ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ..

ಗಾಯತ್ರೀ ರಾಘವೇಂದ್ರ, ಶಿರಸಿ

ಮತ್ತೆ? .. ಎಂದುಲಿದು
ಕಾಯುವ ಆ ಕ್ಷಣ
ಮೌನದಲ್ಲೂ ರಿಂಗಣಿಸುತ್ತದೆ
ಮಾತಿಗಾಗಿ ತಡವರಿಸಿ

ಮುನ್ನುಡಿ ಬರೆದು
ಬಿಚ್ಚಿಕೊಳ್ಳುತ್ತದೆ ಎದೆಹೊತ್ತಿಗೆ
ಮಾತು ಮಾತಾಗಿ ಓದಿಸಿ
ಉತ್ತರಗಳ ಹರಿವು

ಮತ್ತೆ..ಕೇಳುವ ಕಾತರ ಇನ್ನೇನೋ
ಹೇಳುವ ಆತುರ
ನನ್ನೊಳಗ ಹುಡುಕಾಟ
ನಿಟ್ಟುಸಿರಿಗೂ ಅದೇ ಪ್ರಶ್ನೆ

ಉತ್ತರಕ್ಕಾಗಿ ಕದಡುತ್ತೇನೆ
ಮನದ ತಿಳಿಗೊಳವ
ಅಲೆ ಅಲೆಯಲ್ಲೂ ಅದೇ
ಆ ಅಲೆಗಾದರೋ ನೂರು ಹಸ್ತ

ಮತ್ತೆ..ಕಾಯುತ್ತೇನೆ
ಆಸ್ಥೆ ಅಕ್ಕರೆಯ ಒಂದೇ ಭಾವಕೆ
ಸಾವಿರದ ಮತ್ತೆಗಳ
ಆಪ್ಯಾಯ ನೋಟಕೆ

ಮತ್ತೆ..ಹುಂ ಗಳ
ಸುದೀರ್ಘ ಚಿನ್ನಾಟ
ಮೌನದೊಳಗೆ ಬೆಸೆವ ಭಾವಗಳ
ಅಪರೂಪದ ಶಬ್ದ

ಮತ್ತೆ..ಮತ್ತೆ ಕೇಳಬೇಕೆನಿಸುವ
ಹೇಳಬೇಕೆನಿಸುವ
ಅದದೇ ಹಾಡ ಗುನುಗು
ಬರೆದಷ್ಟೂ ಬರೆಸಿಕೊಳುವ ಕವಿತೆ..

‍ಲೇಖಕರು avadhi

15 July, 2017

6 Comments

  1. Satish

    Super

  2. umesh mundalli

    ತುಂಬಾ ಸುಂದರ ಕವಿತ

  3. Raghu bhat

    Waaawwww super

  4. Narendra Naik

    Supper, and sweet

  5. Anonymous

    ಚಲೊ ಇದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading