವಾಹಗಳೇ ತೊರೆಯಾಗಿ, ನದಿಯಾಗಿ ಸಾಗರೋಪಾದಿಯಲ್ಲಿ ಹರಿದು ಬಂದು ಬ್ರಿಟಿಷರ ಕನಸುಗಳನ್ನು ನುಚ್ಚು ನೂರು ಮಾಡಿದವು. ಮಾತ್ರವಲ್ಲ ಮೀರತ್ ಪ್ರಕರಣ ಹಾಗೂ ಕ್ರಾಂತಿಕಾರಿ ಚಳುವಳಿ ನಡೆಸಿ ಶಿಕ್ಷೆ ಅನುಭವಿಸಿ ಹೂರಬಂದ ಬಹುತೇಕ ನಾಯಕರೆಲ್ಲರೂ ಮತ್ತೆ ಜನ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು  ಆಳರಸರ ನಿದ್ದೆಗೆಡಿಸಿದರು.ಈ ಪ್ರಕರಣದ ಬಗ್ಗೆ ದೇಶ ಕಂಡ ಅತ್ಯಂತ ಸಮರಶೀಲ ಕಾಮರ್ಿಕ ನಾಯಕ ಹಾಗೂ ಮಹಾರಾಷ್ಟ್ರದ ಪುಣೆಯ ವಾಲರ್ಿ ಗುಡ್ಡುಗಾಡು ಆದಿವಾಸಿಗಳನ್ನು ‘ಗೋದು ತಾಯಿ ‘ ಯೊಂದಿಗೆ ಸೇರಿ ಬ್ರಿಟಿಷರ ವಿರುದ್ದ ನಡೆಸಿದ ಕ್ರಾಂತಿಕಾರಿ ಚಳುವಳಿ ರುವಾರಿ ಕಾಮ್ರೇಡ್ ಬಿ.ಟಿ.ರಣದೀವೆ ಹೀಗೆ ಹೇಳಿದ್ದರು.  ‘ಭಾರತದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹಾಗೂ ರಾಜಕೀಯ ಕೆಲಸವನ್ನು ರೈತ-ಕಾಮರ್ಿಕ ಹಾಗೂ ಯುವಜನರ ನಡುವೆ ಮಾಡಲು ಕಮ್ಯೂನಿಸ್ಟರಿಗೆ ಮೀರತ್ ಪ್ರಕರಣ ಒಂದು ಕಾಣಿಕೆಯಾಯಿತು. ಭಾರತದಲ್ಲಿ ಒಂದು ಸಂಘಟಿತ ಕಮ್ಯೂನಿಸ್ಟ್ ಚಳುವಳಿಗೆ ಆನಂತರದ ಸಿಪಿಐ ಸ್ಥಾಪನೆಗೆ ಮೀರತ್ ಪ್ರಕರಣ ಅಡಿಗಲ್ಲಾಯಿತು.’ ಯಾಕೆಂದರೆ ಮೀರತ್ ಪ್ರಕರಣದ ನಂತರವಷ್ಟೇ ಸಿಪಿಐನ ಮೊದಲ ಅಖಿಲ ಭಾರತ ಕೇಂದ್ರ ಸ್ಥಾಪನೆಯಾಗಿದ್ದು.
ವಸಹಾತುಶಾಹಿ ವಿರುದ್ದ ನಡೆದ ವಿಮೋಚನಾ ಹೋರಾಟದಲ್ಲಿ ದೇಶದೆಲ್ಲೆಡೆ ಸಾವಿರಾರು ರೈತ-ಕಾಮರ್ೀಕ ದೇಶಪ್ರೇಮಿ ಆಂದೋಲನಗಳು ಶತಮಾನಗಳ ಕಾಲ ಸಾವಿರಾರು ತೊರೆಯಾಗಿ ಹರಿದಿವೆ ಆಂತಹ ಹೋರಾಟದ ಎಷ್ಟೋ ಹೋರಾಟಗಳನ್ನು ಬ್ರಿಟಿಷರು ಕ್ರೂರವಾಗಿ ಹತ್ತಿಕ್ಕಿ ಯಶಸ್ವಿಯಾಗಿದ್ದರು. ಅವರ ಆ ಕಾರ್ಯವ್ಯೂಹದ ಭಾಗವಾಗಿಯೇ ನಡೆದಿದ್ದು ಈ ಮೀರತ್ ಪಿತೂರಿ ಪ್ರಕರಣ. 1928 ಆಗಸ್ಟ್ 31 ರಂದು ಅಂದಿನ ಭಾರತದ ಗೃಹ ಕಾರ್ಯದಶರ್ಿ ಹೈಗ್ ಬರೆದ ಪತ್ರದಿಂದ ಇದು ಸ್ಟಷ್ಟವಾಗುತ್ತದೆ. ಕಾಮರ್ಿಕ ಚಳುವಳಿಯನ್ನು ಧಮನಿಸಲು ಬ್ರಿಟಿಷರು ರೂಪಿಸಿದ ‘ಮೀರತ್ ಪಿತೂರಿ’ ಮತ್ತು ಅದರ ವಿಚಾರಣೆ ನಿಸ್ಸಂಶಯವಾಗಿ ಭಾರತದ ಕಾಮರ್ಿಕ ಆಂದೋಲನದಲ್ಲಿ ಒಂದು ನಿಣರ್ಾಯಕ ಮೈಲಿಗಲ್ಲು.ಭಾರತ ದೇಶದ ಜನತೆ ಹಾಗೂ ವಿಶೇಷವಾಗಿ  ದುಡಿಯುವ ವರ್ಗ ಇದೀಗ 66 ಸ್ವಾತಂತ್ಯ್ರ ದಿನದತ್ತ ಮುನ್ನಡೆಯುತ್ತಿರುವ ಈ ಸನ್ನಿವೇಶದಲ್ಲಿ ರಾಷ್ಟ್ರಕವಿ ಕುವೆಂಪು ಹೇಳಿದಂತೆ ‘ನೆನೆ, ನೆನೆ ಆ ದಿನಾವಾ ಓ.. ಭಾರತ ಭಾಂದವ ಎಂಬಂತೆ ಪುನಃ ಆ ಸ್ವಾತಂತ್ಯ್ರ ಚಳುವಳಿಯ ಆ ಕ್ರಾಂತಿಕಾರಿಗಳ ಬಲಿದಾನ ಹಾಗೂ ಆಶೋತ್ತರಗಳನ್ನು ನೆನೆಯುತ್ತಾ  ಆ ಎಲ್ಲರ ಕನಸುಗಳನ್ನು ನನಸಾಗಿಸಲು ಅಗತ್ಯವಿರುವ ಚಾರಿತ್ರಿಕ ಕರ್ತವ್ಯವನ್ನು ನಿರ್ವಹಿಸುವ ಪಣ ತೊಡಬೇಕಾಗಿದೆ.

‍ಲೇಖಕರು avadhi

28 August, 2013

4 Comments

  1. Neela

    Mahantesh, charitre nenapisuva nimma lekhanakke abhimaanada vandane. innashtu baraha nirikshisuvevu.
    kraantiya moggu araluvudu jailinalli.. aa dinava nenedu samateya hosa dinagalu aralali…

    • mahantesh

      thanku all for your response

  2. ಮಹದೇವ ಹಡಪದ

    channagide

  3. vinod

    chennagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading