ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮನಸ್ಸಲ್ಲೇ ಬೈದೆ, ಅವಳನ್ನೂ ಇವನನ್ನೂ…', ರಶ್ಮಿ ತೆಂಡೂಲ್ಕರ್

ಎಂಜಿ ರೋಡಲ್ಲಿ ಸಿಕ್ಕವಳು

ರಶ್ಮಿ ತೆಂಡೂಲ್ಕರ್

ಅವಳಿಗೂ ನನ್ನದೇ ವಯಸ್ಸು
ತುಟಿಗೆ ರಂಗು, ತೀಡಿದ ಹುಬ್ಬು
ಚೀಕ್ ರೋಸ್ ಹಚ್ಚಿದ ಹೊಳೆವ ಕೆನ್ನೆ
ಆ ರಾತ್ರಿ ಎಂಜಿ ರೋಡಲಿ ಸಿಂಗರಿಸಿ
ನಿಂತಿದ್ದಳವಳು ಯಾರಿಗೋ ಕಾದು
 
ಮುಖದಲ್ಲಿ ತುಂಟ ನಗು
ಸನ್ನೆಯಲ್ಲೇ ಸೆಳೆವ ಕಂಗಳು
ಮಾದಕತೆಯ ಮೈಮಾಟವನು
ನೋಡದೇ ಹೋಗುವವರುಂಟೆ?
 
ಕೆಂಪುದೀಪ ಉರಿದೊಡನೆ
ಉಬ್ಬುತಗ್ಗುಗಳನು ತೋರಿಸಿ
ನಾಲಗೆಯಲ್ಲೊಮ್ಮೆ ತುಟಿ ಸವರಿ
ಬರುವೆಯಾ? ಎಂಬ ಸಂಜ್ಞೆ
 
ಹೆಲ್ಮೆಟಿನೊಳಗಿಂದಲೂ
ಕಾರಿನ ಗಾಜು ಇಳಿಸಿ ನೋಡಿ
ಕಣ್ಣಲ್ಲೇ ಅಳೆದು ತೂಗಿ
ಪಕ್ಕ ಕರೆದು ಡೀಲ್ ಮಾಡಿದರವರು
 
ಅವಳಿಗೂ ನನ್ನದೇ ವಯಸ್ಸು
 
ದೇಹಗಂಟಿದ ತುಂಡುಡುಗೆಯೊಳಗಿದ್ದ
ಸೌಂದರ್ಯವನು ಹಂಚಿ ತಿಂದವರೆಷ್ಟೋ
ಅವಳಿಗೂ ಹಸಿವು
ಅವರಿಗೂ…

 
ಅವಳ್ಯಾವಳೋ ಅಲ್ಲಿಂದಲೇ ನನ್ನವನಿಗೆ
ಕಾಳು ಹಾಕುತ್ತಿದ್ದಾಳಲ್ಲಾ?
ಒಮ್ಮೆ ದುರುಗುಟ್ಟಿ ನೋಡಿ
ಮನಸ್ಸಲ್ಲೇ ಬೈದೆ, ಅವಳನ್ನೂ
ಇವನನ್ನೂ
 
ಅವಳಿಗೂ ನನ್ನದೇ ವಯಸ್ಸು
 
ಬೈಕಲ್ಲಿ ಕುಳಿತು ತನ್ನವನ ತಬ್ಬಿ
ನೀ ನನ್ನವನು ಮಾತ್ರ ಎಂದುಸುರಿದಾಗ
ಅಚ್ಚರಿ ಅವನಿಗೆ
ಅವಳ ಮುಖದಲ್ಲಿ ಮತ್ತದೇ ತುಂಟನಗು
 
 
ರಾತ್ರಿಯ ಬಿಗಿ ಮೌನದಲಿ
ನಾನು ರಮಿಸಲನುವಾದಾಗ
ಬೇಡ ಎಂದನವನು
ಅವಳು ನೆನಪಾದಳೆ?
 
ಇನ್ಯಾರದೋ ತೆಕ್ಕೆಯಲಿ
ಅವಳ ಉಸಿರು ಬಿಸಿಯಾಗಿ
ದೇಹ ತಣಿಯುತ್ತಿರಬಹುದೆ?
 
ನನಗೂ ಅವಳದ್ದೇ ವಯಸ್ಸು!
 

‍ಲೇಖಕರು avadhi

13 March, 2014

6 Comments

  1. Gangadhar Divatar

    ರಶ್ಮಿಯವರೇ…
    ತುಂಬಾ ನವಿರಾಗಿ ರಾತ್ರಿ ರಾಣಿಯರ ಭಾವನೆಗಳನ್ನು ಪೋಣಿಸಿ,
    ಎರಡು ಆಯಾಮಗಳಲ್ಲಿ ನಿಂತು ಹೆಣ್ಣಿನ ಬವಣೆಯನ್ನು ನಿಮ್ಮದೇ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಿದ್ದೀರಿ
    ಮನತಟ್ಟುವ ಕವಿತೆ ಅಭಿನಂದನೆಗಳು…

  2. mmshaik

    chennaagide..

  3. bharathi b v

    Rashmi chennagide kavithe

  4. Sushma Moodbidri

    ರಶ್ಮಿ
    ಮೌನವೊಂದೇ ಉತ್ತರ…
    ನಿಟ್ಟುಸಿರು ಹೊರ ಹಾಕಿಸಿದ ಕವನ

  5. kiran.m gajanur

    wonderful

  6. prakasha. dore

    tunba channagi mudibandide nimma kavana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading