ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತೇಶ ನವಲಕಲ್ ಹೊಸ ಕವಿತೆ – ಕಾರ್ಲಮಾರ್ಕ್ಸ ಗೆ ಕಲ್ಯಾಣಕೆ ಆಹ್ವಾನ…

ಮಹಾಂತೇಶ ನವಲಕಲ್


ಮಾರ್ಕ್ಸ ಮಹಾಶಯ
ನಿನ್ನನು ಕಲ್ಯಾಣಕೆ ಆಹ್ವಾನಿಸುತ್ತಿದ್ದೇನೆ
ಇಲ್ಲಿಗೆ ನಿನಗೆ ಮನಸಾರೆ ಸ್ವಾಗಿತಿಸುತ್ತೇನೆ
ಹಿಂದೆಯೂ ಆಹ್ವಾನಿಸಿದ್ದೆ
ಕೆಲಸವಿದೆ ಎಂದು ತಪ್ಪಿಸಿಕೊಂಡೆ
ಈಸಲ ತಪ್ಪಿಸುವ ತಪ್ಪು ಮಾಡಬೇಡ
ಇರಲಿ ನನ್ನ ಕಾಲಕ್ಕೂ ನಿನ್ನ ಕಾಲಕ್ಕೂ
ಆರುನೂರು ವರ್ಷ ಅಂತರ
ಕಲಾತೀತ ಸಂವಾದ ವ್ಯೂಮ
ಮಾರ್ಗದಲಿ ನಿರಂತರ


ನಾನು ಯಾರೆಂದು ನಿನಗೆ ಹೇಳಿದ್ದೇನೆ
ಆದರೂ ಮತ್ತೊಮ್ಮೆ ಮಗದೊಮ್ಮೆ
ಇನ್ನೊಮ್ಮೆ ನೆನಪಿಸುತ್ತೇನೆ
ನಾನು ಕಾಶ್ಮೀರದ ರಾಜ ಮಹಾದೇವ ಭೂಪಾಲ,
ಏಳು ಅ ಕ್ಷೋಹಿಣಿ ಸೈನ್ಯದ ಮಾತು
ಅದು ಯಾವಾಗಲೂ ಅಂಕವಾತು
ಐದು ಸಾವೀರ ಕುದುರೆಗಳ ವರ್ಚಸ್ಸು
ಮತ್ತೆ ಕಂಡಲ್ಲಿ ದಂಡೊಯ್ದು ಭೂಮಿಯ
ವಶಮಾಡಿಕೊಳ್ಳುವ ಹುಮ್ಮಸ್ಸು
ಕಂಡ ಜಗವೆಲ್ಲ ನನ್ನದೆನ್ನುವ ಮನಸ್ಸು
ಇಂಥಹ ರಾಜ ಬದುಕಬಾರದು, ಉಳಿಗೆ ತಲೆಕೊಟ್ಟು
ಉಳಿಯಬಾರದು, ಇದು ನಿನ್ನದೆ ಸಾಲು.
ನಿನ್ಮ ಮ್ಯಾನಿಫೆಸ್ಟೊಕ್ಕೆ ನನ್ನ ತಲೆಹೊಡೆಯುವ
ನಿಯಾತಾಂಕ ಇಷ್ಟು ಸಾಕಾಗಿತ್ತು


ಕಲ್ಯಾಣದಲಿ ಕೂಗಿದ ಆ ಕಲ್ಲು ಕೋಳಿ
ಕಾಶ್ಮೀರಕ್ಕೂ ತನ್ನ ಕೂಗು ಕೇಳಿಸಿತ್ತು
ದಯವೇ ಧರ್ಮದ ಮೂಲವಯ್ಯ ಎಂಬ ಅಗುಳ ಧ್ವನಿ
ಕಾಯಕ ದಾಸೋಹವೇ ಕೈಲಾಸವೆಂಬ ತತ್ವನಿಷ್ಠ ಬನಿ
ನಾನು ಬಂದಿದ್ದು ಇಲ್ಲಿಗೆ


ಹೆಗಲ ಮೇಲೆ ಹೊತ್ತ ಕಾಡು
ಭುಜಗಳ ಗಟ್ಟಿಗೊಳಿಸಿತು
ಪೂರ್ವಾಶ್ರಮದ ತಳಮಳ ಹಪಾಹಪಿ
ಭಯ ಕಟ್ಟಿಗೆ ಸೀಳಿದಂತೆ ಸೀಳಿ ಹೋಯಿತು
ನಾವಿಬ್ಬರೂ ಆಳಾಗಿ ದುಡಿದು ಅರಸನಾಗಿ ಉಂಡೆವು
ನಾನು ರಾಜನೆಂಬುವ ನೆನೆಪೇ ಮನದಲಿ
ಯಾವುದೆ ಕುರುಹುಗಳಿಲ್ಲದೆ ಕರಗಿ ಹೋಯಿತು
ಜಾರ್ ದೊರೆಗಳ ಅಜ್ಞಾತ ಸಮಾಧಿಗಳಂತೆ.


ಕಲ್ಯಾಣ ದೊಡ್ಡದೋ ನಿನ್ನ ಮ್ಯಾನಿಫೆಸ್ಟೋ ದೊಡ್ಡದೋ
ಎಂದು ಹೇಳುತ್ತಿಲ್ಲ ನಾನು
ಆದರೆ ಬಂದು ನೋಡು ಒಂದು ಸಲ ನನ್ನ ಕಲ್ಯಾಣಕೆ
ನೆತ್ತರಿನ ನಂಜಿಲ್ಲದೆ ನಿನ್ನ ಸಂವೀಧಾನ ಅರಳಿದ್ದು ಹೇಗೆ
ಅದುವೇ ಕಾಯಕ ದಾಸೋಹ ಆದ ಬಗೆ
ನನ್ನ ರಕ್ತ ಸಿಕ್ತವಾದ ಕೈಗಳನು ತೊಳೆದಿದ್ದು
ಇದುವೆ ತ್ರಿಪುರಾಂತ ಎಂಬ ಕರೆಯ ನೀರು
ಸಕಲ ಜೀವಾತ್ಮರಿಗೂ ಲೇಸನೆ ಬಯಸಿದ ಸೂರು
ಅಂದೆ ನಾನು ಮºದೇವ ಭೂಪಾನಿಂದ ಮಾರಯ್ಯನಾಗಿ
ಬದಲಾದೆ
ನೀನು ಬಂದಾಗ ಕಲ್ಯಾಣಕೆ
ಇಲ್ಲಿ ಕೈತೊಳೆಯಬಹುದು
ಮುಖತೊಳೆಯಬಹುದು ಮುಳಗಿಯೂ ಏಳಬಹುದು

‍ಲೇಖಕರು Admin

4 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading