ವಿನಾಯಕ ಜಿ
ಮೊನ್ನೆ ತಾನೇ ಪಿಯುಸಿ ಮುಗಿಸಿದ ನೆನಪು, ಸ್ನೇಹಿತರನ್ನು ಕಳೆದುಕೊಂಡದ್ದು ಮನಸ್ಸಿಲ್ಲಿ ಅಳಿಸಿಹೋಗಿಲ್ಲ, ಅಷ್ಟರಲ್ಲೇ ಮುಂದಿನ ಕಾಲೇಜು ಲೈಫು ಅನುಭವಿಸುವ ಸಂದರ್ಭ ಬಂದೆಬಿಟ್ಟಿತು. ಅದರಲ್ಲೂ ಡಿಗ್ರಿ ಅಂದರೆ ಹಾಗೇನೆ ಕಂಡ್ರೀ ಓದು, ಮೋಜು, ಮಸ್ತಿ, ಲವ್, ಫ್ರೆಂಡ್ಶಿಪ್ ಹೀಗೆ ಹಲವಾರು ತರಹದ ಅನುಭವನನ್ನು ಕೊಡುತ್ತದೆ. ಅದರಲ್ಲಿ ನಾನೂ ಕೂಡ ಕಮ್ಮಿ ಇರಲಿಲ್ಲ. ನಾನೂ ಚೆನ್ನಾಗಿ ಓದಿ ಡಿಗ್ರಿ ಪಡೆದುದುಕೊಂಡು ಒಬ್ಬ ಒಳ್ಳೆ ಜರ್ನಲಿಸ್ಟ್ ಆಗಬೇಕೆಂದು ಹಳ್ಳಿಯಿಂದ ನಗರದತ್ತ ಪ್ರಯಾಣಮಾಡಿದೆ.
ಮೊನ್ನೆ ಮೊನ್ನೆ ಡಿಗ್ರಿಯನ್ನು ಸೇರಿದ ಕಲ್ಪನೆ ಕಣ್ಣ ಮುಂದೆ ಹಾಗೇ ಇದೇ ಅಷ್ಟರಲ್ಲೇ ಐದನೇ ಸೆಮಿಸ್ಟರ್ ಮುಗಿಸಿ ಕೊನೆಯ ಸೆಮ್ ಬಂದೆಬಿಟ್ಟಿದೆ. ಕಾಲೇಜು ಲೈಫು ಅಂದರೆ ನನಗಂತೂ ತುಂಬಾ ಇಷ್ಟ ಅದರಲ್ಲೂ ಡಿಗ್ರಿ ಲೈಫು ಮರೆಯೊದಕ್ಕೆ ಸಾಧ್ಯ ವಿಲ್ಲ. ಕಾಲೇಜಿಗೆ ಹೋಗುವ ನಮ್ಮ ವಯಸ್ಸೆ ಅಂತಹದು, ಈ ಸಮಯದಲ್ಲಿ ಫ್ರೆಂಡ್ಸ್ ಇಲ್ಲದಿದ್ದರೆ ಚೆನ್ನಾಗಿರುತ್ತಾ, ಫ್ರೆಂಡ್ಸ್ ಆದ ನಂತರ ಜಗಳ ಇಲ್ಲದೆ ಇರೋದಕ್ಕೆ ಸಾಧ್ಯನಾ, ಇನ್ನೂ ಕಾಲೇಜು ಲೈಫು ಆದ್ರೆ ಒಬ್ಬ ಕನಸಿನ ಕನ್ನೆ ಇರದಿದ್ದರೆ ಹೇಗೆ? ಅವಳಿಗಾಗಿ ಬೇರೆಯವರೊಂದಿಗೆ ಜಗಳವಾಡದೆ ಇರೋಕ್ಕೆ ಆಗುತ್ತ! , ನನಗೆ ಬೇಜಾರಾದಗಾ ಯಾವಾಗಲೂ ಹಿಂದೆ ಇದ್ದು ಪ್ರೋತ್ಸಾಹ ನೀಡಿ ಮನಸ್ಸಿಗೆ ನೆಮ್ಮದೆ ನೀಡುತ್ತಿದ್ದ ಹಾಗೂ ಕೆಲವೊಮ್ಮೆ ಅಸೈನ್ಮೆಂಟ್ ಬೆರೆದುಕೊಟ್ಟ ಗೆಳೆಯರನ್ನೂ ಮರೆಯಲು ಸಾಧ್ಯವೇ? ಹುಡುಗಿಯರ ಜೊತೆ ಕಾಫಿ ಡೇ ಹೋಗೊದು, ಇಷ್ಟಕ್ಕೆ ಮುಗಿಯದ ನನ್ನ ಡಿಗ್ರಿ ಲೈಫು ಇನ್ನೂ ವಿಭಿನ್ನಾವಾಗಿತ್ತು.

ನನಗೆ ಪತ್ರಿಕೋದ್ಯಮ ವಿಷಯದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ನಾನೂ ಆ ವಿಷಯದ ವಿದ್ಯಾಥರ್ಿಗಳ ಜೊತೆ ಹೆಚ್ಚಾಗಿ ಬೇರೆಯುತ್ತಿದ್ದೆ. ಮೊದಲ ವರ್ಷದಲ್ಲಿ ರೆಕ್ಕೆಇಲ್ಲದ ಹಕ್ಕಿಯಂತೆ ಇದ್ದ ನಾವುಗಳು ಎರಡನೇ ವರ್ಷದಲ್ಲಿ ಫುಕ್ಕ ಬಂದಂತಾಯಿತು. ಏಕೆಂದರೆ ಮೊದಲು ನಮಗೆ ಯಾರ ಸಂಪರ್ಕವು ಇಲ್ಲದೆ ಫ್ರೆಂಡ್ಸ್ಗಳ ಹುಡುಕಾಟದಲ್ಲಿ ನಿರತರಾಗಿದ್ದೆವು. ಫ್ರೆಂಡ್ಸ್ ಸಿಕ್ಕ ನಂತರ ನವೆಲ್ಲಾ ಮಾಡಿದ ತುಂಟಾಟಗಳು ಒಂದೇ ಎರೆಡೆ.!
ಪತ್ರಿಕೋದ್ಯಮ ಆಂದ ಮೇಲೆ ಸ್ವಲ್ಪ ಕಾಮಿಡಿ- ಸ್ವಲ್ಪ ಸೀರಿಯಸ್ ಇದ್ದದ್ದೆ, ನಾವು ನಮ್ಮ ಕಾಲೇಜಿಗೆ ಯಾವುದಾದರೂ ಒಂದು ರೀತಿಯಲ್ಲಿ ಸೇವೆ ಸಲ್ಲಿಸಬೇಕೆಂದು ಕ್ಯಾಂಪಸ್ ಟೈಮ್ಸ್ ಪತ್ರಿಕೆಯನ್ನು ಆರಂಭಿಸಿದೆವು. ಈ ಸಂದರ್ಭದಲ್ಲಿ ಒಂದು ಪತ್ರಿಕೆಯನ್ನು ಹೊರತರಬೇಕೆಂದರೆ ಎಷ್ಟು ಕಷ್ಟ ಎಂಬುದು ಅರಿವಾಯಿತು. ಸುದ್ದಿಯನ್ನು ಹುಡುಕುವಾಗ ಹಾಗೂ ಪತ್ರಿಕೆಯನ್ನು ‘ಅವಸರದ ಸಾಹಿತ್ಯ’ ಎನ್ನುವ ಹಾಗೇ ಪತ್ರಿಕೆಗೆ ಸರಿಯಾದ ಸಮಯದಲ್ಲಿ ಸುದ್ದಿಯನ್ನು ಮುಟ್ಟಿಸುವ ಜವಾಬ್ದಾರಿ ಹೊತ್ತಾಗ ಅದರ ಪಾಡನ್ನು ಅನುಭವಿಸುವುದೇ ಒಂಥರ ಖುಷಿ ನೀಡುತ್ತಿತ್ತು.
ಇನ್ನೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆಂದು ಆಯೋಜನೆ ಮಾಡುತ್ತಿದ್ದ ‘ಮಾಧ್ಯಮ ಹಬ್ಬಗಳು’ ಹೇಗೆ ತಾನೇ ಮರೆಯಲು ಸಾಧ್ಯ? ಮಾಧ್ಯಮ ಹಬ್ಬಗಳಿಗೆಂದು ಹೋಗುವಾಗ ಗೆಳೆಯರ ಜೊತೆ ಪ್ರಯಾಣ ಮಾಡುವಾಗ ಕಿಟಲೆ ಮಾಡಿದ್ದು, ಯಾವುದೇ ಪ್ರಿಪೇರ್ ಇಲ್ಲದೇ ಮಾಧ್ಯಮ ಹಬ್ಬದಲ್ಲಿ ಪಾಲ್ಗೋಂಡು ಅದರಲ್ಲಿ ಒಂದೆರೆಡು ಪ್ರಶಸ್ತಿಯನ್ನು ಗೆದ್ದು ನನ್ನ ಫ್ರೆಂಡ್ಸ್ ಜೊತೆಗೂಡಿ ಕಾರ್ಯಕ್ರಮದ ಇವೆಟ್ಸ್ಗಳು ಮುಗಿಯುತ್ತಿದ್ದಂತೆ ಸಮಯಕ್ಕೆ ಸರಿಯಾಗಿ ಉಪಹಾರಕ್ಕೆ ಹೋದದ್ದು, ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರ ಮಾತುಗಳನ್ನು ಕೇಳಿ ಇನ್ನೂಳಿದ ಸಮಯಲ್ಲಿ ಊರು ಸುತ್ತೋಕೆ ಹೋದದ್ದು ಇನ್ನೂ ಕೆಲವೇ ದಿನಗಳಲ್ಲಿ ಬರೀ ನೆನಪು ಮಾತ್ರ…
ಕಾಲೇಜು ಲೈಫಿನಲ್ಲಿ ಇಂಟರ್ನಲ್ ಮಾಕ್ಸ್ಗಾಗಿ ಕೇಲವು ಲಕ್ಚರ್ ಜೊತೆ ಜಗಳ ಮಾಡಿದ್ದು, ಗೆಳೆಯರೊಂದಿಗೆ ಕ್ಲಾಸ್ಗೆ ವಿದಾಯ ಹೇಳಿ ಸಿನಿಮಾಗೆ ಹೋದದ್ದು, ಕೆಲವೊಂದು ಸಲ ಒಳ್ಳೆಯ ಕೆಲಸ ಮಾಡಿ ಸರ್, ಮೇಡಮ್ಗಳಿಂದ ಶಬ್ಬಾಷ್ಗಿಟ್ಟಿಸಿದ್ದು, ಗಾರ್ಡನ್ನಲ್ಲಿ ಕುಳಿತು ಹುಡುಗಿಯರಿಗೆ ಚುಡಯಿಸಿದ್ದು, ಇದೆಲ್ಲಾ ಇನ್ನೂ ಮೂರು-ನಾಲ್ಕು ತಿಂಗಳು ಮಾತ್ರ ಅನುಭವಿಸಿ ಮುಂದೆ ಬರೀ ಕಣ್ಣಿನ ಮುಂದಿನ ಕಲ್ಪನೆ ಮಾತ್ರ.
ನಾನೂ ಹಳ್ಳಿಯಿಂದ ನನ್ನ ಆಸೆ ಹೊತ್ತು ಬಂದಂತೆ ಓಳ್ಳೆಯ ಗೆಳೆತನದಿಂದ ಸಂಪೂರ್ಣ ಯಶಸ್ಸು ಸಾಧಿಸಿದ್ದೆನೆ ಎಂಬ ನಂಬಿಕೆ ನನಲ್ಲಿದೆ. ನಿಮ್ಮ ಡಿಗ್ರಿಯಲ್ಲೂ ಗೆಳೆಯರು ಯಾವರೀತಿ ಇರಬೇಕೆಂದು ನೀವೇ ಆಯ್ಕೆ ಮಾಡಿಕೊಳ್ಳಿ ನಿಮ್ಮ ಫ್ರೆಂಡ್ಸ್ಗಳೆ ನಿಮ್ಮ ಮುಂದಿನ ಜೀವನಕ್ಕೆ ದಾರಿಯಾಗ ಬಹುದು, ಇಲ್ಲವೇ ಮುಳ್ಳಗಲೂ ಬಹುದು. ಮೈ ಡೀಯರ್ ಫ್ರೆಂಡ್ಸ್ ಡಿಗ್ರಿ ಮುಗಿಯ ಬಹುದು ಆದರೆ ನಾವು ನೀವು ಮಾಡಿದ ಕಿಟಲೆ, ಸಂತೋಷದ ಸಂಭ್ರಮಗಳ ನೆನಪುಗಳು ಮುಗಿಯದು…






ಅಂದಿನ ದಿನಗಳನ್ನು ನೆನಪಿಸಿದ್ದೀರಿ -ಚಪ್ಪರಿಸಿ ಓದಿದೆ.
Chennagide girish maja madia degree nenapugalu…..