ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲ..

ಮಳೆ ಮತ್ತು ಅಗ್ಗಿಷ್ಟಿಕೆ

ku sa madhusoodan naayar

ಕು.ಸ.ಮಧುಸೂದನ್ ನಾಯರ್

ಮಳೆಗಾಲದ  ಒಂದು ಸಂಜೆ

ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳು

ಸ್ಪೋಟಗೊಂದು ಸುರಿದ ಜಡಿ ಮಳೆಗೆ

ಸಿಕ್ಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲು

cloudsನನ್ನ ಪುಟ್ಟ ಹಿತ್ತಿಲಿತ್ತು.

ಗಡಗಡ ನಡುಗಿಸುವ ಚಳಿಗೆ

ಅಗ್ಗಿಷ್ಟಿಕೆಯಾಗಿ  ನಾನಿದ್ದೆ.

ಮಳೆ ಸುರಿದು ಸರಿದು ಹೋಯಿತು

ಹಿಂಬಾಲಿಸಿಕೊಂಡು ಬಂದ ಬಿಸಿಲು

ಬಂದ ಮಳೆಯ ಮರೆಸಿತು.

 

ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲ

ಮಳೆಯಾಗಲಿಲ್ಲ,

ಬಿಸಿಲಝಳಕ್ಕೆ ಬರಬಿದ್ದ  ಊರಿಗವಳು ಬರಲೇ ಇಲ್ಲ.

 

ಮತ್ತೀಗ  ಅಲ್ಲೆಲ್ಲೊ ಮಳೆಯಾಗುತ್ತಿರಬಹುದು

ಅವಳಲ್ಲಿ ನೆನೆಯುತ್ತಲಿದ್ದರೂ ಇರಬಹುದು,

ಅ ಊರಲ್ಲೂ ಹಿತ್ತಲುಗಳಿವೆ

ಜೊತೆಗೆ ಅಗ್ಗಿಷ್ಟಿಕೆಗಳೂ!

 

‍ಲೇಖಕರು Admin

24 June, 2016

3 Comments

  1. nagraj harapanahalli

    ಧ್ವನಿಪೂರ್ಣ ಕವಿತೆ

  2. Anonymous

    ವಾವ್ಹ್……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading