ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾನಪ್ಪಣ್ಣನಿಲ್ಲದ ‘ಕವಿಶೈಲ’

ನೆಂಪೆ ದೇವರಾಜ್

ಕುಪ್ಪಳ್ಳಿಯ ಪ್ರತಿ ಗಿಡ ಮರ ಬಳ್ಳಿಗಳ ಸಕಲ ಸಲ್ಲಕ್ಷಣಗಳನ್ನೂ ಅರಿತು ವಿವರಿಸುವ ಜಾಣ್ಮೆಯ ಮನುಷ್ಯ-ಉಂಟೂರು ಮಾನಪ್ಫ . ಪ್ರತಿಯೊಂದು ಹಕ್ಕಿಯ ಕೂಗನ್ನು ಗುರುತಿಸಿ ಅದರ ಇರುವಿಕೆಯ ಗೌಪ್ಯತೆಯನ್ನು ಬಹಿರಂಗಗೊಳಿಸಬಲ್ಲ ಪ್ರತಿಭೆ ಮಂದಣ್ಣನೋಪಾದಿಯಲ್ಲಿ ಗೂಡು ಕಟ್ಟಿಕೊಂಡಿತ್ತು.

ನಾವೆಲ್ಲ ಒಂದಷ್ಟು ಸಣ್ಣ ಪುಟ್ಟ ಹುಡುಗರೊಡಗೂಡಿ ಮೊನ್ನೆ ಮೊನ್ನೆ ಸೂರ್ಯೋದಯ ಸವಿಯಲು ನವಿಲುಕಲ್ಲು ಗುಡ್ಡಕ್ಕೆ ಹೋದಾಗ ದಾರಿಯಗುಂಟ ಸಿಗುತ್ತಿದ್ದ ನೂರಾರು ಗಿಡಗಂಟಿಗಳ ಪರಿಚಯ ಮಾಡುವ ತಾಕತ್ತಿನ ಅರಣ್ಯಪಾಲಕರಾಗಿ ನಮಗೆಲ್ಲ ಕಂಡಿದ್ದರು..

ಹಕ್ಕಿ ಪಕ್ಷಿ, ಗಿಡ ಗಂಟಿ, ಬಳ್ಳಿ, ಅಬ್ಬರಿ, ಸೂರ್ಯ, ಚಂದ್ರ ಚುಕ್ಕಿಗಳ ಮೇಲೆ ಬರೆದ ಪದ್ಯಗಳನ್ನು ಅದೆಷ್ಟು ಚನ್ನಾಗಿ ಉದ್ಘೋಷಿಸುತ್ತಿದ್ದರೆಂದರೆ ಕವಿ ಹೃದಯಿ ಕದಲದಂತೆ ನೋಡಿಕೊಳ್ಳುತ್ತಿದ್ದರು.

ಹಕ್ಕಿಯೊಂದರ ಇಂಚರದ ಸದ್ದನ್ನು ಮನುಷ್ಯ ಭೇದಿಸಲಾರದ ಉಡುಕಲಿನಿಂದ ಹೊರಬರುವ ಪರಿಯನ್ನು ಗ್ರಹಿಸುವ ಪರಿಪೂರ್ಣ ತನ್ಮಯತೆ ಇತ್ತು. ಎರಡು ತಿಂಗಳ ಹಿಂದೆ ಮಾನಪ್ಪಣ್ಣ ನವಿಲು ಕಲ್ಲಿನಲ್ಲಿ ನಮ್ಮೊಂದಿಗೆ ಒಂದಾಗಿ ತುಂಬ ವಿಷಯ ಹಂಚಿಕೊಂಡಿದ್ದರು. ಅ ಚಿತ್ರಗಳನ್ನೂ ಹಾಕಿದ್ದೇನೆ.

ನಿನ್ನೆ ಮಾನಪ್ಪಣ್ಣ ನಮ್ಮನ್ನಗಲಿದ ಸುದ್ದಿಯಿಂದ ಕುಗ್ಗಿ ಹೋದೆ. ಮಾನಪ್ಪಣ್ಣನಿಲ್ಲದ ಕವಿಶೈಲ ಹೇಗಿರುತ್ತದೋ ಏನೋ?

‍ಲೇಖಕರು Avadhi

25 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading