ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಕಾರ್ಜುನ ಹೊಸಪಾಳ್ಯ ಓದಿದ ‘ಪರ್ಮಾಕಲ್ಚರ್’

ಮಲ್ಲಿಕಾರ್ಜುನ ಹೊಸಪಾಳ್ಯ

ಎರಡು ದಶಕಗಳ ಹಿಂದೆಯೇ ಪರ್ಮಾಕಲ್ಚರ್ ಎಂಬ ಶಬ್ದ ನನ್ನ ಕಿವಿಗೆ ಬಿದ್ದಿತ್ತು. ಅರೋವಿಲ್ಲೆಯಿಂದ ಹಲವು ಕೃಷಿಕರು ನಮಗೆ ಈ ಬಗ್ಗೆ ಪಾಠ ಹೇಳಿದ್ದರು, ಪ್ರಾಯೋಗಿಕವಾಗಿ ಕೈಮುಟ್ಟಿ ಕೆಲಸವನ್ನೂ ಮಾಡಿಸಿದ್ದರು. ಶ್ರೀಲಂಕಾಗೆ ಭೇಟಿ ಕೊಟ್ಟು ಅಲ್ಲಿಯೂ ಈ ಪದ್ಧತಿಯನ್ನು ಅನುಸರಿಸುತ್ತಿರುವ ಹಲವು ಸಂಸ್ಥೆ ಹಾಗೂ ವ್ಯಕ್ತಿಗಳನ್ನು ಭೇಟಿ ಮಾಡಿದ ನೆನಪು.

ಈ ಅನುಭವಗಳ ಆಧಾರದಲ್ಲಿ ಕೆಲವು ವಿನ್ಯಾಸಗಳನ್ನು ಕಲಿತು ನಮ್ಮ ರೈತರ ಹೊಲ ಹಾಗೂ ಕೈತೋಟಗಳಲ್ಲಿ ಅಳವಡಿಸಿದ್ದೆವು. ಈ ಕುರಿತ ಚರ್ಚೆ, ಪ್ರವಾಸ, ತರಬೇತಿಗಳಲ್ಲಿ ಬಿಲ್ ಮೊಲ್ಲಿಸನ್, ಅರ್ಧೇಂದು ಚಟರ್ಜಿ ಅವರ ಹೆಸರುಗಳು ಪ್ರಸ್ಥಾಪವಾಗುತ್ತಿದ್ದವು. ಇದೀಗ ಈ ಬಗ್ಗೆ ಒಂದು ಸೊಗಸಾದ ಪುಸ್ತಕ ಪ್ರಕಟಗೊಂಡಿದೆ. ‘ಪರ್ಮಾಕಲ್ಚರ್ ಶಾಶ್ವತ ಕೃಷಿಯ ಕಲೆ ಮತ್ತು ವಿಜ್ನಾನ’ ಹೆಸರಿನ ಈ ಕೃತಿಯನ್ನು ಇಕ್ರಾ ಸಂಸ್ಥೆ ಅಚ್ಚುಕಟ್ಟಾಗಿ ಮುದ್ರಿಸಿದೆ.

ಇಡೀ 275 ಪುಟಗಳ ಪುಸ್ತಕವನ್ನು ಓದಿ ಮುಗಿಸಿದರೆ ಒಂದು ಹಸಿರುಕ್ಕುವ, ವಿವಿಧ ವಿನ್ಯಾಸಗಳ, ಜೀವಂತ ಬೇಲಿಯ, ಹಣ್ಣು-ತರಕಾರಿಗಳಿಂದ ಸಮೃದ್ಧವಾದ ತೋಟವನ್ನು ಸುತ್ತು ಹಾಕಿ ಬಂದ ಅನುಭವ. ‘ಈಗಾಗಲೇ ವಿಷಮುಕ್ತ ಬೇಸಾಯ ಮಾಡುತ್ತಿರುವವರಿಗೂ, ಅದರೆಡೆಗೆ ಹೊರಳಬೇಕೆಂಬ ಹಂಬಲ ಇರುವವರಿಗೂ ಮತ್ತು ಹೊಸದಾಗಿ ಕೃಷಿಗೆ ಕಾಲಿಡಲು ಬಯಸುತ್ತಿರುವವರಿಗೂ ಈ ಪುಸ್ತಕ ಸಮಾನವಾಗಿ ಉಪಯುಕ್ತವಾಗಬಲ್ಲದು’ ಎಂದು ತಮ್ಮ ಮುನ್ನುಡಿಯಲ್ಲಿ ಶಿವರಾಂ ಪೈಲೂರು ಸರಿಯಾಗಿಯೇ ಹೇಳಿದ್ದಾರೆ. ಇದೇ ಈ ಕೃತಿಯ ಮಹತ್ವ. ಅನುಭವಾಧಾರಿತ ಮಾಹಿತಿ, ಚಿತ್ರಗಳು, ರೇಖಾ ವಿನ್ಯಾಸಗಳಿಂದ ಕೂಡಿರುವ ಈ ಪುಸ್ತಕ ಒಂದು ಸುಂದರವಾದ ಹೆಣಿಗೆ.

ಪುಸ್ತಕ ಕೊಳ್ಳಲು booksloka.com ಗೆ 98863 63531 ಸಂಪರ್ಕಿಸಿ

‍ಲೇಖಕರು Admin

22 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading