ಕು ಸ ಮಧುಸೂದನ್
ಜೊತೆಗಿದ್ದವರೆಲ್ಲ ಎದ್ದು ಹೋದರೂ
ಒಂಟಿ ಕಾಲಲ್ಲೇ ನಿಂತು
ಮಾತಾಡುತ್ತಲೇ ಇದ್ದಾಳೆ
ಅವನು ಪರಿಚಯಿಸಿದ ನಕ್ಷತ್ರಗಳ ಜೊತೆಗೆ
ಮುಗಿದ ಇರುಳಿಗೆ ತೆರೆದು ಬಾಗಿಲು
ಬಂದಹಗಲಿನಲ್ಲೂ
ಮಾತಾಡುತ್ತಲೇಇದ್ದಾಳೆ
ಅವನು ಬಿಟ್ಟು ಹೋದ ಏಕಾಂತದ ಜೊತೆಗೆ.
ಅಸ್ಥವ್ಯಸ್ಥವಾದ ಹಾಸಿಗೆ ದಿಂಬುಗಳ
ಹೊದಿಕೆಗಳ ಬದಲಿಸುತ್ತ
ಮಾತಾಡುತ್ತಿದ್ದಾಳೆ
ಉಟ್ಟ ಬಟ್ಟೆಗಳು ಮುಚ್ಚಿಟ್ಟ ಗುಟ್ಟುಗಳ
ರಟ್ಟಾಗಿಸಿದಾ ನಸುಗತ್ತಲಲಿ ಮೀಯುತ್ತಿರುವ ಕೊಣೆಯ ಜೊತೆಗೆ

ಕೊನೆಯಿರದ ಕಡಲತಡಿಯಕತ್ತಲಲಿ
ಕಡುಗಪ್ಪಾದ ನೀಲಿಯ ನೆನಸಿಕೊಂಡು
ಮಾತಾಡುತ್ತಲೇ ಇದ್ದಾಳೆ
ತೆರೆಗಳಜೊತೆ
ಉಣ್ನುವಾಗ ನೆತ್ತಿಗೇರಿ ಬಿಕ್ಕಳಿಸಿದವನ
ತಲೆ ತಟ್ಟಿ ನೀರು ಕುಡಿಸಿ
ಬೀಳ್ಕೊಟ್ಟವಳಿನ್ನೂ ಮಾತಾಡುತ್ತಲೇ ಇದ್ದಾಳೆ
ಎದ್ದು ಹೋದವಹೆಜ್ಜೆ ಗುರುತು
ಉಳಿಸಿದ ಹಾದಿಯ ಜೊತೆಗೆ






ಚೆನ್ನಾಗಿದೆ.
ದನ್ಯವಾದ ಮೇಡಂ