ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತು ಮೌನವನ್ನು ಹೊದ್ದು ಕೂತಾಗ

ಮಾತಿನ ‘ಚೆಲುವು’

ಜಿ ಪಿ ಬಸವರಾಜು

ಮಾತು ಎಂದರೆ ಸಲೀಸು; ಮೌನ ಎಂದರೆ ಕಷ್ಟ. ಮಾತು ನಮ್ಮ ಕೈಗೆ ಯಾವಾಗ ಸಿಕ್ಕಿತು? ತೀರ ಬಾಲ್ಯದ ಆ ದಿನಗಳ ವಿವರ ನೆನಪಿಲ್ಲದಿದ್ದರೂ, ಮಾತು ಸಿಕ್ಕಮೇಲೆ ಅದನ್ನು ದೂರವಿರಿಸಿದ್ದೇ ಇಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ರೀತಿಯಲ್ಲಿ ಮಾತಿನ ಬಳಕೆ ಸದಾ ಕಾಲ ನಡೆಯುತ್ತಲೇ ಇತ್ತು. ಮೇಷ್ಟ್ರು ಪಾಠ ಮಾಡುತ್ತಿದ್ದಾಗಲೇ ಕಳ್ಳ ದನಿಯಲ್ಲಿ ನಾವು ಮಾತನಾಡುತ್ತಿದ್ದೆವು. ‘ಯಾರೋ ಅವನು?’ ಎಂದು ಮೇಷ್ಟ್ರು ಬೆತ್ತವನ್ನು ಮೇಜಿನ ಮೇಲೆ ಕುಟ್ಟಿದಾಗ ನಮ್ಮ ಬಾಯಿಗಳು ಬಂದಾಗುತ್ತಿದ್ದವು. ಆಗ ಮೇಷ್ಟ್ರೇ ಮಾತನಾಡುತ್ತಿದ್ದರು. ಅವರ ಪಾಠವೇನೋ ಚೆನ್ನಾಗಿರುತ್ತಿತ್ತು. ಆದರೂ ಅದರ ಮಧ್ಯೆ ನಮಗೆ ಮಾತನಾಡಬೇಕೆನಿಸುತ್ತಿತ್ತು. ಅದಕ್ಕೆ ಕಳ್ಳ ಮಾತುಗಳು ನುಸುಳುತ್ತಿದ್ದವು, ಸಣ್ಣ ಸ್ವರದಲ್ಲಿ.
ಶಾಲೆಗೆ ಹೋಗುವಾಗಲೂ ಮಾತು; ಬರುವಾಗಲೂ ಮಾತು. ಪಾಠ ನಡೆಯುವಾಗಲೂ ಮಾತು. ಮಾತಿಲ್ಲದೆ ಇರುವುದೆಂದರೆ ಅದೊಂದು ಘೋರ ಶಿಕ್ಷೆ. ಒಂದು ದಿನ ಕ್ಲಾಸಿಗೆ ಬಂದ ಮೇಷ್ಟ್ರು, ‘ಇವತ್ತು ಪಾಠ ಮಾಡುವುದಿಲ್ಲ’ ಎಂದರು. ಇಡೀ ಕ್ಲಾಸು ಖುಷಿಯಿಂದ ಕೇಕೆ ಹಾಕಿ ‘ಹೋ’ ಎಂದು ಸ್ವರ ಹೊರಡಿಸಿತು. ಬಿಲ್ಡಿಂಗೇ ನಡುಗುವಂಥ ಸದ್ದು ಅದು. ‘ಇಲ್ಲಿ ಕೇಳ್ರೋ’ ಎಂದರು ಮೇಷ್ಟ್ರು. ನಾವೆಲ್ಲ ಕಿವಿಗಳನ್ನು ಚೂಪುಮಾಡಿ ಬಾಯಿಗಳನ್ನು ಬಂದು ಮಾಡಿದೆವು.
‘ಇವತ್ತು ನೀವು ಮಾತಾಡಬೇಕು, ನಾನು ಕೇಳ್ತೀನಿ’ ಎಂದರು. ಮತ್ತೆ ಖುಷಿಯ ಅಲೆ ತೇಲಿತು. ನಮಗೆ ಮಾತನಾಡುವ ಅವಕಾಶ; ಮೇಷ್ಟ್ರಿಗೆ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಅವಕಾಶ.
‘ಮಾತು ಎಂದರೆ ಬೇಕಾಬಿಟ್ಟಿ ಮಾತಲ್ಲ. ನಾನೊಂದು ಸಬ್ಜೆಕ್ಟ್ ಕೊಡ್ತೀನಿ. ನೀವು ಹತ್ತು ನಿಮಿಷ ಯೋಚನೆ ಮಾಡಿ. ಆಮೇಲೆ ನಾನು ಕರೆದವರೆಲ್ಲ ಒಬ್ಬೊಬ್ಬರಾಗಿ ಬಂದು, ಇಲ್ಲಿ ನಿಂತ್ಕೊಂಡು ಎರಡು ಮೂರು ನಿಮಿಷ ಮಾತನಾಡಬೇಕು’ ಎಂದರು ನಮ್ಮ ಮೇಷ್ಟ್ರು. ನಮ್ಮಲ್ಲಿ ಗುಸುಗುಸು ಶುರುವಾಯಿತು. ಇದೆಲ್ಲ ನಮಗೆ ಹೊಸದು. ನಾವಾಡುತ್ತಿದ್ದ ಮಾತಿಗೆ ಮೇಷ್ಟ್ರು ಹೇಳಿದ ‘ಸಬ್ಜೆಕ್ಟ್’ ಎಂಬುದು ಇರಲೇ ಇಲ್ಲ. ಮಾತನಾಡಲು ಒಂದು ಸಬ್ಜೆಕ್ಟ್ ಇರಬೇಕೆಂಬುದೂ ನಮಗೆ ಗೊತ್ತಿರಲಿಲ್ಲ. ತೀರ ಗೊಂದಲಕ್ಕೊಳಗಾದೆವು. ಕುತೂಹಲದಿಂದ ಬಾಯಿಬಿಟ್ಟುಕೊಂಡು ಮೇಷ್ಟ್ರನ್ನೇ ನೋಡುತ್ತ ಮೌನವಾದೆವು.
‘ನಮ್ಮ ಹೊಲ, ನಮ್ಮ ಪಯಿರು’ ಎಂಬ ‘ಸಬ್ಜೆಕ್ಟನ್ನು’ ಮೇಷ್ಟ್ರು ಕೊಟ್ಟರು. ಅದನ್ನೇ ಬೋರ್ಡ್ ಮೇಲೆ ಬರೆದರು. ಯೋಚನೆ ಮಾಡುವುದಕ್ಕೆ ಹತ್ತು ನಿಮಿಷಗಳ ಅವಧಿಯನ್ನೂ ಕೊಟ್ಟರು. ನಮ್ಮ ಹೊಲವೂ ನಮಗೆ ಗೊತ್ತಿತ್ತು; ಪಯಿರೂ ಗೊತ್ತಿತ್ತು.
ಮೇಷ್ಟ್ರು ನನ್ನ ಹೆಸರನ್ನು ಕರೆದಾಗ ಎದ್ದು ನಿಂತೆ. ಮೇಷ್ಟ್ರ ಹತ್ತಿರ ಹೋದೆ. ಅವರು ನನ್ನನ್ನು ಹುಡುಗರ ಕಡೆಗೆ ತಿರುಗಿಸಿ ನಿಲ್ಲಿಸಿದರು. ಇಡೀ ತರಗತಿ ನನ್ನನ್ನೇ ನೋಡುತ್ತಿತ್ತು. ಹುಡುಗರು, ಹುಡುಗಿಯರು. ನಿತ್ಯವೂ ನಾನು ಮಾತನಾಡುತ್ತಿದ್ದ, ಜೊತೆಯಲ್ಲಿ ಓದುತ್ತಿದ್ದ, ಜಿಗುಟುತ್ತಿದ್ದ, ಪೆನ್ಸಿಲ್ ಕಸಿದುಕೊಳ್ಳುತ್ತಿದ್ದ, ಪುಸ್ತಕ ಕೊಡುತ್ತಿದ್ದ, ನೋಟ್ಸ್ ಕಾಪಿಮಾಡಿಕೊಳ್ಳುತ್ತಿದ್ದ ಇಂಥ ಹಲವಾರು ಕೃತ್ಯಗಳಿಗೆ ಜೊತೆಯಲ್ಲಿರುತ್ತಿದ್ದ ನನ್ನ ಗೆಳೆಯ ಗೆಳತಿಯರೇ. ಅವರೆಲ್ಲ ಮಾತು ಬಂದು ಮಾಡಿ ನನ್ನನ್ನೇ ನೋಡುತ್ತಿದ್ದರು. ನನ್ನ ಮಾತನ್ನು ಕೇಳಲು ತಯಾರಾಗಿ ಕುಳಿತಿದ್ದರು. ನನಗೆ ನಡುಕ ಶುರುವಾಯಿತು. ಗಂಟಲ ದ್ರವ ಆರಿತು. ಮೈ ಬೆವರತೊಡಗಿತು. ನಾನು ಮಾತನಾಡಬೇಕೆಂದುಕೊಂಡಿದ್ದೆಲ್ಲ ಮರೆತು ಹೋಯಿತು. ನನ್ನ ಸಹಪಾಠಿಗಳು ಮಾತಿಲ್ಲದೆ ಕಾದರು. ನನ್ನ ಮಾತುಗಳು ಎಲ್ಲಿಯೋ ಕಳೆದುಹೋಗಿದ್ದವು. ಒಂದೇ ಒಂದು ಶಬ್ದವನ್ನೂ ಆಡಲಾರೆ ಎನ್ನಿಸಿಬಿಟ್ಟಿತು. ನಿಲ್ಲುವುದಕ್ಕೂ ತ್ರಾಣವಿಲ್ಲದೆ ಕುಸಿಯುವಂತಾಯಿತು. ನನ್ನ ಮಾತಿಗಾಗಿ ಕಾದವರು ನಕ್ಕರು; ‘ಹೋ’ ಎಂದು ಕೂಗಿದರು. ಗುಸು ಗುಸು ಗದ್ದಲ ಸಂತೆಯಾಯಿತು. ಮೇಷ್ಟ್ರು ಏನೇನೋ ಹೇಳಿ ನಾನು ಮಾತನಾಡುವಂತೆ ಪುಸಲಾಯಿಸಿದರು. ಆದರೂ ಮಾತು ನನ್ನ ಗಂಟಲನ್ನು ದಾಟಲೇ ಇಲ್ಲ.

ಮುಂದೆ ನಾನು ಮಾತನ್ನು ಕಲಿತೆ. ಸಾರ್ವಜನಿಕ ವೇದಿಕೆಗಳನ್ನು ಹತ್ತಿ ನಿರ್ಭಯವಾಗಿ ಮಾತನಾಡುವುದನ್ನು ಕಲಿತೆ. ನಡುಗುವುದು, ತೊದಲುವುದು, ಬೆವರುವುದು ಎಲ್ಲ ನೀಗಿ, ಮಾತು ಸಲೀಸಾಗಿ ಆಡುವುದು ನನಗೆ ಬಂದುಬಿಟ್ಟಿತು. ಚಚರ್ಾಸ್ಪಧರ್ೆಯಲ್ಲಿ ಎಲ್ಲ ಮೆಚ್ಚಿ ತಲೆದೂಗುವಂತೆ ಮಾತನಾಡುವುದನ್ನು ಕಲಿತೆ. ವಿಷಯದ ಪರವಾದರೂ ಸರಿ, ವಿರೋಧವಾದರೂ ಸರಿ, ಸಲೀಸಾಗಿ ಮಾತನಾಡುತ್ತಿದ್ದೆ. ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುವುದು ಹೇಗೆ, ವೇದಿಕೆಯ ಮೇಲಿರುವವರನ್ನು ಹೊಗಳುವ ಬಗೆ ಹೇಗೆ, ಕೊಟೇಷನ್ಗಳನ್ನು ಎಲ್ಲೆಲ್ಲಿ ಹೇಗೆಹೇಗೆ ಬಳಸಬೇಕು ಇತ್ಯಾದಿ ಎಲ್ಲ ತಂತ್ರಗಳೂ ನನ್ನ ಕೈವಶವಾದವು. ಮಾತು ಮೋಹಕವಾಯಿತು.
ಇವತ್ತಿನ ಬಹುಪಾಲು ವೇದಿಕೆಗಳಲ್ಲಿ ಆಡುವ ಮಾತುಗಳು ಇದೇ ಮಾದರಿಯಲ್ಲಿರುತ್ತವೆ. ಮಾತಿನ ಕಲೆಯಲ್ಲಿ ನಾವೆಲ್ಲ ಪಳಗಿದವರೇ. ಕೇಳುವವರನ್ನು ನೋಡಿ, ಅವರನ್ನು ಸೆಳೆದುಕೊಂಡು ಗಂಟೆಗಟ್ಟಲೆ ಮಾತನಾಡುತ್ತೇವೆ. ಕೇಳುಗರಿಂದ ಚಪ್ಪಾಳೆ ಸಿಕ್ಕರಂತೂ ನಮ್ಮ ಮಾತುಗಳು ಹುಚ್ಚೆದ್ದ ಕಾಡು ಕುದುರೆಗಳೇ. ದಿಕ್ಕು ದೆಸೆ ಇಲ್ಲದೆ, ಗೊತ್ತು ಗುರಿ ಇಲ್ಲದೆ ಓಡುತ್ತಲೇ ಇರುತ್ತವೆ.
ಗಾಂಧೀಜಿಯವರಿಗೆ ಮಾತು ಸಲೀಸಾಗಿರಲಿಲ್ಲ. ಉಪವಾಸದಲ್ಲಿ ಮತ್ತು ಮೌನದಲ್ಲಿಯೆ ಅವರು ಬಹಳಷ್ಟು ಸಮಯವನ್ನು ಕಳೆದರು. ಅವರಿಗೆ ನುಡಿ ಎನ್ನುವುದು ನಡೆಯ ಇನ್ನೊಂದು ರೂಪವೇ ಆಗಿತ್ತು. ತಮ್ಮ ಮನದಲ್ಲಿ ಮೂಡಿದ ಚಿಂತನೆಯನ್ನು ಕಡೆದು ಕಡೆದು, ಅದನ್ನು ಬದುಕಲು ಸಾಧ್ಯವೇ ಎಂದು ಯೋಚಿಸುತ್ತಿದ್ದರು. ಬದುಕಿನಲ್ಲಿ ಅದರ ಸಾರ್ಥಕತೆಯನ್ನು ಕಂಡುಕೊಳ್ಳಲು ನೋಡುತ್ತಿದ್ದರು. ಅಲ್ಲಿಂದಲೇ ಮಾತುಗಳನ್ನು ಕಟ್ಟಿಕೊಳ್ಳಲು ಹೆಣಗುತ್ತಿದ್ದರು. ನಂತರವೇ ಅವರಿಗೆ ನುಡಿ ಸಿಗುತ್ತಿತ್ತು. ಸಾರ್ವಜನಿಕ ವೇದಿಕೆಯಾಗಲೀ, ಖಾಸಗೀ ಒಡನಾಟಗಳಾಗಲೀ ಅಲ್ಲೆಲ್ಲ ಅವರು ಬಳಸುತ್ತಿದ್ದ ‘ನುಡಿ’ ಇದೇ ಆಗಿರುತ್ತಿತ್ತು. ಹೀಗಾಗಿಯೇ ಗಾಂಧೀಜಿಯವರ ನಡೆ ಮತ್ತು ನುಡಿಗಳಲ್ಲಿ ಹೆಚ್ಚಿನ ಅಂತರ ಇರುತ್ತಿರಲಿಲ್ಲ; ಬಿರುಕು ಇರುತ್ತಿರಲಿಲ್ಲ. ಅವರ ನುಡಿಗೆ ಚೈತನ್ಯ ಇರುತ್ತಿತ್ತು. ಇತರರನ್ನು ಹಿಡಿದು ನಿಲ್ಲಿಸುವ ಶಕ್ತಿ ಇರುತ್ತಿತ್ತು. ಮೋಹಕವಾಗಿ, ಚೆಲುವಾಗಿ ಮಾತನಾಡುವುದಕ್ಕಿಂತ ಸತ್ಯವನ್ನು ಮಾತನಾಡಬೇಕೆಂದು ಅವರು ಪ್ರಯತ್ನಿಸುತ್ತಿದ್ದರು. ಗಾಂಧೀಜಿಯವರ ನುಡಿಗೆ ಚೈತನ್ಯ, ಬಲ ಇದ್ದರೆ ಅದು ಬರುತ್ತಿದ್ದುದು ಸತ್ಯದ ಬೆಂಬಲದಿಂದ. ಗಾಂಧೀಜಿಯವರ ಮಾತಿಗಿದ್ದ ಶಕ್ತಿಯ ಮಹಾನ್ ಸ್ವರೂಪ ಎಂಥದು ಎನ್ನುವುದು ನಮಗೆಲ್ಲ ತಿಳಿದೇ ಇದೆ. ಇಲ್ಲವಾದರೆ ನಮ್ಮನ್ನೆಲ್ಲ ಗುಲಾಮಗಿರಿಯಲ್ಲಿಟ್ಟದ್ದ ಬ್ರಿಟಿಷರು ನಮ್ಮ ದೇಶದಿಂದ ಕಾಲ್ತೆಗೆಯುವ ಸಾಧ್ಯತೆಯೇ ಇರುತ್ತಿರಲಿಲ್ಲ.
ವಚನಕಾರರಿಗೂ ಮಾತೆಂದರೆ ಕೇವಲ ಮಾತಾಗಿರಲಿಲ್ಲ. ಅದು ಅವರ ‘ವಚನ.’ ‘ನುಡಿದರೆ ಮುತ್ತಿನ ಹಾರದಂತಿರಬೇಕು.’ ಮುತ್ತಿನ ಹಾರವೆಂದರೆ ಮುತ್ತಿನ ಹೊಳಪು ಮತ್ತು ಅವುಗಳನ್ನು ಜೋಡಿಸುವ ಕ್ರಮ. ಜೋಡಣೆಯಲ್ಲಿ ಜಾಣತನವಿರಬಹುದು. ಆದರೆ ಮಾತಿಗೆ ಹೊಳಪು ಹೇಗೆ ಬರುತ್ತದೆ? ಇದು ನಮ್ಮ ಚಿಂತನೆಯ ದಿಕ್ಕನ್ನೇ ಬೇರೆಡೆಗೆ ತಿರುಗಿಸುತ್ತದೆ.
ವಚನಕಾರರು ಅಲ್ಲಿಗೇ ನಿಲ್ಲಿಸಲಿಲ್ಲ: ‘ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು’ ಎಂದರು. ದೇವರನ್ನು ಮೆಚ್ಚಿಸುವ ನುಡಿ ಯಾವುದು? ನಡೆ-ನುಡಿಗಳು ಒಂದಾಗಬೇಕು ಎಂಬುದನ್ನೂ ವಚನಕಾರರು ಹೇಳಿ, ದೇವರನ್ನು ಮೆಚ್ಚಿಸುವ ನುಡಿ ಎಂಥದು ಎಂಬುದನ್ನೂ ಸೂಚಿಸುತ್ತಾರೆ. ‘ಸತ್ಯವೇ ದೇವರು’ ಎಂದ ಗಾಂಧೀಜಿಯವರ ಮಾತಿನಲ್ಲಿಯೂ ಈ ದೇವರ ಕಲ್ಪನೆಯಿದೆ.
ಸತ್ಯ, ಸುಂದರ, ಶಿವ ಇದೆಲ್ಲವನ್ನು ಒಳಹೊಕ್ಕು ನೋಡುತ್ತ ಹೋದರೆ, ನುಡಿ ಸಲೀಸಲ್ಲ ಎಂಬ ಸತ್ಯ ತಿಳಿಯುತ್ತದೆ.
ನಮ್ಮ ರಾಜಕಾರಣಿಗಳ ಮಾತುಗಳನ್ನು ನಾವು ನೆನಪಿಸಿಕೊಳ್ಳದಿರುವುದೇ ಒಳ್ಳೆಯದು. ಜಗತ್ತಿನ ಯಾವ ಸಂಗತಿಯ ಮೇಲಾದರೂ ಅವರು ಮಾತನಾಡುತ್ತಾರೆ; ಯಾವ ವ್ಯಕ್ತಿಯ ಬಗೆಗಾದರೂ ಅವರು ತೀಪರ್ು ಕೊಡುತ್ತಾರೆ. ಅವರಿಗೆ ಯಾವುದೂ ಕಷ್ಟವಲ್ಲ; ಯಾವುದೂ ಅಸಾಧ್ಯವಲ್ಲ.
ರಾಜಕಾರಣಿಗಳನ್ನು ಬಿಡಿ, ನಾವು-ಬರಹಗಾರರು, ಕಲಾವಿದರು, ಚಿಂತಕರು ಆಡುವ ಮಾತುಗಳಾದರೂ ಹೇಗಿವೆ?
ಮೊನ್ನೆ ಒಂದು ಸಮ್ಮೇಳನದಲ್ಲಿ ಲೇಖಕರೊಬ್ಬರು ಅಬ್ಬರಿಸುತ್ತಿದ್ದರು. ಅವರಿಗೆ ನುಡಿ ಸಲೀಸಾಗಿ ಸಿಗುತ್ತಿತ್ತು. ಎಲ್ಲಿಂದ ಎಲ್ಲಿಗೋ ಹೋಗುತ್ತಿದ್ದರು; ಯಾರು ಯಾರನ್ನೋ ಉದಾಹರಿಸುತ್ತಿದ್ದರು. ಹತ್ತಾರು ವಿಚಾರಗಳ ಧಾರೆಯನ್ನೇ ಹರಿಸುತ್ತಿದ್ದರು. ಅವರ ಸಿಟ್ಟು ಉರಿಯುತ್ತಿತ್ತು . ಪ್ರತಿಯೊಂದು ನುಡಿಯೂ ಕೆಂಡದುಂಡೆಗಳೇ. ಕ್ಷಣಕ್ಷಣಕ್ಕೂ ಅಬ್ಬರ. ಉದ್ವೇಗದಲ್ಲಿ ಅವರು ಯಾವುದೋ ಸಂಗತಿಯನ್ನು ಎತ್ತಿಕೊಂಡು, ಅದನ್ನು ಮರೆತು ಮತ್ತೆಲ್ಲಿಗೋ ಹೋಗುತ್ತಿದ್ದರು. ಅವರ ಹಾವ ಭಾವ ಮಾತುಗಳನ್ನು ಸಿಡಿಸುತ್ತಿದ್ದ ರೀತಿ ಎಲ್ಲವೂ ನೋಡುವಂತಿತ್ತು. ಮಾತು ಇಂಥವರಿಗೆ ಎಷ್ಟು ಸಲೀಸು!
ನಮ್ಮ ಮಾತುಗಳ ಬಗ್ಗೆ ನಾವೆಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಅವುಗಳ ಶಕ್ತಿ, ದೌರ್ಬಲ್ಯ, ಸ್ವರೂಪ, ಅವುಗಳ ಹೊಳಪು, ಸತ್ಯಕ್ಕೆ, ಬದುಕಿಗೆ ಅವು ಎಷ್ಟು ಸಮೀಪ ಅಥವಾ ದೂರ ಇತ್ಯಾದಿ ಯಾವುದೂ ನಾವು ಯೋಚಿಸುವುದಿಲ್ಲ. ನಮ್ಮ ಶಬ್ದ ಭಂಡಾರಕ್ಕೆ ಕೈಹಾಕಿ, ಸಿಕ್ಕ ಎಲ್ಲ ಪದಗಳನ್ನು ಚೆಲ್ಲುತ್ತೇವೆ. ಕೇಳುಗರೂ ಹಾಗೆಯೇ; ತಲೆದೂಗುತ್ತಾರೆ; ಚಪ್ಪಾಳೆ ತಟ್ಟುತ್ತಾರೆ. ‘ಎಷ್ಟು ಛಲೋ ಮಾತನಾಡಿದಿರಿ, ಸರ್’ ಎನ್ನುತ್ತಾರೆ.
ನಿಜಕ್ಕೂ ನಮ್ಮ ಮಾತುಗಳಲ್ಲಿ ‘ಚೆಲುವು’ ಇತ್ತೇ? ಚೆಲುವು ಎಂದರೆ ಸೌಂದರ್ಯ. ‘ಸತ್ಯಂ, ಶಿವಂ, ಸುಂದರಂ.’
ಮಾತಿನ ‘ಚೆಲುವು’
ಮಾತು ಎಂದರೆ ಸಲೀಸು; ಮೌನ ಎಂದರೆ ಕಷ್ಟ. ಮಾತು ನಮ್ಮ ಕೈಗೆ ಯಾವಾಗ ಸಿಕ್ಕಿತು? ತೀರ ಬಾಲ್ಯದ ಆ ದಿನಗಳ ವಿವರ ನೆನಪಿಲ್ಲದಿದ್ದರೂ, ಮಾತು ಸಿಕ್ಕಮೇಲೆ ಅದನ್ನು ದೂರವಿರಿಸಿದ್ದೇ ಇಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ರೀತಿಯಲ್ಲಿ ಮಾತಿನ ಬಳಕೆ ಸದಾ ಕಾಲ ನಡೆಯುತ್ತಲೇ ಇತ್ತು. ಮೇಷ್ಟ್ರು ಪಾಠ ಮಾಡುತ್ತಿದ್ದಾಗಲೇ ಕಳ್ಳ ದನಿಯಲ್ಲಿ ನಾವು ಮಾತನಾಡುತ್ತಿದ್ದೆವು. ‘ಯಾರೋ ಅವನು?’ ಎಂದು ಮೇಷ್ಟ್ರು ಬೆತ್ತವನ್ನು ಮೇಜಿನ ಮೇಲೆ ಕುಟ್ಟಿದಾಗ ನಮ್ಮ ಬಾಯಿಗಳು ಬಂದಾಗುತ್ತಿದ್ದವು. ಆಗ ಮೇಷ್ಟ್ರೇ ಮಾತನಾಡುತ್ತಿದ್ದರು. ಅವರ ಪಾಠವೇನೋ ಚೆನ್ನಾಗಿರುತ್ತಿತ್ತು. ಆದರೂ ಅದರ ಮಧ್ಯೆ ನಮಗೆ ಮಾತನಾಡಬೇಕೆನಿಸುತ್ತಿತ್ತು. ಅದಕ್ಕೆ ಕಳ್ಳ ಮಾತುಗಳು ನುಸುಳುತ್ತಿದ್ದವು, ಸಣ್ಣ ಸ್ವರದಲ್ಲಿ.
ಶಾಲೆಗೆ ಹೋಗುವಾಗಲೂ ಮಾತು; ಬರುವಾಗಲೂ ಮಾತು. ಪಾಠ ನಡೆಯುವಾಗಲೂ ಮಾತು. ಮಾತಿಲ್ಲದೆ ಇರುವುದೆಂದರೆ ಅದೊಂದು ಘೋರ ಶಿಕ್ಷೆ. ಒಂದು ದಿನ ಕ್ಲಾಸಿಗೆ ಬಂದ ಮೇಷ್ಟ್ರು, ‘ಇವತ್ತು ಪಾಠ ಮಾಡುವುದಿಲ್ಲ’ ಎಂದರು. ಇಡೀ ಕ್ಲಾಸು ಖುಷಿಯಿಂದ ಕೇಕೆ ಹಾಕಿ ‘ಹೋ’ ಎಂದು ಸ್ವರ ಹೊರಡಿಸಿತು. ಬಿಲ್ಡಿಂಗೇ ನಡುಗುವಂಥ ಸದ್ದು ಅದು. ‘ಇಲ್ಲಿ ಕೇಳ್ರೋ’ ಎಂದರು ಮೇಷ್ಟ್ರು. ನಾವೆಲ್ಲ ಕಿವಿಗಳನ್ನು ಚೂಪುಮಾಡಿ ಬಾಯಿಗಳನ್ನು ಬಂದು ಮಾಡಿದೆವು.
‘ಇವತ್ತು ನೀವು ಮಾತಾಡಬೇಕು, ನಾನು ಕೇಳ್ತೀನಿ’ ಎಂದರು. ಮತ್ತೆ ಖುಷಿಯ ಅಲೆ ತೇಲಿತು. ನಮಗೆ ಮಾತನಾಡುವ ಅವಕಾಶ; ಮೇಷ್ಟ್ರಿಗೆ ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಅವಕಾಶ.
‘ಮಾತು ಎಂದರೆ ಬೇಕಾಬಿಟ್ಟಿ ಮಾತಲ್ಲ. ನಾನೊಂದು ಸಬ್ಜೆಕ್ಟ್ ಕೊಡ್ತೀನಿ. ನೀವು ಹತ್ತು ನಿಮಿಷ ಯೋಚನೆ ಮಾಡಿ. ಆಮೇಲೆ ನಾನು ಕರೆದವರೆಲ್ಲ ಒಬ್ಬೊಬ್ಬರಾಗಿ ಬಂದು, ಇಲ್ಲಿ ನಿಂತ್ಕೊಂಡು ಎರಡು ಮೂರು ನಿಮಿಷ ಮಾತನಾಡಬೇಕು’ ಎಂದರು ನಮ್ಮ ಮೇಷ್ಟ್ರು. ನಮ್ಮಲ್ಲಿ ಗುಸುಗುಸು ಶುರುವಾಯಿತು. ಇದೆಲ್ಲ ನಮಗೆ ಹೊಸದು. ನಾವಾಡುತ್ತಿದ್ದ ಮಾತಿಗೆ ಮೇಷ್ಟ್ರು ಹೇಳಿದ ‘ಸಬ್ಜೆಕ್ಟ್’ ಎಂಬುದು ಇರಲೇ ಇಲ್ಲ. ಮಾತನಾಡಲು ಒಂದು ಸಬ್ಜೆಕ್ಟ್ ಇರಬೇಕೆಂಬುದೂ ನಮಗೆ ಗೊತ್ತಿರಲಿಲ್ಲ. ತೀರ ಗೊಂದಲಕ್ಕೊಳಗಾದೆವು. ಕುತೂಹಲದಿಂದ ಬಾಯಿಬಿಟ್ಟುಕೊಂಡು ಮೇಷ್ಟ್ರನ್ನೇ ನೋಡುತ್ತ ಮೌನವಾದೆವು.
‘ನಮ್ಮ ಹೊಲ, ನಮ್ಮ ಪಯಿರು’ ಎಂಬ ‘ಸಬ್ಜೆಕ್ಟನ್ನು’ ಮೇಷ್ಟ್ರು ಕೊಟ್ಟರು. ಅದನ್ನೇ ಬೋಡರ್್ ಮೇಲೆ ಬರೆದರು. ಯೋಚನೆ ಮಾಡುವುದಕ್ಕೆ ಹತ್ತು ನಿಮಿಷಗಳ ಅವಧಿಯನ್ನೂ ಕೊಟ್ಟರು. ನಮ್ಮ ಹೊಲವೂ ನಮಗೆ ಗೊತ್ತಿತ್ತು; ಪಯಿರೂ ಗೊತ್ತಿತ್ತು.
ಮೇಷ್ಟ್ರು ನನ್ನ ಹೆಸರನ್ನು ಕರೆದಾಗ ಎದ್ದು ನಿಂತೆ. ಮೇಷ್ಟ್ರ ಹತ್ತಿರ ಹೋದೆ. ಅವರು ನನ್ನನ್ನು ಹುಡುಗರ ಕಡೆಗೆ ತಿರುಗಿಸಿ ನಿಲ್ಲಿಸಿದರು. ಇಡೀ ತರಗತಿ ನನ್ನನ್ನೇ ನೋಡುತ್ತಿತ್ತು. ಹುಡುಗರು, ಹುಡುಗಿಯರು. ನಿತ್ಯವೂ ನಾನು ಮಾತನಾಡುತ್ತಿದ್ದ, ಜೊತೆಯಲ್ಲಿ ಓದುತ್ತಿದ್ದ, ಜಿಗುಟುತ್ತಿದ್ದ, ಪೆನ್ಸಿಲ್ ಕಸಿದುಕೊಳ್ಳುತ್ತಿದ್ದ, ಪುಸ್ತಕ ಕೊಡುತ್ತಿದ್ದ, ನೋಟ್ಸ್ ಕಾಪಿಮಾಡಿಕೊಳ್ಳುತ್ತಿದ್ದ ಇಂಥ ಹಲವಾರು ಕೃತ್ಯಗಳಿಗೆ ಜೊತೆಯಲ್ಲಿರುತ್ತಿದ್ದ ನನ್ನ ಗೆಳೆಯ ಗೆಳತಿಯರೇ. ಅವರೆಲ್ಲ ಮಾತು ಬಂದು ಮಾಡಿ ನನ್ನನ್ನೇ ನೋಡುತ್ತಿದ್ದರು. ನನ್ನ ಮಾತನ್ನು ಕೇಳಲು ತಯಾರಾಗಿ ಕುಳಿತಿದ್ದರು. ನನಗೆ ನಡುಕ ಶುರುವಾಯಿತು. ಗಂಟಲ ದ್ರವ ಆರಿತು. ಮೈ ಬೆವರತೊಡಗಿತು. ನಾನು ಮಾತನಾಡಬೇಕೆಂದುಕೊಂಡಿದ್ದೆಲ್ಲ ಮರೆತು ಹೋಯಿತು. ನನ್ನ ಸಹಪಾಠಿಗಳು ಮಾತಿಲ್ಲದೆ ಕಾದರು. ನನ್ನ ಮಾತುಗಳು ಎಲ್ಲಿಯೋ ಕಳೆದುಹೋಗಿದ್ದವು. ಒಂದೇ ಒಂದು ಶಬ್ದವನ್ನೂ ಆಡಲಾರೆ ಎನ್ನಿಸಿಬಿಟ್ಟಿತು. ನಿಲ್ಲುವುದಕ್ಕೂ ತ್ರಾಣವಿಲ್ಲದೆ ಕುಸಿಯುವಂತಾಯಿತು. ನನ್ನ ಮಾತಿಗಾಗಿ ಕಾದವರು ನಕ್ಕರು; ‘ಹೋ’ ಎಂದು ಕೂಗಿದರು. ಗುಸು ಗುಸು ಗದ್ದಲ ಸಂತೆಯಾಯಿತು. ಮೇಷ್ಟ್ರು ಏನೇನೋ ಹೇಳಿ ನಾನು ಮಾತನಾಡುವಂತೆ ಪುಸಲಾಯಿಸಿದರು. ಆದರೂ ಮಾತು ನನ್ನ ಗಂಟಲನ್ನು ದಾಟಲೇ ಇಲ್ಲ.
ಮುಂದೆ ನಾನು ಮಾತನ್ನು ಕಲಿತೆ. ಸಾರ್ವಜನಿಕ ವೇದಿಕೆಗಳನ್ನು ಹತ್ತಿ ನಿರ್ಭಯವಾಗಿ ಮಾತನಾಡುವುದನ್ನು ಕಲಿತೆ. ನಡುಗುವುದು, ತೊದಲುವುದು, ಬೆವರುವುದು ಎಲ್ಲ ನೀಗಿ, ಮಾತು ಸಲೀಸಾಗಿ ಆಡುವುದು ನನಗೆ ಬಂದುಬಿಟ್ಟಿತು. ಚಚರ್ಾಸ್ಪಧರ್ೆಯಲ್ಲಿ ಎಲ್ಲ ಮೆಚ್ಚಿ ತಲೆದೂಗುವಂತೆ ಮಾತನಾಡುವುದನ್ನು ಕಲಿತೆ. ವಿಷಯದ ಪರವಾದರೂ ಸರಿ, ವಿರೋಧವಾದರೂ ಸರಿ, ಸಲೀಸಾಗಿ ಮಾತನಾಡುತ್ತಿದ್ದೆ. ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುವುದು ಹೇಗೆ, ವೇದಿಕೆಯ ಮೇಲಿರುವವರನ್ನು ಹೊಗಳುವ ಬಗೆ ಹೇಗೆ, ಕೊಟೇಷನ್ಗಳನ್ನು ಎಲ್ಲೆಲ್ಲಿ ಹೇಗೆಹೇಗೆ ಬಳಸಬೇಕು ಇತ್ಯಾದಿ ಎಲ್ಲ ತಂತ್ರಗಳೂ ನನ್ನ ಕೈವಶವಾದವು. ಮಾತು ಮೋಹಕವಾಯಿತು.
ಇವತ್ತಿನ ಬಹುಪಾಲು ವೇದಿಕೆಗಳಲ್ಲಿ ಆಡುವ ಮಾತುಗಳು ಇದೇ ಮಾದರಿಯಲ್ಲಿರುತ್ತವೆ. ಮಾತಿನ ಕಲೆಯಲ್ಲಿ ನಾವೆಲ್ಲ ಪಳಗಿದವರೇ. ಕೇಳುವವರನ್ನು ನೋಡಿ, ಅವರನ್ನು ಸೆಳೆದುಕೊಂಡು ಗಂಟೆಗಟ್ಟಲೆ ಮಾತನಾಡುತ್ತೇವೆ. ಕೇಳುಗರಿಂದ ಚಪ್ಪಾಳೆ ಸಿಕ್ಕರಂತೂ ನಮ್ಮ ಮಾತುಗಳು ಹುಚ್ಚೆದ್ದ ಕಾಡು ಕುದುರೆಗಳೇ. ದಿಕ್ಕು ದೆಸೆ ಇಲ್ಲದೆ, ಗೊತ್ತು ಗುರಿ ಇಲ್ಲದೆ ಓಡುತ್ತಲೇ ಇರುತ್ತವೆ.
ಗಾಂಧೀಜಿಯವರಿಗೆ ಮಾತು ಸಲೀಸಾಗಿರಲಿಲ್ಲ. ಉಪವಾಸದಲ್ಲಿ ಮತ್ತು ಮೌನದಲ್ಲಿಯೆ ಅವರು ಬಹಳಷ್ಟು ಸಮಯವನ್ನು ಕಳೆದರು. ಅವರಿಗೆ ನುಡಿ ಎನ್ನುವುದು ನಡೆಯ ಇನ್ನೊಂದು ರೂಪವೇ ಆಗಿತ್ತು. ತಮ್ಮ ಮನದಲ್ಲಿ ಮೂಡಿದ ಚಿಂತನೆಯನ್ನು ಕಡೆದು ಕಡೆದು, ಅದನ್ನು ಬದುಕಲು ಸಾಧ್ಯವೇ ಎಂದು ಯೋಚಿಸುತ್ತಿದ್ದರು. ಬದುಕಿನಲ್ಲಿ ಅದರ ಸಾರ್ಥಕತೆಯನ್ನು ಕಂಡುಕೊಳ್ಳಲು ನೋಡುತ್ತಿದ್ದರು. ಅಲ್ಲಿಂದಲೇ ಮಾತುಗಳನ್ನು ಕಟ್ಟಿಕೊಳ್ಳಲು ಹೆಣಗುತ್ತಿದ್ದರು. ನಂತರವೇ ಅವರಿಗೆ ನುಡಿ ಸಿಗುತ್ತಿತ್ತು. ಸಾರ್ವಜನಿಕ ವೇದಿಕೆಯಾಗಲೀ, ಖಾಸಗೀ ಒಡನಾಟಗಳಾಗಲೀ ಅಲ್ಲೆಲ್ಲ ಅವರು ಬಳಸುತ್ತಿದ್ದ ‘ನುಡಿ’ ಇದೇ ಆಗಿರುತ್ತಿತ್ತು. ಹೀಗಾಗಿಯೇ ಗಾಂಧೀಜಿಯವರ ನಡೆ ಮತ್ತು ನುಡಿಗಳಲ್ಲಿ ಹೆಚ್ಚಿನ ಅಂತರ ಇರುತ್ತಿರಲಿಲ್ಲ; ಬಿರುಕು ಇರುತ್ತಿರಲಿಲ್ಲ. ಅವರ ನುಡಿಗೆ ಚೈತನ್ಯ ಇರುತ್ತಿತ್ತು. ಇತರರನ್ನು ಹಿಡಿದು ನಿಲ್ಲಿಸುವ ಶಕ್ತಿ ಇರುತ್ತಿತ್ತು. ಮೋಹಕವಾಗಿ, ಚೆಲುವಾಗಿ ಮಾತನಾಡುವುದಕ್ಕಿಂತ ಸತ್ಯವನ್ನು ಮಾತನಾಡಬೇಕೆಂದು ಅವರು ಪ್ರಯತ್ನಿಸುತ್ತಿದ್ದರು. ಗಾಂಧೀಜಿಯವರ ನುಡಿಗೆ ಚೈತನ್ಯ, ಬಲ ಇದ್ದರೆ ಅದು ಬರುತ್ತಿದ್ದುದು ಸತ್ಯದ ಬೆಂಬಲದಿಂದ. ಗಾಂಧೀಜಿಯವರ ಮಾತಿಗಿದ್ದ ಶಕ್ತಿಯ ಮಹಾನ್ ಸ್ವರೂಪ ಎಂಥದು ಎನ್ನುವುದು ನಮಗೆಲ್ಲ ತಿಳಿದೇ ಇದೆ. ಇಲ್ಲವಾದರೆ ನಮ್ಮನ್ನೆಲ್ಲ ಗುಲಾಮಗಿರಿಯಲ್ಲಿಟ್ಟದ್ದ ಬ್ರಿಟಿಷರು ನಮ್ಮ ದೇಶದಿಂದ ಕಾಲ್ತೆಗೆಯುವ ಸಾಧ್ಯತೆಯೇ ಇರುತ್ತಿರಲಿಲ್ಲ.
ವಚನಕಾರರಿಗೂ ಮಾತೆಂದರೆ ಕೇವಲ ಮಾತಾಗಿರಲಿಲ್ಲ. ಅದು ಅವರ ‘ವಚನ.’ ‘ನುಡಿದರೆ ಮುತ್ತಿನ ಹಾರದಂತಿರಬೇಕು.’ ಮುತ್ತಿನ ಹಾರವೆಂದರೆ ಮುತ್ತಿನ ಹೊಳಪು ಮತ್ತು ಅವುಗಳನ್ನು ಜೋಡಿಸುವ ಕ್ರಮ. ಜೋಡಣೆಯಲ್ಲಿ ಜಾಣತನವಿರಬಹುದು. ಆದರೆ ಮಾತಿಗೆ ಹೊಳಪು ಹೇಗೆ ಬರುತ್ತದೆ? ಇದು ನಮ್ಮ ಚಿಂತನೆಯ ದಿಕ್ಕನ್ನೇ ಬೇರೆಡೆಗೆ ತಿರುಗಿಸುತ್ತದೆ.
ವಚನಕಾರರು ಅಲ್ಲಿಗೇ ನಿಲ್ಲಿಸಲಿಲ್ಲ: ‘ನುಡಿದರೆ ಲಿಂಗ ಮೆಚ್ಚಿ ಅಹುದಹುದು ಎನಬೇಕು’ ಎಂದರು. ದೇವರನ್ನು ಮೆಚ್ಚಿಸುವ ನುಡಿ ಯಾವುದು? ನಡೆ-ನುಡಿಗಳು ಒಂದಾಗಬೇಕು ಎಂಬುದನ್ನೂ ವಚನಕಾರರು ಹೇಳಿ, ದೇವರನ್ನು ಮೆಚ್ಚಿಸುವ ನುಡಿ ಎಂಥದು ಎಂಬುದನ್ನೂ ಸೂಚಿಸುತ್ತಾರೆ. ‘ಸತ್ಯವೇ ದೇವರು’ ಎಂದ ಗಾಂಧೀಜಿಯವರ ಮಾತಿನಲ್ಲಿಯೂ ಈ ದೇವರ ಕಲ್ಪನೆಯಿದೆ.
ಸತ್ಯ, ಸುಂದರ, ಶಿವ ಇದೆಲ್ಲವನ್ನು ಒಳಹೊಕ್ಕು ನೋಡುತ್ತ ಹೋದರೆ, ನುಡಿ ಸಲೀಸಲ್ಲ ಎಂಬ ಸತ್ಯ ತಿಳಿಯುತ್ತದೆ.
ನಮ್ಮ ರಾಜಕಾರಣಿಗಳ ಮಾತುಗಳನ್ನು ನಾವು ನೆನಪಿಸಿಕೊಳ್ಳದಿರುವುದೇ ಒಳ್ಳೆಯದು. ಜಗತ್ತಿನ ಯಾವ ಸಂಗತಿಯ ಮೇಲಾದರೂ ಅವರು ಮಾತನಾಡುತ್ತಾರೆ; ಯಾವ ವ್ಯಕ್ತಿಯ ಬಗೆಗಾದರೂ ಅವರು ತೀಪರ್ು ಕೊಡುತ್ತಾರೆ. ಅವರಿಗೆ ಯಾವುದೂ ಕಷ್ಟವಲ್ಲ; ಯಾವುದೂ ಅಸಾಧ್ಯವಲ್ಲ.
ರಾಜಕಾರಣಿಗಳನ್ನು ಬಿಡಿ, ನಾವು-ಬರಹಗಾರರು, ಕಲಾವಿದರು, ಚಿಂತಕರು ಆಡುವ ಮಾತುಗಳಾದರೂ ಹೇಗಿವೆ?
ಮೊನ್ನೆ ಒಂದು ಸಮ್ಮೇಳನದಲ್ಲಿ ಲೇಖಕರೊಬ್ಬರು ಅಬ್ಬರಿಸುತ್ತಿದ್ದರು. ಅವರಿಗೆ ನುಡಿ ಸಲೀಸಾಗಿ ಸಿಗುತ್ತಿತ್ತು. ಎಲ್ಲಿಂದ ಎಲ್ಲಿಗೋ ಹೋಗುತ್ತಿದ್ದರು; ಯಾರು ಯಾರನ್ನೋ ಉದಾಹರಿಸುತ್ತಿದ್ದರು. ಹತ್ತಾರು ವಿಚಾರಗಳ ಧಾರೆಯನ್ನೇ ಹರಿಸುತ್ತಿದ್ದರು. ಅವರ ಸಿಟ್ಟು ಉರಿಯುತ್ತಿತ್ತು . ಪ್ರತಿಯೊಂದು ನುಡಿಯೂ ಕೆಂಡದುಂಡೆಗಳೇ. ಕ್ಷಣಕ್ಷಣಕ್ಕೂ ಅಬ್ಬರ. ಉದ್ವೇಗದಲ್ಲಿ ಅವರು ಯಾವುದೋ ಸಂಗತಿಯನ್ನು ಎತ್ತಿಕೊಂಡು, ಅದನ್ನು ಮರೆತು ಮತ್ತೆಲ್ಲಿಗೋ ಹೋಗುತ್ತಿದ್ದರು. ಅವರ ಹಾವ ಭಾವ ಮಾತುಗಳನ್ನು ಸಿಡಿಸುತ್ತಿದ್ದ ರೀತಿ ಎಲ್ಲವೂ ನೋಡುವಂತಿತ್ತು. ಮಾತು ಇಂಥವರಿಗೆ ಎಷ್ಟು ಸಲೀಸು!
ನಮ್ಮ ಮಾತುಗಳ ಬಗ್ಗೆ ನಾವೆಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಅವುಗಳ ಶಕ್ತಿ, ದೌರ್ಬಲ್ಯ, ಸ್ವರೂಪ, ಅವುಗಳ ಹೊಳಪು, ಸತ್ಯಕ್ಕೆ, ಬದುಕಿಗೆ ಅವು ಎಷ್ಟು ಸಮೀಪ ಅಥವಾ ದೂರ ಇತ್ಯಾದಿ ಯಾವುದೂ ನಾವು ಯೋಚಿಸುವುದಿಲ್ಲ. ನಮ್ಮ ಶಬ್ದ ಭಂಡಾರಕ್ಕೆ ಕೈಹಾಕಿ, ಸಿಕ್ಕ ಎಲ್ಲ ಪದಗಳನ್ನು ಚೆಲ್ಲುತ್ತೇವೆ. ಕೇಳುಗರೂ ಹಾಗೆಯೇ; ತಲೆದೂಗುತ್ತಾರೆ; ಚಪ್ಪಾಳೆ ತಟ್ಟುತ್ತಾರೆ. ‘ಎಷ್ಟು ಛಲೋ ಮಾತನಾಡಿದಿರಿ, ಸರ್’ ಎನ್ನುತ್ತಾರೆ.
ನಿಜಕ್ಕೂ ನಮ್ಮ ಮಾತುಗಳಲ್ಲಿ ‘ಚೆಲುವು’ ಇತ್ತೇ? ಚೆಲುವು ಎಂದರೆ ಸೌಂದರ್ಯ. ‘ಸತ್ಯಂ, ಶಿವಂ, ಸುಂದರಂ.’
ಸೌಜನ್ಯ : ಸಂಯುಕ್ತ ಕರ್ನಾಟಕ
 
‍ಲೇಖಕರು G

26 September, 2014

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. MANJUNATH.P

    Nice.. sir

  2. Kiran

    DVG speaks of R|H| Sreenivasa Shastry with great reverence. Mr Shastri was otherwise called “Silver Tounged” Shastri by British. Some of his speeches are still available. Beauty of talk should be experienced by listening to right people and inculcated as much as possible in our lives. Nice write up! Sir.

  3. Prabhakar M. Nimbargi

    Can we expect Prof. JP Basavaraju now to write on “MOUNA”? It would be quite interestin, educative and illuminative too.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading