ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೋಹರ ಗ್ರಂಥಮಾಲಾ ಪುಸ್ತಕಗಳು

ಪುಸ್ತಕ ಬಿಡುಗಡೆ

ಚಿತ್ರ ಕೃಪೆ : ಡಾ. ಎನ್. ಜಗದೀಸ್ ಕೊಪ್ಪ, ಧಾರವಾಡ.

ನಿನ್ನೆ, ಭಾನುವಾರ ಧಾರವಾಡದಲ್ಲಿ ಮನೋಹರ ಗ್ರಂಥ ಮಾಲಾ ಪ್ರಕಾಶನದ ವತಿಯಿಂದ ನಾಲ್ಕು ಹೊಸ ಪುಸ್ತಕಗಳು ಬಿಡುಗಡೆಯಾದವು.

ಗಿರೀಶ್ ಕಾರ್ನಾಡರ ” ಬೆಂದಕಾಳೂರು ಅನ್ ಟೋಸ್ಟ್” ನಾಟಕ

ಕೆ.ಸತ್ಯನಾರಾಯಣರ ” ಹೆಗ್ಗುರುತು” ಕಥಾ ಸಂಕಲನ

ಒ.ಎಲ್ ನಾಗಭೂಷಣಸ್ವಾಮಿ ಅನುವಾದಿಸಿರುವ ಎ.ಕೆ. ರಾಮಾನುಜನ್ ಅವರ ಪ್ರಬಂಧಗಳು ಮತ್ತು ಎ.ಎನ್ ಪ್ರಸನ್ನ ಅವರ ಎರಡು ನಾಟಕಗಳು.

ಗಿರೀಶ್ ಕಾರ್ನಾಡರು ತಮ್ಮ ಹೊಸ ನಾಟಕವನ್ನು ಓದುವುದರ ಮೂಲಕ ಓದುಗರಿಗೆ ಮುದ ನೀಡಿದರು. ಅವರೊಳಗೊಬ್ಬ ನಾಟಕಕಾರನ ಜೊತೆ ನಟನೂ ಇರುವುದರಿಂದ ಅವರ ನಾಟಕ ವಾಚನ ಓದುಗರಿಗೆ ಇನ್ನಿಲ್ಲದ ಮುದ ನೀಡಿತು.

ಹಿರಿಯ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮತ್ತೊಬ್ಬ ವಿಮರ್ಶಕರಾದ ನರಹಳ್ಳಿ ಬಾಲಸುಬ್ರ ಮಣ್ಯ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

 

‍ಲೇಖಕರು G

26 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading