
ಚರಿತಾ
ಮಲಯಾಳಂನ ‘ರಾಣಿ ಪದ್ಮಿನಿ’ ನೋಡ್ದೆ.
ಮಲಯಾಳಿಗಳಿಗಿರೊ sense of humour ನಿಜಕ್ಕೂ ಅಪರೂಪದ್ದು.
ಈ ಇಬ್ಬರು ಸುಂದ್ರೀರ ಕತೇನ ಇದಕ್ಕಿಂತ ಚೆನ್ನಾಗಿ ಹೇಳೋದು ಸಾಧ್ಯವೇ ಇಲ್ಲ ಅನ್ಸುತ್ತೆ. ಅಲ್ಲಿರೋ ಗಂಡಸರೆಲ್ಲ ಇವರ ಮುಂದೆ ಅಸಹಾಯಕ ಕಮೀಡಿಯನ್ ಗಳ ಥರ ಕಾಣ್ತಾರೆ !
ಈ ಇಬ್ಬರು ಮಹಿಳೆಯರ will power ಅದ್ಭುತವಾದ್ದು. ಇಬ್ಬರು ತುಂಟ ಹುಡುಗೀರು ತಮ್ಮ ಬದುಕನ್ನು ತಮ್ಮದೇ ರೀತಿಯಲ್ಲಿ ಕಟ್ಟಿಕೊಳ್ಳುವ ಕತೆ !
ಕೊನೇ shot ನಂಗೆ ತುಂಬಾ ಇಷ್ಟ ಆಯ್ತು. ಅವರೇ ಕಟ್ಟಿಕೊಂಡ ಅವರದೇ ಕನಸಿನಂಥ ‘ನಿಜ’ದಲ್ಲಿ ನಗುವ ಸಖಿಯರು! ನಿಜದ ಕಹಿಯನ್ನೆಲ್ಲ ನುಂಗಿ ತಮ್ಮ ನಗುವನ್ನು ಹಸಿಯಾಗಿ ಉಳಿಸಿಕೊಳ್ಳಬಲ್ಲ ಗಟ್ಟಿಗಿತ್ತಿಯರು! ಎಲ್ಲಾ ಮಹಿಳೆಯರದ್ದೂ ಇಂಥದ್ದೇ ಕಥೆ ಆದ್ರಿಂದ ಈ ಇಬ್ಬರೂ ನಮ್ಮವೇ ಪಾತ್ರಗಳು ಅನಿಸಿದರೆ ಆಶ್ಚರ್ಯವಿಲ್ಲ.
ತುಂಬ ದಿನಗಳ ನಂತರ ಹೊಟ್ಟೆ ತುಂಬ ನಕ್ಕೆ ! 😊
ತುಂಬಾ ಗಂಭೀರ ಅನಿಸಿಬಿಡಬಹುದಾದ ಕತೆಯನ್ನ comedy, adventure, fantasy ಎಲ್ಲದರ ಜೊತೆಗೆ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ಇನ್ನೂ ನೋಡಿಲ್ಲದಿದ್ರೆ ಖಂಡಿತ ನೋಡಿ.






Someone says I watched this Malayalam movie, someone else says I watched this Telugu/Tamil/Marathi movie watch it.
In our Bengaluru theater owners throw new/good running Kannada movies to dustbins like waste paper and fall over each other to show other language movies..People line up for hours, pay exhorbitant prices to watch those other language movies.
And when all is said, done and dusted, the same people sit down and write save Kannada movies..:)