
ಎ ಎಂ ಪ್ರಕಾಶ್

ಮರೆಯಾಗಿ ಹೋದ ಕೆಲವರು ಅನೇಕ ಕಾರಣಗಳಿಂದ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತಾರೆ.
ಹೀಗೆ ತಮ್ಮ ಕಂಠಸಿರಿಯಿಂದ ಕನ್ನಡಿಗರ ಮನಗೆದ್ದವರು ಎ.ಎಸ್.ಮೂರ್ತಿ.
ಅವರ ಆರೋಗ್ಯ ದಲ್ಲಿ ಏರುಪೇರಾದಾಗ ಅವರ ನೆನಪಿನ ಶಕ್ತಿ ಹಾರಿಹೋಗುವ ಮುನ್ನ ಕೆಲವೊಂದನ್ನಾದರೂ ದಾಖಲಿಸಲೆಂದು ನಾನು ಬಲವಂತ ಮಾಡಿದಾಗ ಕೆಲವು ಘಟನೆಗಳನ್ನು ದಾಖಲಿಸಿದರು.
ಸುಮಾರು 40 ಪುಟಗಳ ಬರವಣಿಗೆ ಅದು.
ಅವರು ಅದನ್ನು ಬರೆಯುತ್ತಿರುವಾಗಲೇ ಅದನ್ನು ಯಾಕೆ ಒಂದು ಕೇಳು ಪುಸ್ತಕವನ್ನಾಗಿ ಮಾಡಬಾರದು ಎಂಬ ಆಲೋಚನೆ ಹೊಳೆಯಿತು.
ಅದನ್ನು ಎ.ಎಸ್ಸೆಂ ಅವರಿಗೆ ಹೇಳಿದಾಗ ಅವರು ಬಹಳ ಸಂತಸಪಟ್ಟಿದ್ದರು. ಆಗ ನನಗೆ ನೆನಪಾಗಿದ್ದು ಅರವಿಂದ್ ಸ್ಟುಡಿಯೋವಿನ ಅರವಿಂದ್ ಕಿಗ್ಗಲ್. ಅವರ ಬಳಿ ಈ ಪರಿಕಲ್ಪನೆ ಹೇಳಿದಾಗ ಬಿಡಿಗಾಸು ತೆಗೆದು ಕೊಳ್ಳದೇ ಧ್ವನಿಮುದ್ರಣಕ್ಕೆ ಕಾರಣರಾದವರು ಅರವಿಂದ್ ಕಿಗ್ಗಲ್. ಇದಕ್ಕೆ ಅಷ್ಟೇ ಪ್ರೀತಿಯಿಂದ ನೆರವಾದವರು ಓಂಕಾರ್.
40 ನಿಮಿಷಗಳ ಧ್ವನಿಮುದ್ರಣ ಅಣಿಯಾಯಿತು. ನಂತರ ಮೂರ್ತಿ ಅವರ ಆರೋಗ್ಯ ಕ್ಷೀಣಿಸುತ್ತಾ ಹೋದಂತೆ ಕೇಳುಪುಸ್ತಕ ಹೊರ ತರುವ ಕನಸೂ ಕರಗಿಹೋಯಿತು.
ಅನಿರೀಕ್ಷಿತವಾಗಿ ಕಳೆದು ಹೋಗಿದ್ದ ಧ್ವನಿ ಮುದ್ರಣ ಈಗ ದಕ್ಕಿದೆ. ಎ.ಎಸ್.ಮೂರ್ತಿಯವರ ವಿಶಿಷ್ಟ ಧ್ವನಿಯನ್ನು, ಅವರ ಅನುಭವದ ನುಡಿಗಳನ್ನು “ಮೂರ್ತಿ ಮಾತು” ಸರಣಿಯನ್ನು acube ಮೂಲಕ ಬಿಡುಗಡೆ ಮಾಡಲಿದ್ದೇವೆ. ಈ ಕೇಳು ಪುಸ್ತಕ ನಿಮಗಾಗಿ. ಕೇಳಿ, ವೀಕ್ಷಿಸಿ , ಅನಿಸಿಕೆ ತಿಳಿಸಿ.
। ನಾಳೆಯಿಂದ ಅವಧಿಯಲ್ಲಿ ಈ ಸರಣಿ ನಿಮಗಾಗಿ ।




0 Comments