ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಸ್ಸು ಮುಟ್ಟೋದು ಅಂದ್ರೆ..

            ದಿನೇಶ್ ಕುಮಾರ್ ಎಸ್ ಸಿ ದೇಸೀ ಮಾತು                       ಮನಸ್ಸು ಮುಟ್ಟೋದು ಅಂದ್ರೆ ದೇಹ ಹಿಡಿ ಮಾಡಿಕೊಂಡು ಮಂಡಿಯೂರಿ ನಿಲ್ಲೋದು   ಕೆನ್ನೆ ಮೇಲೆ ವಿನಾಕಾರಣ ಬೆಳೆದುನಿಲ್ಲೋ ಅಹಂಕಾರದ ದುರ್ಮಾಂಸವನ್ನು ಕಿತ್ತು ಕಸದ ತೊಟ್ಟಿಗೆ ಎಸೆಯೋದು   ದೇಹಕ್ಕೆ ಮನಸ್ಸು ಆವಾಹಿಸಿಕೊಳ್ಳೋದು ಕಷ್ಟ ದೇಹ ಮನಸ್ಸಲ್ಲಿ ಕರಗದ ಹೊರತು ಪ್ರತಿ ಸ್ಪರ್ಶಕ್ಕೂ ಯಂತ್ರದ ನಿರ್ಜೀವತೆ   ಶಬ್ದ ಕೇಳಿಸಿಕೋ ಹಕ್ಕಿ ಮಿಡಿದ ಸದ್ದು ಎಲೆ ಅರಳಿದ ಸದ್ದು ಮಂಜಹನಿ ಹೊರಳಿದ ಸದ್ದು ಚಿಟ್ಟೆ ರೆಕ್ಕೆ ಆಡಿಸಿದ ಸದ್ದು ಹಸುವಿನ ಕೆಚ್ಚಲ ಮೊಲೆತೊಟ್ಟುಗಳು ಒಂದಕ್ಕೊಂದು ತಾಗಿದ ಸದ್ದು   ಒಮ್ಮೆ ಉಸಿರು ಬಿಗಿಹಿಡಿದು ನಿಟ್ಟುಸಿರು ಬಿಟ್ಟು ಮತ್ತೆ ಉಸಿರೆಳೆದುಕೋ ವಿಧವಿಧದ ಗಂಧ ತಾಕಬೇಕು ಮಣ್ಣ ಗಂಧ ಮಕರ ಗಂಧ ಗಾಳಿ ಗಂಧ ನೀರ ಗಂಧ ಸಕಲಜೀವಗಳ ಮಿಥುನ ಗಂಧ   ರೆಪ್ಪೆ ಪಡಪಡನೆ ಹೊಡೆದು ಒಮ್ಮೆ ಅಕ್ಷಿಪಟಲ ತೆರೆದು ನೋ?? ಕೋಟಿಕೋಟಿ ನಕ್ಷತ್ರಗಳು ಬಣ್ಣಬಣ್ಣದ ಕಣಗಳಾಗಿ ಹೊಳೆಯಬೇಕು   ಹೀಗೆ ಕಾಣದ, ಕೇಳದ, ಆಘ್ರಾಣಿಸದ ಹೊರತು ಮನಸ್ಸು ಮುಟ್ಟಲಾಗದು   ಮನಸ್ಸು ಮುಟ್ಟಲು ದೇಹ ಕರಗಿಸಬೇಕು, ಎದೆ ಹೊನಲಾಗಿ ಹರಿಯಬೇಕು.      ]]>

‍ಲೇಖಕರು G

6 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading