ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನ ಹರಿವ ನೀರು

ಅರುಣ ರಾವ್

ಮನವು ಹರಿವ ಸಲಿಲ
ಓಡುವುದು ಸತತ

ತಿನ್ನುವಾಗಲೂ
ಕುಡಿಯುವಾಗಲೂ
ಸ್ನಾನ ಜಪತಪ
ಮಾಡುವಾಗಲೂ

ಪೂಜೆ ಪುನಸ್ಕಾರ
ಅಥಿತಿ ಸತ್ಕಾರ
ಪಾಠ ಪ್ರವಚನ
ಕೇಳುವಾಗಲೂ

ನಕ್ಕು ನಗಿಸುವಾಗ
ಅಳು ಆಟಪಾಠದಲ್ಲಿ
ಮತ್ತೇಕೆ ಮಗದೇಕೆ
ಮಲಗಿರುವಾಗಲೂ

ಕುಂತಿರಲು ನಿಂತಿರಲು
ಜಾಗೃತ ಸ್ವಪ್ನ
ಸಂಗಾತಿಯೊಡನಿರಲು
ಸುಷುಪ್ತಿಯಲ್ಲೂ

ಓಡುವುದು ಅನವರತ
ಕೆಲವೊಮ್ಮೆ ಧುಮ್ಮಿಕ್ಕಿ
ಮತ್ತೊಮ್ಮೆ ಮೊರೆಯುತ್ತ
ಮಗದೊಮ್ಮೆ ಬಂಡೆಗಲ್ಲಿಗುಜ್ಜಿ
ನೊರೆತೆರೆಯಾಗಿ ತೇಲುತ

ಚಿಂತೆಗಳ ಬೇಗೆಯಲಿ
ಪ್ರವಾಹವೇರ್ಪಟ್ಟು
ಅಡೆತಡೆಗಳಿಲ್ಲದೆ
ಅಂಕೆಗಳಿಲ್ಲದೆ
ಶಂಕೆಗಳಲ್ಲೆ

ಸುಖದ ಕ್ಷಣಗಳನ್ನು
ಮತ್ತೆ ನೇವರಿಸಿ ಸವರಿ
ಚಪ್ಪರಿಸುವಂದದೆ
ನೆನೆನೆನೆದು ಸಾಗಿ

ಜೀವ ಜಲ ನಿಲ್ಲುವುದು
ಸಾವ ಸಾಗರ ಸೇರಿ
ಜೀವ ನಿಂತಾಗಲೇ
ಕಡಿವಾಣ ಬೀಳುವುದು
ಅಣೆಕಟ್ಟಿನೋಪಾದಿ

‍ಲೇಖಕರು Avadhi

15 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading