ಮಳೆ ಸುರಿದದ್ದಷ್ಟೇ ನಿಜ
– ಸುಖೇಶ್
ರೆಪ್ಪೆ ಮುಚ್ಚಿ ತೆರೆವಷ್ಟರಲ್ಲಿ
ಕಳ್ಳ ಮಳೆಯೊಂದು ಇಣುಕಿ ಮರೆಯಾಯ್ತು
ಹನಿಗಳಲ್ಲಿ ಮೂಡಿದ ಬಿಂಬಗಳಲ್ಲಿ
ಅವಳ ಮುಂಗುರುಳು ಬಣ್ಣ ಬಣ್ಣ
–
ಜೊತೆ ನಡೆವಾಗ ಸಿಲೋನ್ ರೇಡಿಯೋದಲ್ಲಿ
ಮುಖೇಶ್ ರಫಿ ಕಿಶೋರ್
ನಿಯಾನ್ ದೀಪಗಳಡಿ
ಸಣ್ಣಗೆ ನಾಚಿದ ಹನಿಗಳಿಗೆ
ಮಳೆ ಅಂತ ಹೆಸರಿಟ್ಟೆ
–
ಅವಳ ತುಟಿ ಮೇಲೆ ಬಿದ್ದ ಹನಿಯೊಂದು
ಆವಿಯಾಗಿ ಮೋಡ ಸೇರಿ ಬಿಟ್ಟಿತು
ಹನಿಯೊಂದ ಕಳಕೊಂಡ ನಾ
ನೆನಪುಗಳ ಸೇರಿಬಿಟ್ಟಿದ್ದೇನೆ
–
ಇರುಸಲು ಹೊಡೆವ ಮಳೆಗೆ
ಹದಾ ಸುಟ್ಟ ಹಪ್ಪಳ ಹಬೆಯಾಡೋ ಕಾಫಿ…
ಬೇಡ ಬಿಡು
ನಿನ್ನ ನೆನಪುಗಳೇ ಬೆಚ್ಚಗಿವೆ
–
ಮಳೆಗಾಗಿ ಕಾದದ್ದು ಹೆಚ್ಚೋ
ನಿನಗಾಗಿ ಕಾದದ್ದು ಹೆಚ್ಚೋ
ಗೊತ್ತಿಲ್ಲ
ಮಳೆ ಸುರಿದದ್ದಷ್ಟೇ ನಿಜ]]>






0 Comments