ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಠ / ಆಶ್ರಮ ಅನ್ನುವುದೇ ಧಾರ್ಮಿಕ ಮುಖವಾಡ ಹೊಂದಿರುವ ಭೂ ಮಾಫಿಯ…

ಶಶಿಧರ ಭಟ್ಟರು ಬರೆದಿದ್ದ ನಿತ್ಯಾನಂದ ಪ್ರಕರಣ; ನಮಗೆ ಮಠಾಧಿಪತಿಗಳು ಯಾಕೆ ಬೇಕು? ಎನ್ನುವ ಲೇಖನವನ್ನು ಪ್ರಕಟಿಸಿದ್ದೆವು.

ಅದಕ್ಕೆ ಬಾಲು ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ :

ಭಟ್ರೇ, ನಿಮ್ಮ ಲೇಖನದ ಒಟ್ಟಾರೆ ಆಶಯವನ್ನು ಒಪ್ಪಬಹುದಾದರೂ ಕೆಲವು ವಿಚಾರಗಳು ಸ್ವಲ್ಪ ಗೊಜಲಾಗಿವೆ ಹಾಗು ಕೆಲವು ನಾಪತ್ತೆ ಆಗಿದೆ. “ಅತ್ಯಾಚಾರ ಎನ್ನುವುದು ಐದು ವರ್ಷಗಳ ಕಾಲ ನಡೆದರೆ ಅದು ಅತ್ಯಾಚಾರ ಹೇಗಾಗುತ್ತದೆ ?” ಒಬ್ಬ ಮಹಿಳೆಗೆ ಇಲ್ಲ ಸಲ್ಲದ ನೆಪ ಕೊಟ್ಟು, ಲೈ0ಗಿಕವಾಗಿ ಬಳಸಿ ಕೊಂಡು ಕೊನೆಗೆ ನಾನು ಕೊಟ್ಟ ಕಾರಣ ಎಲ್ಲ ಸುಳ್ಳು ಎಂದರೆ ಅದು… ಅತ್ಯಾಚಾರಕ್ಕೆ ಸಮ ಅಲ್ಲವೇ?   ಇರಲಿ ಬಿಡಿ, ಇಲ್ಲಿ ನಿತ್ಯಾನಂದನ ವಿರುದ್ದ ನಡೆಯುತ್ತಿರುವ ಗಲಾಟೆ ಗೆ ಮುಖ್ಯ ಕಾರಣ, ಆತನಿಗೆ ಜಾತಿ ಬೆಂಬಲ ವಿಲ್ಲದೆ ಇರುವುದು ಎಂಬ ವಾದ ಒಪ್ಪಲು ಸಾದ್ಯ ಇಲ್ಲ. ಯಾಕೆಂದರೆ ನಮ್ಮಲ್ಲಿ ದೇವ ಮಾನವ ಆಗಲಿಕ್ಕೆ ಜಾತಿ ಅಗತ್ಯ ಇಲ್ಲ. ಯೋಗ, ನೆಮ್ಮದಿ, ಸುದರ್ಶನ ಚಕ್ರ, ಬೂ ಚಕ್ರ ಎಂದೆಲ್ಲ ಹೇಳಿ, ಜನರನ್ನ ನಂಬಿಸುವ ಕಲೆ ಗೊತ್ತಿದ್ದರೆ ಸಾಕು. ಮಹೇಶ್ ಯೋಗಿ, ರವಿ ಶಂಕರ್.. ಅಷ್ಟೇಕೆ ಸಾಯಿ ಬಾಬ ಗೆ ಕೂಡ ಯಾವುದೇ ಜಾತಿ ಯಾ ಸಂಬಂದ ಇರಲಿಲ್ಲ. ಇದ್ದಿದ್ದು ಬರಿ ದುಡ್ಡಿ ನೊಂದಿಗೆ ನಂಟು ಮಾತ್ರ. ಇದು ಕೇವಲ ಹಿಂದೂ ದರ್ಮಕ್ಕೆ ಸೀಮಿತ ಅಲ್ಲ. ಕ್ಷಣಾರ್ದದಲ್ಲಿ ಕೇವಲ ಕೈ ಇಂದ ಆಪರೇಷನ್ ಮಾಡೋ ಬಾಬಾ ಇದ್ದರೆ, ಕೆಲವು ವರ್ಷ ಗಳ ಹಿಂದೆ ಆದ್ಯರೋ ಬೆನ್ನಿ ಹಿನ್ ಬಂದಿದ್ದ!   ಮಠ / ಆಶ್ರಮ ಅನ್ನುವುದೇ ಬಹುತೇಕ ಕಡೆ ಧಾರ್ಮಿಕ ಮುಖ ವಾಡ ಹೊಂದಿರುವ ಭೂ ಮಾಫಿಯ ಅಲ್ಲವ? ಈ ನಿತ್ಯಾನಂದ ಆ ಆಶ್ರಮ ದ ಜಾಗವನ್ನ ಕೊಂಡು ಕೊಂಡಿದ್ದನ? ಉತ್ತರ ಮಾತ್ರ ಇಲ್ಲ ಅನ್ನುವುದು ಅಷ್ಟೇ. ನಿತ್ಯಾನಂದ, ರಜನೀಶ ನ ಹಾಗೆ ಸೆಕ್ಸ್ ನಿಂದ ಮುಕ್ತಿ ಕೊಡಿಸುವೆ ಎಂದು ಹೇಳಿದ್ದರೆ ಖಂಡಿತ ಸಮಸ್ಯೆ ಆಗುತ್ತಿರಲಿಲ್ಲ. ಇಷ್ಟ ಇದ್ದವರು ಹೋಗುತ್ತಿದ್ದರು! ಎಲ್ಲರೂ ಕಳ್ಳರೇ , ನಿತ್ಯಾನಂದ ನನ್ನ ಮಾತ್ರ ಯಾಕೆ ಕೋರ್ಟ್ ಗೆ ತರುವಿರಿ ಎಂದು ಪ್ರಶ್ನಿಸಿದ್ದೇ ಆದಲ್ಲಿ, ಎಲ್ಲ ಮುಖ್ಯ ಮಂತ್ರಿ ಗಳು ಬ್ರಷ್ಟಾಚಾರ ಮಾಡಿದ್ದಾರೆ! ಕೇವಲ ಯೆಡಿಯೂರಪ್ಪ ಗೆ ಮಾತ್ರ ಯಾಕೆ ಶಿಕ್ಷೆ ಎಂದು ಪ್ರಶ್ನಿಸಿದಷ್ಟು ಅಸಹ್ಯ ಅಲ್ಲವೇ?   ಎಲ್ಲಕ್ಕೂ ಮಿಗಿಲಾಗಿ ನಿತ್ಯಾನಂದ ನ ಅಕ್ರಮ ಬಯಲಿಗೆ ಎಳೆಯುವ ಜರೂರತ್ತು ನಮ್ಮ ಕನ್ನಡ ಮಾದ್ಯಮಗಳಿಗೆ ಇತ್ತು. ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಬೇಕಿತ್ತು. ಕೆಲವು ಸಂಘಟನೆ ಗಳಿಗೆ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಬೇಕಿತ್ತು. ಆ ಸಮಯಕ್ಕೆ ನಿತ್ಯ ಸಿಕ್ಕ ಅಷ್ಟೇ. ಆದದ್ದೆಲ್ಲಾ ಒಳ್ಳೇದಕ್ಕೆ, ಜನ ಇನ್ನೂ ಮುಂದೆ ಈ ರೀತಿಯ ವಂಚನೆಗೆ ಒಳಗಾಗೊದು ನಿಂತರೆ, ಕಡಿಮೆ ಆದರೆ ಸಮಾಜಕ್ಕೆ ಲಾಭ.  ]]>

‍ಲೇಖಕರು G

15 June, 2012

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. GURURAJ

    balu sir you have repeated, what Mr Bhat told.speaking in different way cannot change the thought.you both are thinking and telling the same thing,which is right thinking too.i don’t find any argument in your article

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading