ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾರ್ಕ್ವೆಜ್ ನೆನಪಲ್ಲಿ…

ಜಿ ಎನ್‌ ನಾಗರಾಜ್

ಕುವೆಂಪುರವರ ಕಾದಂಬರಿಗಳು, ದೇವನೂರರ ಕಾದಂಬರಿಗಳಂತೆಯೇ, ಅವರ ಕಾದಂಬರಿಗಳು ನನಗೆ ಸಮಾಜವನ್ನು ಹಾಗೂ ನನ್ನನ್ನು ನಾನೇ ಅರ್ಥ ಮಾಡಿಕೊಳ್ಳಲು ನೀಡಿದ ನೆರವನ್ನು, ಖುಷಿಯನ್ನು ಬಣ್ಣಿಸಲಾಗದು.

ತಮ್ಮ ಕಾದಂಬರಿ ‘ಹಂಡ್ರಡ್ ಯಿಯರ್ಸ್ ಆಫ್ ಸಾಲಿಟ್ಯೂಡ್ – ನೂರು ವರ್ಷಗಳ ಏಕಾಂತ’ಕ್ಕೆ ನೋಬೆಲ್ ಪ್ರಶಸ್ತಿ ವಿಜೇತ. ಅವರ ಅನೇಕ ಕಾದಂಬರಿಗಳು- ಆಟಮ್ನ್ ಆಫ್ ಪೇಟ್ರಿಯಾರ್ಕ್, ಕ್ರಾನಿಕಲ್ ಆಫ್ ಆಫ್ ಎ ಡೆತ್ ಫೋರ್ ಟೋಲ್ಡ್, ಲವ್ ಇನ್ ದ ಟೈಮ್ ಆಫ್ ಕಾಲರಾ, ನೋ ಒನ್ ರೈಟ್ಸ್ ಟು ಕರ್ನಲ್ ಮೊದಲಾದವು ಮಾತ್ರವಲ್ಲ ಅವರ ಆತ್ಮ ಕಥೆಯೂ ಕೂಡ ಒಂದು ಕಾದಂಬರಿಯಂತೆಯೇ ಬಹಳ ಆಕರ್ಷಕವಾಗಿ ಓದಿಸಿಕೊಂಡು ಹೋಗುತ್ತವೆ. ಮ್ಯಾಜಿಕಲ್‌ ರಿಯಲಿಸಂ ಎಂಬ ಹೊಸ ಸಾಹಿತ್ಯಕ ರೂಪದ ಮೂಲಕ ವಿಶ್ವದ ಸಾಹಿತ್ಯದಲ್ಲಿ ಬೆರಗನ್ನು ಮೂಡಿಸಿದವರು.

ವಸಾಹತು ಆಳ್ವಿಕೆಗೆ ತುತ್ತಾದ ಮೂರನೆಯ ಜಗತ್ತಿನ ನಮಗೆ ಅತಿ ಹತ್ತಿರದ ಬದುಕು, ಬವಣೆಗಳ ಚಿತ್ರಣ. ವ್ಯಕ್ತಿ ಮತ್ತು ಸಮಾಜದ ನಡುವಣ ಸಂಬಂಧದ ವಿಶ್ಲೇಷಣೆ, ವ್ಯಕ್ತಿತ್ವದ ಹಾಗೂ ವರ್ತನೆಗಳ ಮೇಲೆ ಸಮಾಜದ ಗಾಢ ಪ್ರಭಾವದ ಬಗ್ಗೆ ಇವರು ವಿವರಿಸಿರುವಂತೆ ಬೇರೇ ಯಾರೂ ವಿಶ್ಲೇಷಿಸಿಲ್ಲವೆನ್ನಬಹುದು.

ಅವರ ಕೆಲವು ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಒಂದು ಮಾರ್ಕ್ವೆಜ್ ವಾಚಿಕೆಯನ್ನೂ ಹೊರತಂದಿದೆ. ಅವರು ಮರೆವಿನ ಕಾಯಿಲೆಯಿಂದ 2012ರಿಂದಲೇ ಬಳಲುತ್ತಿದ್ದರು. ಅವರ ಸಾವು ನನಗೆ ಒಂದು ವೈಯುಕ್ತಿಕ ನೋವು.
ಕೊಲಂಬಿಯಾ ದೇಶದ ಅವರ ಮತ್ತು ಕ್ಯೂಬನ್ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋರವರ ದಶಕಗಟ್ಟಲೆ ಗೆಳೆತನ, ಬೌದ್ಧಿಕ ಸಾಹಚರ್ಯ ಬಹಳ ಪ್ರಸಿದ್ಧವಾದುದು.

ಇವರಿಬ್ಬರ ವ್ಯಾಪಕ ಓದು ಮತ್ತು ಲ್ಯಾಟಿನ್ ಅಮೆರಿಕದ ಜನರ ಬಗೆಗಿನ ತೀವ್ರ ಕಾಳಜಿಯೇ ಅವರ ಗೆಳೆತನದ ಆಧಾರ. ಮಾರ್ಕ್ವೆಜ್ ರವರು ತಮ್ಮ ಕಾದಂಬರಿ, ಬರಹಗಳನ್ನು ಪ್ರಕಟನೆಗೆ ಮೊದಲು ಕ್ಯಾಸ್ಟ್ರೋರವರ ಅಭಿಪ್ರಾಯಕ್ಕೆ ಕಳಿಸುತ್ತಿದ್ದರಂತೆ. ಕ್ಯಾಸ್ಟ್ರೋ‌ರವರು ಈ ಬರಹಗಳಲ್ಲಿನ ವಾಕ್ಯ ರಚನೆ, ಶೈಲಿಯ ಶೈಥಿಲ್ಯಗಳನ್ನು ಎತ್ತಿ ತೋರಿಸಿ ವಸ್ತುವಿನ ಬಗ್ಗೆ ತಮ್ಮ ಸಲಹೆಗಳೊಂದಿಗೆ ಕಳುಹಿಸುತ್ತಿದ್ದರಂತೆ. ಮಾರ್ಕ್ವೆಜ್‌ರವರು ಮಾಡಿದ ಕ್ಯಾಸ್ಟ್ರೋರವರ ಸಂದರ್ಶನ ಬಹಳ ಪ್ರಸಿದ್ಧ.

‍ಲೇಖಕರು Avadhi

19 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading