ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮತ್ತೆ ಹುಟ್ಟಬೇಕಿದೆ ಆಜಾದಿ…’ ಪ್ರಕಾಶ್ ಬರೆದ ಗಜಲ್

ಗಜಲ್

ಪ್ರಕಾಶ ಬಿ


ಸ್ವಾತಂತ್ರ್ಯ ಸಿಕ್ಕಿತು ಸ್ವತಂತ್ರರಾಗಲಿಲ್ಲ ಮತ್ತೆ ಹುಟ್ಟಬೇಕಿದೆ ಆಜಾದಿ

 

ಅಹಿಂಸೆ ಕಂಡಿತು ಸಿಗಲಿಲ್ಲ ಮತ್ತೆ ಹುಟ್ಟಬೇಕಿದೆಆಜಾದಿ

 

ಮೂರ್ತಿಗಳು ನಿಂತವು ವಿಚಾರಗಳು ತಿಳಿಯಾಗಲಿಲ್ಲ

ಆಚರಣೆಗಳು ನಡೆದವು ಮೌಢ್ಯ ದೂರವಾಗಲಿಲ್ಲ ಹುಟ್ಟಬೇಕಿದೆ ಆಜಾದಿ

ಮನುಜ ಮತದ ಮಾನವೀಯತೆ ಮರೆತು ಹೋಗುತ್ತಿದೆ

ಮಾನವೀಯತೆ ಮರುಸ್ಥಾಪಿಸಲಾಗಲಿಲ್ಲ ಮತ್ತೆ ಹುಟ್ಟಬೇಕಿದೆ ಆಜಾದಿ

 

ದೇಶದ ಐಕ್ಯತೆಯಲಿ ಒಂದಾಗಿರುವ ನಾವು ಕಿತ್ತಾಡುತಿಹೆವು

ಭಾಷೆ, ನಕಾಶೆಗಳ ವ್ಯಾಜ್ಯವ ಬಗೆಹರಿಸಿಕೊಳ್ಳಲಾಗಲಿಲ್ಲ ಮತ್ತೆ ಹುಟ್ಟಬೇಕಿದೆ ಆಜಾದಿ

 

ರಾಮ ರಹೀಮ್ರ ಕನಸ ಕಂಡ ಕಣ್ಣುಗಳಲ್ಲಿ ನೀರೊಸರುತ್ತಿವೆ ಈಗ

ಸೈತಾನರ ಮನಸ ಪರಿವರ್ತಿಸಲಾಗಲಿಲ್ಲ ಮತ್ತೆ ಹುಟ್ಟಬೇಕಿದೆ ಆಜಾದಿ

‍ಲೇಖಕರು G

19 August, 2014

3 Comments

  1. ರೇಣುಕಾ ಎ. ಕಠಾರಿ

    ನಲವತ್ತೇಳರ ಸ್ವತಂತ್ರ ನಮ್ಮ ಪಾಲಿಗೆ ಹಾಗೆಯೇ ಉಳದಿದೆ ಸರ್. ನಿಮ್ಮ ಗಜಲ್ ನಲ್ಲಿ ಅಡಗಿದ ಅಳಲು ನಮ್ಮವರಿಗೆ ತಿಳಿಯಲಿ ಎಂದು ಆಶಿಸುವೆ ಸರ್.

  2. mmshaik

    nice..

  3. vasudeva nadig

    ghaZal na olha dani matthu ruupaka shakti innashtu gatti gollabekitthu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading