ಮಾಧ್ಯಮ
ಕೆ ಎಂ ವಿಶ್ವನಾಥ ಮಂಕವಿ
ಹೊತ್ತಿ ಉರಿಯುತ್ತಿರುವ
ಸಮಸ್ಯೆಗಳನ್ನು ಬಿಂಬಿಸಲು,
ಹೊಸ ಹೊಸ ಮಾಹಿತಿಯನ್ನು,
ಸಾಮಾನ್ಯ ಜನರ ಕಿವಿಗೆ ತಲುಪಿಸಲು,
ಸುಖ ದು:ಖಗಳ ಸಮ್ಮಿಲನ ಕೊಡಲು,
ಒಂದಿಷ್ಟು ಕಹಿ ಸಹಿ ಸುದ್ಧಿ ನೀಡಲು,
ನಿನ್ನ ಪಾತ್ರ ಅಮೂಲ್ಯವಾದದ್ದು ಮಾಧ್ಯಮ,
ಇಂದೇಕೊ ನೀ ಆಗುತ್ತಿರುವೆ ಮಧ್ಯಮ.
ಜಾತಿಗೊಂದು ನೀನಾದೆ,
ನೀತಿಗೊಂದು ನೀನಾದೆ,
ಕೋತಿಹಂಗ ಅವರವರ ಕೈಗೆ ಸಿಕ್ಕು,
ನಿನ್ನ ನೈಜತೆಯ ನೀತಿ ಮರೆತು ನಡೆದೆ,
ಕುಲದಮೇಲೆ ನೆಲೆಯ ಹಿಡಿದು ನಡೆದೆ.
ಸುಖದ ಸುದ್ಧಿ ನೀ ತರದಾದೆ,
ಸೂಕ್ತ ಸ್ಥಾನ ನೀ ಹಿಡಿಯದಾದೆ,
ಸಾವಿರ ಮಂದಿಯ ಕೈಗೆ ಸಿಕ್ಕು
ಸೋಲುವ ಕುದುರೆ ನೀನಾದೆ,
ಅಶ್ಲೀಲ ಚಿತ್ರಗಳ ಗೂಡಾದೆ
ಓದುಗರಿಗೆ ಸಂತುಷ್ಟ ನೀ ಕೊಡದಾದೆ
ಬರಿ ಜಾಹಿರಾತುಗಳ ಗೂಡಾದೆ
ನಿನ್ನ ನಿಜ ರೂಪ ನೀ ಮರೆತು ಹೋದೆ






ನೈಜವಾಗಿದೆ. ಸೂಪರ್
ಮಾಧ್ಯಮ ಎಂದರೆನು ಎಂದು ಚೆನ್ನಾಗಿ ಹೇಳಿರುವಿರಿ ಸರ್