ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮನೆ ತಲುಪಲಷ್ಟೇ ಆಯುಷ್ಯ ಬರೆಯುವ….'

ಸಾನೆಟ್

ಎಂ ಎಂ ಶೇಕ್ ಯಾದಗಿರಿ

 

ಇದೇ ಹಣೆಬರಹ ಅಂದುಕೊಂಡಿದ್ದರೆ,

ಆಗಾಗ ಸುಳಿಯುವ ತಂಗಾಳಿಗಳ ಅಲೆಮಾರಿಗಳಿಗೇಕೆ

ಮನೆಕೊಡುವೆ ಬಾಡಿಗೆಗೆ. ಗೂಡು ಕಟ್ಟವು

ಬೂರುಗದ ಮರವೊಂದಕ್ಕೆನೆ ..? ಹಾದಿ ಸವೆಸಲಷ್ಟೇ

ಬೇಕಾಗಿದ್ದು ಅವಕ್ಕೆ ಬೆಚ್ಚನೆಯ ನೆನಪುಗಳು.

ಮನೆ ತಲುಪಲಷ್ಟೇ ಆಯುಷ್ಯ ಬರೆಯುವ

ನಿನ್ನ ಕಾಡವೇನು ಇವು ..?!!! ಆ ಕಲೆಯ ನಿಪುಣನೇ

ನನಗೊಂದಿಷ್ಟು ಹೇಳಿಕೊಡು,ನಾನೊಂದಿಷ್ಟು ಬದುಕುವೆ ..!

ನಾನು ನೀನು,ನೀನು ನಾನಾದಾಗ

ಬೇರ್ಪಡಲು ಹೇಗೆ ನೆಪಗಳ ಹುಡುಕುವೆ ..?

ಈ ಪ್ರಶ್ನೆಯ ಸುಳಿಯಲ್ಲಿರಲು ನಾನು, ಧುಮುಕಿಬಿಟ್ಟೆ

ಇನ್ನೊಂದು ಸಮುದ್ರವನ್ನರಸುತ್ತಾ ಹೊಸಬನಂತೆ !!!

 

ನಾನು ಬೆನ್ನತ್ತಿದ ಘಳಿಗೆಗಳೆಲ್ಲಾ ಸಿಗವು ….

ನೀ ಕೊಟ್ಟ ಹನಿಗಳೆಲ್ಲಾ ರುಚಿಸವು…..

 

 

 

‍ಲೇಖಕರು avadhi

13 April, 2013

4 Comments

  1. laxmikant mirajakar

    Nanu ninu,ninu nanadaga berpadalu ake nepagala hudakuve.olleya salugalu.thanks.

  2. chalam

    ತುಂಬಾ ಆತ್ಮೀಯವಾದ ಟಚಿಂಗ್ ಸಾಲುಗಳು…ಥ್ಯಾಂಕ್ಸ್

  3. ಪ್ರಕಾಶ ಬಿ. ಜಾಲಹಳ್ಳಿ

    sanet chennagide…

  4. mmshaik

    ellarigu aabhaari..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading