ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೀಡಿಯಾ ಮಿರ್ಚಿ’ಯಲ್ಲಿ ‘ದೀಪವೂ ನಿನ್ನದೇ..’

gn4 oct4‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಬಿಸಿ ಗೊತ್ತಾಗತ್ತೆ ಆಲ್ವಾ?’ ಅಂತ ಕವಿ ಸು ರಂ ಎಕ್ಕುಂಡಿ ನನ್ನತ್ತ ನೋಡಿದ್ರು. ಅವರ ಮಾತಿನಲ್ಲಿ ಸುಳಿದು ಹೋಗ್ತಾ ಇದ್ದದ್ದು ಬಂಕಿಕೊಂಡ್ಲದ ಬಡತನದಲ್ಲ್ಲೇ ಬದುಕು ದೂಡುತ್ತಿದ್ದ ಹಾಲಕ್ಕಿ ಒಕ್ಕಲಿಗರು. ಅಲ್ಲಿನ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದ ಎಕ್ಕುಂಡಿ ದಿನ ನಿತ್ಯ ಹಾಲಕ್ಕಿ ಒಕ್ಕಲಿಗರ ನೋವನ್ನು ಕಂಡಿದ್ದರು. ಆ ನೋವಿಗೆ ನಾನೆಷ್ಟು ದನಿ ನೀಡಿದರೂ ಅವರ ಎಲ್ಲಾ ಯಾತನೆಯನ್ನು ಬಣ್ಣಿಸಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಅವರು ಹಾಗಂದಾಗ  ಮರಾಠಿಯಲ್ಲಿ ಸಡನ್ನಾಗಿ ಎದ್ದು ಬಂದ ಲಕ್ಷ್ಮಣ್ ಗಾಯಕ್ವಾಡ್, ದಯಾ ಪವಾರ್, ವಸಂತ್ ಮೂನ್  ಆತ್ಮ ಕಥೆಗಳು ನೆನಪಿಗೆ ಬಂತು. ಹಸು ಹಾಕಿದ ಸಗಣಿಯಲ್ಲಿ ಜೀರ್ಣವಾಗದೆ ಉಳಿದು ಹೋಗಿದ್ದ ಕಾಳುಗಳನ್ನು ಹೆಕ್ಕಿ ರೊಟ್ಟಿ ಮಾಡಲು ಸಿದ್ಧವಾಗುತ್ತಿದ್ದವರ ಚಿತ್ರ ಕಣ್ಣ ಮುಂದೆ ಬಂತು. ಫ್ಲೇವಿಯಾ ಆಗ್ನೆಸ್ ಹಿಂಸೆ ಹೊಡೆತಕ್ಕೆ ತುತ್ತಾಗಿ ಮನೆ ಬಿಟ್ಟು ಹೊರಟದ್ದು ಆಕೆಯೇ ಬರೆಯಲು ಸಾಧ್ಯ. ಅರವಿಂದ ಮಾಲಗತ್ತಿ ’ಗೌರ್ಮೆಂಟ್ ಬ್ರಾಹ್ಮಣ’ದಲ್ಲಿ ಬಿಚ್ಚಿಟ್ಟ ವಿವರಗಳು ಒಂದು ಕ್ಷಣ ಕರುಳನ್ನೇ ಕೊರೆದು ಹಾಕಿತ್ತು. ’ಹಸಿವಿನಿಂದ ಸತ್ತೋರು, ಸೈಜುಕಲ್ಲು ಹೊತ್ತೋರು, ವದೆಸಿಕೊಂಡು ವರಗೀದೊರು ನನ್ನ ಜನಗಳು… ಅಂತ ಸಿದ್ಧಲಿಂಗಯ್ಯ ಬರೆದಾಗ ಅವರ ಒಡಲಾಳದಲ್ಲಿ ಎಷ್ಟು ನೋವಿತ್ತೋ…

ಸಂಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

27 October, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading