ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತು ಮಾತು ಮಥಿಸಿ ಬ೦ದ ಮೌನದ ನವನೀತ….

‘ಮಾತು-ಮೌನ’ದ ಕುರಿತಿಷ್ಟು…

– ದಿ. ಬಿ. ಎಂ. ರಶೀದ್

ಗುಜರಿ ಅ೦ಗಡಿ ಪತ್ರಕರ್ತ, ಕವಿ ದಿ. ಬಿ. ಎಂ. ರಶೀದ್ ಅವರು ‘ಮಾತು-ಮೌನ’ದ ಕುರಿತಂತೆ ಬರೆದ ಕವಿತೆ ಇಲ್ಲಿದೆ. ಈ ಕವಿತೆಯನ್ನು ಅವರ ‘ಪರುಷಮಣಿ’ ಸಮಗ್ರ ಬರಹದಿಂದ ಆರಿಸಿಕೊಳ್ಳಲಾಗಿದೆ. ಚಿತ್ರ : ಮನೋಜ್ ಅಶ್ವತಿ 1. ಒಳಗೊಂದು ಸಭೆ! ‘ಮಾತು-ಮೌನ’ದ ನಡುವೆ ಜಟಾಪಟಿ!! ಮಾತಿಗೆ ಶಬ್ದಗಳಿವೆ: ಅರ್ಥಗಳಿಲ್ಲ ಮೌನಕ್ಕೋ ಅರ್ಥಗಳಿವೆ; ಶಬ್ದಗಳಿಲ್ಲ 2 ಮಾತಿಗೇನೋ ಹೇಳುವುದಿತ್ತು ಆದರೆ.. ಹೇಳಲಿರುವುದನ್ನು ಹೇಳದೇ ಬಿಡುವ; ಹೇಳಲಿಲ್ಲದ್ದನ್ನು ಹೇಳಿ ಬಿಡುವ ಭಯದಿಂದ ಮಾತು ಮೌನವಾಯಿತು 3 ಮಾತು ಮೌನವಾಗಿತ್ತು ಮಾತನಾಡಲೇನೂ ಇರಲಿಲ್ಲ- ವೆಂದಲ್ಲ ಸಮಸ್ಯೆ ಯಾವುದಾಗಿತ್ತೆಂದರೆ ಒಳಗೆ ಶಬ್ದಗಳ ಮುಷ್ಕರವಿತ್ತು 4 ಮಾತಿನೊಳಗೊಂದು ಮೌನವಿತ್ತು ಮಾತು ಮೌನವಾದೊಡನೆ ಮೌನ… ಮಾತನಾಡತೊಡಗಿತು 5 ಮಾತಿಗೇನೂ ಇಲ್ಲದಾಗ ಮಾತಿಗೆಲ್ಲ ಇದ್ದಾಗ ಮಾತು-ಮೌನ! ನಮ್ಮ ಮುಖಾಮುಖಿಯಲ್ಲಿ ನಾವೋ, ಏನನ್ನೂ ಮಾತಾಡದೇ ಎಲ್ಲವನ್ನೂ ಮಾತಾಡಿದೆವು ಮೌನ-ಮಾತು!! 6 ಮೌನದೊಳಗೊಂದು ಮಾತಿತ್ತು! ಧ್ವನಿಯಿರಲಿಲ್ಲ ಮಾತು ಮೌನಕೆ ಸೋತು, ಮೌನದ ತೆಕ್ಕೆಗೆ ಜೋತು ನೋಡಿದರೆ- ಕಣ್ಣಂಚಲ್ಲೊಂದು ಹನಿಯಿತ್ತು!]]>

‍ಲೇಖಕರು G

18 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading