ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಾತಾಡ್ರೊ’

ಅಜಮೀರ ನಂದಾಪುರ

ಇನ್ಮುಂದಾದ್ರು ಮಾತಾಡ್ರೋ
ಇವರ ಆಜ್ಞೆಗಳು ಅರ್ಥವಾಗಿವೆ ಚಪ್ಪಾಳೆ ತಟ್ಟಿದ ಕೈಗಳಿಗೆ ಗೊತ್ತಾಗಿದೆ
ತಾಟು ಬಾರಿಸಿದ ಕಾರಣ ತಿಳಿದಿದೆ
ದೇಶವೆಂದರೆ ಮನುಷ್ಯ
ಇನ್ಮುಂದಾದ್ರು ಮಾತಾಡ್ರೋ

ಇನ್ಮುಂದಾದರೂ ನೀವು ಮಾತಾಡ್ರೋ ನಮ್ಮನ್ನ ದಾತರ ಮಗ್ಗಲು
ಮುರಿದವರ
ಕಾರ್ಪೊರೇಟರ್ ಕಾವಲು ನಿಂತವರ ಪಾಲೆಂಬುದು ರುಜುವಾಗಿದೆ
ದೇಶವೆಂದರೆ ಅನ್ನ ಇನ್ಮುಂದಾದ್ರು ಮಾತಾಡ್ರೋ

ಸತ್ಯದ ಎದೆ ಸೀಳುತ ಸುಳ್ಳಿನ ಸೂಡುಕಟ್ಟುವ ಜೋಕುಮಾರರ ಪೇಕೆಂಬುದು
ಊರವರಿಗೆ ಅರಿವಾಗಿದೆ ದೇಶವೆಂದರೆ ಮಣ್ಣು
ಇನ್ಮುಂದಾದ್ರು ಮಾತಾಡ್ರೋ

ಮಾತು ಮಾತಿಗೂ ತೂತು ಕೊರೆದು ತೋರಣ ಬಿಗಿದು ತಾರೆಗಳ
ತೋರಿದವರ ಮಾತು ಮಾರಿ ಮಾನ ಕಳೆದು ಕೊಂಡವರ ಮಾತು
ಬಯಲಾಗಿದೆ ದೇಶವೆಂದರೆ ಮಾತಲ್ಲ ಇನ್ಮುಂದಾದ್ರು ಮಾತಾಡ್ರೋ

ನಮ್ಮಲ್ಲೆಲ್ಲಾ ಜಾತಿ ಬಣ್ಣವ ಬಳಿದು ಒಂದುಗೂಡದ ತಂತಿ ಬಿಗಿದು ರಸ್ತೆಗೂ
ಮೊಳೆ ನೆಟ್ಟವರ ಅಟ್ಟಹಾಸ ಬಟ್ಟಬಯಲಾಗಿದೆ ದೇಶವೆಂದರೆ ಜಾತಿಯಲ್ಲ
ಇನ್ಮುಂದಾದ್ರು ಮಾತಾಡ್ರೋ

ಮಾತಾಡ್ರೋ ಮಾತಾಡ್ರೋ ನದಿಯಲಿ ಹೆಣಗಳು ಪಾಳಿ ನಿಂತಿವೆ
ಎದೆಯ ಗುಂಡಿಗೆ ಗುರಿ ಇಕ್ಕಿದೆ ಅನ್ನವೇ ರೈತ ಎಂದವರೇ ಈಗ್ಲಾದ್ರೂ ಮಾತಾಡ್ರೋ
ಇನ್ಮುಂದಾದ್ರು ಮಾತಾಡ್ರೋ

‍ಲೇಖಕರು Avadhi

10 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading