ಕಿರಸೂರ ಗಿರಿಯಪ್ಪ
ಬತ್ತಿದ ನನ್ನೊಡಲಾಗ ಮಧು ರಸವು ರುಚಿಸಲಿಲ್ಲ
ಸುರುವಿ ಹಾಕೊ ನಿನ್ನ ಗೆಜ್ಜೆ ನಾದವು ಕೇಳಿಸಲಿಲ್ಲ
ಬೆವತು ಅರಳುವ ನನ್ನುಸಿರಾಗ ಮಧು ಹೂ ಅರಳಲಿಲ್ಲ
ಚಿಗಿತು ಹೊರಳೊ ನಿನ್ನ ನೆನಪ ತೈಲವು ಉರಿಯಲಿಲ್ಲ
ದುಃಖದ ಸುರುಳಿಗಳ ಮಧುರಸದ ಬಾಟಲಿಗೆ ಚಿತ್ರಿಸಿದೆ
ಪ್ರೀತಿಯ ತುಡಿತಗಳ ನಿನ್ನ ದ್ಯಾನವು ಗೋಚರಿಸಲಿಲ್ಲ
ಬಣ್ಣದ ಗರಿಗಳ ಮಧುರಸಕ್ಕೆ ಸುರುವಿದ ನನ್ನ ಕುಂಚದಾಗ
ನವಿಲಾಗಿ ಗೋಚರಿಸೋ ನಿನ್ನ ಬಡಿತವು ಕೇಳಿಸಲಿಲ್ಲ
ನನ್ನೆದೆಯ ಒಂಟಿ ಬೇರಿನ ರೆಂಬೆಗೆ ಕಾವಲಾಗಿ ಅರಳಿದೆ
ಎದೆಗೆ ಹಸಿರುಣಿಸುವ ನಿನ್ನ ಹದವು ಗೋಚರಿಸಲಿಲ್ಲ
ಒಂಟಿ ರೂಮಿನ ಮೌನದ ನನ್ನ ಖಾಲಿ ಶಹರಿನಲಿ
ಕರುಳಾಗಿ ಇಳಿಯೋ ನಿನ್ನ ಕರುಣೆಯು ಕಾಣಿಸಲಿಲ್ಲ
ಮಧುಪಾತ್ರೆಯ ತಾಣದಲಿ ಕಿರಸೂರ ಹ್ರದಯ ತಬ್ಬಲಿ ಸಖಿ
ಬಿರಿದ ನೆಲೆಯಾಗ ಜೇನಾಗೊ ನಿನ್ನ ತ್ಯಾಗವು ಅರ್ಥವಾಗಲಿಲ್ಲ






0 Comments