ಗೀತಾ ಜಿ ಹೆಗ್ಡೆ, ಕಲ್ಮನೆ
ಎಲ್ಲಿಗೆ ಕೇಂಡ್ರ್ಯಾ?
ಅದೇ ನೀವು ಹುಟ್ಟಿದ ಜಾಗಕ್ಕೆ ಮಾರ್ರೆ
ಈ ಬಾರಿ ಜೋರಾಗಿ ನಿಮ್ಮಬ್ಬ ಮಾಡುಕಿತ್ತು
ಎಂತಾ ತಂಟೆ ತಕರಾರು ಇಲ್ಲಂಬ್ರು
ಗೊತ್ತಿತ್ತಾ?
ಎಂತಾ ನೀವ್ ಹಾಂಗೆ ನೋಡೂದು?
ನನ್ನ ಮುಕದ ಮ್ಯಾಲೆ….
ಅಲ್ಲ ಮಾರ್ರೆ ನಾವೇ ಕೋತಿ ವಂಶದೋರು..
“ನನ್ನ ಮೊಕದ ಮ್ಯಾಲೆ ಕೋತಿ ಕುಣೀತಿತ್ತಾ”
ಕೇಳೂಕೆ ಒಸಿ ನಾಚಿಕ್ಕಾತ್ತು…
ಆದರೂ
ನೀವ್ ಸುಮ್ನೆ ಬನ್ನಿ….
ಅರೆರೆ….ಇದೇನಿದು?
ನಿಮ್ಮ ಮಕಾ ಅದೆಷ್ಟು ಚಂದಿತ್ತು
ಸೀತವ್ವಾ ನೋಡಿದ್ರೆ ಎಂತಾ ಅಂದ್ಕಣಾಕಿಲ್ಲಾ
ಅದೆಂತಾ ಕಟ್ಟ್ ಕಂಡೀರಿ
ಬಾಯಿ ಮುಕಕ್ಕೆಲ್ಲ ಬಿರಡಿ
ಉಪ್ಪಿನಕಾಯಿ ಬರಣಿಗೆ ಬಟ್ಟಿ ಕಟ್ದಾಂಗೆ
ಅದ್ಕಾದ್ರೆ ಮಳಿಗಾಲ್ದಾಗೆ ಥಂಡಿಯಿಂದ ಹುಳಾಗ್ಬಾರ್ದು
ಹುಳ ಗಿಳ ಬೀಳಬಾರದು
ಅಂದ್ಕಂಡು ಬಟ್ಟಿ ಕಟ್ತೀರು
ತೆಗಿರಿ ತೆಗಿರಿ
ಇದೆಂಥಾ ಹೊಸ ವಿಶ್ರೂಪ ನಿಮ್ಮದು?
ಹನುಮನಿಗೆ ರಾಮನ್ನೋಮಿದೆ ಭಜನೆ!
ಲೋ…ಹನುಮಾ ದೂರ ದೂರ ನಿಂತ್ಕೊ..
ಮೂರಡಿ ದೂರ ದೂರ ದೂರ
ನನ್ನ ಕಾಲಿಗೆ ಎರಗೋಕ್ಕೆ ಬರಬೇಡಾ.
ಎಂತಾ ವಡೆಯಾ
ನೀವೇ ಹೀಂಗಂದರೆ ಹೇಂಗೆ?
ಇನ್ನಾರ್ ಕಾಲಿಗೆ ಬೀಳ್ಲಿ
ನೀವೇ ಅಲ್ವಾ ನನ್ನ ದೇವರು
ಏನೋ ನಿಮ್ಮಬ್ಬಕ್ಕೆ ಪ್ರತೀ ವರ್ಸಾ
ಭೂಲೋಕಕ್ಕೆ ಹೋಪಾ ಹೋಪಾ ಅಂತಿದ್ರೂ
ನಾನೇ ಬ್ಯಾಡಾ ಬ್ಯಾಡಾ ಹೇಳ್ತಿದ್ದದ್ದೂ….
ಆದರೀಸಲ ಹೋಪೂದೆಯಾ
ಎಂತಾ ತೊಂದರೀನೂ ಇಲ್ಲೆ ಮಾರ್ರೆ
ಈಗಲ್ಲಿ ನಿಮ್ಮ ಗುಡಿ ಕಟ್ಟೋಕೂ ಶುರು ಹಚ್ಕಂಡೀರೂ
ನೀವ್ ನೋಡಿದ್ರೆ ಈ ವ್ಯಾಶಾ ಹಾಕ್ಕಂಡೀರಿ
ಅದೇ ಎಂತಕೆ?
ಹತ್ರಾನೂ ಬರೂಕಿಲ್ಲಾ ಅಂತ್ರೀ……
ಹನುಮನ ಮುಖ ಇನ್ನಷ್ಟು ಊದಿಕೊಂಡಿತು ಬೇಸರದಲ್ಲಿ!

ನೀ ಎಂತಾ ಬೇಕಾದರೂ ಹೇಳು ಹನುಮಾ
ನಾನು ಬರೋದಿಲ್ಲ ಅಂದ್ಮೇಲೆ ಬರೋದಿಲ್ಲ
ರಾಮ ಪಟ್ಟು ಹಿಡಿದು ಕೂತಾ.
ರಾಮನ ಮನವೊಲಿಸಲು ಇಡೀ ವಾನರ ಸೇನೆಯೇ
ಸೇರಿತು ಕಿಷ್ಕಿಂಧೆಯಲ್ಲಿ.
ದೂರ ದೂರ ಕೂತ್ಕೊಳಿ
ರಾಮ ಗುಡುಗಿದ.
ಆಯ್ತು ವಡೆಯಾ
ನಿಮ್ಮ ಮಾತು ಮೀರುಕ್ಕಿತ್ತಾ?
ಸರಿ, ಇದೆಂತಾ ಅವತಾರ ನಿಮ್ಮದು?
ಒಸಿ ಹೇಳಿ ನಮಗೂ….
ಕೊರೋನಾ ಕೊರೋನಾ…..
ಕೊರೋನಾ ಬಂದಿದೆ ಗೊತ್ತಾ?
ಹಂಗಂದ್ರೆ ಎಂತಾ?
ಬಟ್ಟಿ ಕಟ್ಗಬೇಕಾ ನಾವೂ?
ಎಂತಕೆ?
ಅದೊಂದು ಸಾಯಿಸೊ ರೋಗಾ
ಅಲ್ಲೆಲ್ಲಾ ಹೀಂಗೆ ಕಟ್ಕೊಂಡು ಓಡಾಡ್ತೀರು
ದೂರಾ ದೂರಾ ದೂರಾ ಅಂತೀರು
ಇಡೀ ದೇಶ ನಾಕ್ಡೌನ್ ಅಂತೆ
ಬೀದಿ ಬಿಟ್ಟು ಮನೆಲಿರಿ
ಬೀದಿಗೆ ಬಂದ್ರೆ ಲಾಠಿ ಎಟು
ಯಪ್ಪಾ….
ಪ್ರಪಂಚದ ತುಂಬ ಸಾಯ್ತಾ ಅವರೆ ಜನಗಳೂ
ಇನ್ನೆಂತಕೆ ನಾವಲ್ಲಿಗೆ ಹೋಪದು?
ರೋಗ ಅಂಟಿಸ್ಕಂಡ ಬರೂಕಾ?
ಅವರು ಗುಡಿನರು ಕಟ್ಕಳ್ಳಿ ಬಿಡ್ಲಿ
ಎಂತಾರು ಮಾಡ್ಕಳ್ಳಿ
ನಂಗ್ ಬ್ಯಾಡಾ
ಈ ಹನುಮ ಗೊತ್ತಿಲ್ದೆ ಹೋಪಾ ಹೋಪಾ ಅಂತಾ
ಸಾವೂಕಾ?
ಭೂಲೋಕಕ್ಕೆ ಹೋಗೋದು ಬಂದ್ ಬಂದ್ ಬಂದ್
ಈ ಬಾರಿ ನನ್ನಬ್ಬ ಇಲ್ಲೆ.

ಓಹೋಯ್…..
ನಿಮಗೆಲ್ಲಾ ಅರಿವಾಗ್ಲಿ ಅಂತ ನಾನು ಕಟ್ಟಿಕೊಂಡಿದ್ದೂ ಕಂಡ್ರೋ…
ಇದಕ್ಕೆ ಮಾಸ್ಕ್ ಅಂತಾರೆ ಅಲ್ಲಿಯವರು
ಹಿ….ಹಿ….ಹೆದರಿಕೊಂಡು ಬಿಟ್ರಾ?
ಹೇಳುತ್ತ ಬಿಚ್ಚಿ ಬಿಸಾಕಿದ ರಾಮ
ಅಬ್ಬಬ್ಬಾ ಇದನ್ಯಾಂಗೆ ಹಾಕ್ಕಂತ್ರೋ ಅಲ್ಲಿ ಜನ
ಮುಖವೆಲ್ಲ ಇಲ್ಕಾಣಿ ಹ್ಯಾಂಗ್ ಬೆವರಿತ್ತ್
ಬ್ಯಾಡಪ್ಪಾ ಬ್ಯಾಡಾ ಭೂಲೋಕದ ಸಾವಾಸಾ!
ಹೇ…..ಹೇ…..
ವಾನರ ಸೇನೆಯ ಸಂತೋಷಕ್ಕೆ ಪಾರವೇ ಇಲ್ಲ
ಈ ಬಾರಿ ಹಬ್ಬ ಇಲ್ಲೇ ಮಾಡೂದು
ಹಬ್ಬ ಇಲ್ಲೇ ಮಾಡೂದು…
ವಾನರ ಸೇನೆ ಕುಣಿದಿದ್ದೇ ಕುಣಿದಿದ್ದು…
ಲಾಗಾ ಹಾಕಿದ್ದೇ ಹಾಕಿದ್ದು!
'ಮಾಸ್ಕ್' ರಾಮನವಮಿ
ನಿಮಗೆ ಇವೂ ಇಷ್ಟವಾಗಬಹುದು…





ಇಂಗ್ಲಿಷ್ ರಾಮ
ಹ…ಹ…
ಥ್ಯಾಂಕ್ಯೂ ಸರ್