ಸಖಿ
ಪ್ರಕಾಶ.ಬಿ.ಜಾಲಹಳ್ಳಿ
ಕಪ್ಪೆ ಚಿಪ್ಪುಗಳಲಿ ಮೂಡಿರುವ ಗೆರೆಗಳ ಎಣಿಸುತಿರುವೆ ಸಖಿ
ಮರಳಲ್ಲಿ ಮೂಡಿದ ನಿನ್ನ ಮೌನದ ಭಾವನೆಗಳ ಹುಡುಕುತಿರವೆ ಸಖಿ
ಕಿರಣಗಳ ಸ್ಪರ್ಶಕೆ ಮಿನುಗಿರುವ ಹೆಜ್ಜೆಗಳ ಕಂಡು ಪುಳಕಿತನಾಗಿ
ಮರಳಲ್ಲಿ ಮರುಳಾಗಿ ನಿನ್ನೆಜ್ಜೆಯ ಜೊತೆಯಾಗುತಲಿರುವೆ ಸಖಿ
ಮಳೆ ಬಂದು ಮುತ್ತಿಕ್ಕುವ, ತಂಗಾಳಿ ಬಂದು ತಬ್ಬುವ
ಮೀನುಗಾರ ಬಲೆ ತಾಗಿಸುವ ಭಯಕೆ ತವಕದಿ ಕಾತರಿಸುತಿರುವೆ ಸಖಿ
ನನ್ನೀ ಹೃದಯದ ಶಂಖು ಬಿಟ್ಟು ಬಿಡದೇ ಪ್ರೀತಿಯ ಮೊಳಗಿಸುತಿದೆ
ನನ್ನಾಸೆಯ ಬಣ್ಣಗಳಲಿ ನಿನ್ನ ಚಿತ್ರವನೆ ಬಿಡಿಸುತಿರುವೆ ಸಖಿ
ತಂಗಳು ಕನಸುಗಳ ತಿಂಗಳು ತಿಂಗಳು ಬಿಸಿ ಮಾಡುತಿರವೆ
ಈ ಹೊಸ ವರುಷದಿ ನನಸಾಗುವದೆಂದು ಕಾಯುತಿರವೆ ಸಖಿ
ಕಪ್ಪೆ ಚಿಪ್ಪಲಿ ಮುತ್ತಾಗಿ ಮೂಡುವ ಹನಿ ತೆರದಿ `ಪ್ರಕಾಶ’ನ ಹೃದಯದೀ
ಕಪ್ಪೆ ಚಿಪ್ಪೊಳಗೊಂದು ಪ್ರೀತಿಯ ಹನಿಯಾಗಿ ಮೂಡುವಿಯೆಂದು ಮಿಡಿಯುತಿರುವೆ ಸಖಿ
]]>
ಮೀನುಗಾರ ಬಲೆ ತಾಗಿಸುವ ಭಯಕೆ..
ನಿಮಗೆ ಇವೂ ಇಷ್ಟವಾಗಬಹುದು…





saki kavite tumba sogasagide .tngalu kanasugal tinagalu tingalu bisi madutirve ennav padagalu tumba chennagive.
prakash , sakhi kavite manada yaatanege , hrudaysparshi roopa kottiddiri tumba hidisitu