ಮಚಾ ಆರ್ ಯೂ ವರ್ಜಿನ್?…

ಸೂರ್ಯಕೀರ್ತಿ

ನನ್ನ‌ ಸ್ನೇಹಿತನೊಬ್ಬ ‘ಮಚಾ, ಆರ್ ಯೂ ವರ್ಜಿನ್?’ ಎಂದು ಕೇಳಿದ. ಒಂದು ಕ್ಷಣ ಬೆಪ್ಪಾಗಿ ಅವನ‌ ಮುಖ ನೋಡಿದೆ, ‘ಏನೋ ಹಂಗದ್ರೆ ಅಂದೆ’ ಅದಕ್ಕೆ ಸುಮ್ಮನೇ ಇರದೆ ‘ಮೊದ್ಲು‌ ಹೇಳು, ನೀನು ವರ್ಜಿನ್ ಹ ?’ ಎಂದು ಮತ್ತೆ ಕೇಳಿದ. ಈ‌‌ ವರ್ಜಿನ್‌ ಅನ್ನುವ ಪದ ಗಂಡು ಹೆಣ್ಣಿಗೆ ಸೀಮಿತವಾಯಿತ್ತಲ್ಲ ಎಂದುಕೊಂಡು. ‘ಹ್ಞು ಕಣೋ ಸ್ಟೀಲ್ ವರ್ಜಿನ್ ಕಣೋ’ ಎಂದು ಹಲ್ಲು ಕಿರಿದೆ. ಮತ್ತೆ ಛೇಡಿಸಿದ ‘ಹಾಗಿದ್ರೆ ಸೊಪ್ಪು ಯಾವಾಗ ಹಾಕ್ತಾರೋ‌?’ ಎಂದ. ಯಾವಾಗಾದ್ರೂ ಹಾಕ್ತಾರೆ ಬಿಡೋ ಎಂದೆ ಉದಾಸೀನ ಮಾಡಿದೆ. ಇವತ್ತಿನ‌ ಜಾಗತೀಕರಣದ ಸಂದರ್ಭದಲ್ಲಿ ಹೆಣ್ಣನ್ನು ಕಾಮದ ಬಳಕೆಯಲ್ಲಿ ಹೇಗೆ ಗಂಡು ನೋಡಿತಿದ್ದಾನೆ ಎಂದು ಗಮನಿಸಿದ್ದಾಗ ಅವಳು ಬರೀ ‘Sex Toy’s’ ತರಹ ಉಪಯೋಗಿಸುವ ಗಂಡು ಅವಳಿಗೆ ಪ್ರೇಮದ ಪಟ್ಟವಿಟ್ಟು ಏನೆಲ್ಲ‌ ಬಯಕೆಗಳ‌ ಅವಳಿಂದ ಬಲತ್ಕಾರವಾಗಿಯೋ‌ ಅಥವಾ ಅತ್ಯಾಚಾರದ ಮೂಲಕ ಪಡೆಯುವುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. 

ಕಾಮವೆಂಬುದು ಪ್ರೇಮದ ಸಂಕೇತ ಎಂದು ಘಂಟಾಘೋಷವಾಗಿ ವಾದಿಸಿದರೂ ಪ್ರೇಮ ಮತ್ತು ಕಾಮದ ನಡುವಿನ ಸಂಬಂಧ ಕೆಲವು ವೇಳೆಯಲ್ಲಿ ಸಂದಿಗ್ಧತ ಸ್ಥಿತಿಯನ್ನು ತಲುಪಿದರು ಕಾಮದ ಆಧಾರದ ಮೇಲೆಯೆ ಪ್ರೇಮ ನಿಂತಿದೆ ಎಂದು ಕೆಲವು ಪಾಶ್ಚಾತ್ಯರು ವಾದಿಸುವುದನ್ನು ಗಮನಿಸಬಹುದು. ಅಮೇರಿಕಾದ ಹೆನ್ರಿ ‌ಮಿಲ್ಲರ್ ಬರೆದಂತಹ ‘ದಿ ವರ್ಲ್ಡ್ ಆಪ್ ಸೆಕ್ಸ್’ ಎಂಬ ಪುಸ್ತಕವನ್ನು ಅವನು ಸಾಯುವವರೆಗೂ ಮತ್ತೆ ಪ್ರಕಟಿಸಲು‌ ಅಮೇರಿಕಾ ಸರಕಾರ ಅವಕಾಶವೇ ಕೊಡಲಿಲ್ಲ. ಆದರೆ ಅವನು ಹೇಳಿರುವ ಪ್ರತಿಯೊಂದು ವಾಕ್ಯವು ಇಂದು ವೇದವ್ಯಾಕದಂತೆ ಓದುವ ಜನರು ಇದ್ದಾರೆ. ಹಿಂದೆ ಗಂಡು ಮಾತ್ರ ಕಾಮದಕೇಳಿಯಲ್ಲಿ ಹೇಗೆ ಬೇಕಾದರೂ ಹಾಗೆ ಹೆಣ್ಣನ್ನು ಭೋಗದ ವಸ್ತುವಾಗಿ ಉಪಯೋಗಿಸಬಹುದೆಂಬ ಹಣೆಪಟ್ಟಿಯನ್ನು ಅವರಿಗೆ ಅವರೆ ಹಾಕಿಕೊಂಡಿದ್ದು ಅದೊಂದು ದುರಂತದ ಕತೆಯೊಂದೆ ಹೇಳಬೇಕಾಗುತ್ತದೆ.

ಸಾಹಿತ್ಯದಲ್ಲಿಯೂ ಇದರಾಚೆಗೆ ನೋಡುವ ದೃಷ್ಟಿಕೋನಗಳು ಬದಲಾಗಬೇಕಿದೆ. ಇಪ್ಪತ್ತೊಂದನೇಯ ಶತಮಾನದಲ್ಲಿ ಗಂಡು ಹೆಣ್ಣಿನ ಲೈಂಗಿಕ ಸಂಬಂಧ ಮಾತ್ರವಲ್ಲದೆ ಹೆಣ್ಣು -ಹೆಣ್ಣಿನ ನಡುವೆ, ಗಂಡು – ಗಂಡಿನ‌ ನಡುವೆ ಸುಳಿವ ಈ ಕಾಮದ ಮಾಯೆಗೆ ಏನೆಂದು‌ ಹೆಸರಿಟ್ಟು ಕರೆಯುವೀರಿ ಎಂದು ಪ್ರಶ್ನಿಸಿಕೊಳ್ಳುವ ಪ್ರಜ್ಞೆಯೂ ಕೂಡ ವಿಶೇಷವಾಗಿ ಚಿಂತನೀಯವಾಗಿದೆ. ನನ್ನ‌ ಸಹದ್ಯೋಗಿಯಿಬ್ಬರೂ ಲೆಸಿಬಿಯನ್ ಅವರೂ‌ ಇಂದಿಗೂ ಕೂಡಾ ಸಮಾಜದ ಮುಂದೆ ಹೇಳಿಕೊಳ್ಳಲೂ ಅಂಜುತ್ತಾರೆ, ಅದರಲ್ಲೂ‌ ಮೂವತ್ತು ವರುಷ ದಾಟಿರುವ ಅವರಿಬ್ಬರೂ ನನ್ನ ಆಯ್ಕೆ ನನ್ನದು ಎನ್ನುವ ಧೋರಣೆಗೆ ಬಂದಿರುವುದು ಒಂದು ರೀತಿಯಲ್ಲಿ ಸಂತೋಷವನ್ನು ನೀಡುತ್ತದೆ. ‌ಅವರ ಲೈಂಗಿಕ ಬದುಕು ಅವರಿಗೆ ಬಿಟ್ಟದ್ದು ಅದನ್ನು ಮೂರ್ಖ ಸಮಾಜ ಟೀಕಿಸುವ ಹಕ್ಕು ಅದಕ್ಕಿಲ್ಲ ಎಂದು ಹೇಳುವ ಅವರ ಉಕ್ತಿ ಸೂಕ್ತವಾಗಿದೆ. 

ಸಾಹಿತ್ಯದಲ್ಲಿ ಕಾಮದ ಅಭಿರಾಮದ ಸಾಂಗತ್ಯವನ್ನು ನಾವು ಓದಿದ್ದೇವೆ, ಕೇಳಿದ್ದೇವೆ ಅಥವಾ ಪ್ರಾಣಿ, ಪಕ್ಷಿ, ಸಸ್ತನಿಗಳಿಂದ ಲೈಂಗಿಕ ಕ್ರಿಯೆಯನ್ನು ಅನುಕರಿಸಿದ್ದೇವೆ. ಅದನ್ನೇ ನಮ್ಮ‌ ಕಾಮಶಾಸ್ತ್ರಕಾರರು ಹೆಣ್ಣನ್ನು‌ ಪ್ರಾಣಿ, ಪಕ್ಷಿಳಿಗೆ ಹೋಲಿಸಿ ಅವಳನ್ನು ಕಾಮದ‌ ಉತ್ತುಂಗವೆಂದು ಭ್ರಮಿಸಿರುವುದನ್ನು ಶೋಕನೀಯ.

ಕೃಷ್ಣ ಮತ್ತು ರಾಧೆಯ ನಡುವಿನ‌ ಸಂಬಂಧ ಬರೀ ಪ್ರೇಮವಲ್ಲ ಅದು ಕಾಮವೆಂದು ಸಂಸ್ಕೃತದ ಜಯಕವಿ ಬರೆದ ‘ಗೀತಗೋವಿಂದ’ ಕೃತಿಯಲ್ಲಿ ತಿಳಿದು ಬಂದರೂ‌‌ ಅದನ್ನು ಪವಿತ್ರ ಗ್ರಂಥವೆಂದು ಪೂಜಿಸಿ ‌ಓದುತ್ತಾರೆ, ಇನ್ನು ನನ್ನಜ್ಜಿಯಂದಿರ ಕಾಲದಲ್ಲಿ ಅವಳು ಇನ್ನು ಮೊದಲ‌ ಋತುಮತಿಯಾದ ದಿನವೇ ಅವಳ‌ ಕನ್ಯತ್ವವ ಪರಿಶೀಲಿಸಿ ಫ್ರೆಶ್ ಹಾಗಿಯೇ ಇರಬೇಕೆಂದು ಬಯಸುವ ಗಂಡಿಗೆ ಕಟ್ಟುಬಿಡುತ್ತಿದ್ದರು. ಇನ್ನು ಕಾಮದ ಕೇಳಿಯ ಬಗ್ಗೆ ನನಗೆ ಆಶ್ಚರ್ಯವಾದದ್ದು‌ ಹೆಣ್ಣಿಗೆ ಕಾಲ್ಗಡಗ ಮತ್ತು ಕೈಕಡಗಗಳು ಏಕೆ ಎಂದು ಕೇಳಿದಾಗ, ಗಂಡು ಕಾಮದ ಉತ್ತುಂಗಕ್ಕೆ ತಲುಪುವಾಗ ಅವಳನ್ನು ತನ್ನ ಹಿಡಿತದಲ್ಲಿ ಬಂಧಿಸಲು ಅವುಗಳನ್ನು ಅವಳಿಗೆ ಆಭರಣಗಳಾಗಿ ತೊಡಿಸಿರಿವುದು ಅದನ್ನೆ ಪವಿತ್ರವೆಂದು ಧರಿಸುವ ಹೆಣ್ಣುಮಕ್ಕಳ ಕಂಡರೆ ವಿಷಾದವೆನಿಸುತ್ತದೆ. 

ಇನ್ನು ನಮ್ಮಲ್ಲಿ ವಾತ್ಸ್ಯಾಯನ ಕಾಮಸುತ್ರ, ಕೊಕ್ಕೋಕನ ರತಿ ರಹಸ್ಯ, ಚಂದ್ರರಾಜನ ಮದನ ತಿಲಕಂ‌ ಇತ್ಯಾದಿ‌ ಇತ್ಯಾದಿ ಇವುಗಳೆಲ್ಲವೂ ಗಂಡಿನ‌ ಕಾಮದ ಕೇಳಿಯ ಆಟಗಳನ್ನೆ ಹೇಳುವಂತವು, ಹಾಗಿದ್ರೆ ಹೆಣ್ಣಿನ‌ಕಾಮಕೇಳಿಯ ಆಟಗಳು‌ ಇಲ್ಲವೇ ? ಎಂದು ಪ್ರಶ್ನಿಸಿಕೊಳ್ಳುವ ಸಂದರ್ಭ ಉಂಟಾಗುತ್ತದೆ. ‌ಕಾಮದಲ್ಲಿ ಗಂಡಿನ ಬಯಕೆಯೆ ಶ್ರೇಷ್ಠವೆಂದು ಸೃಷ್ಟಿಸಿದ ಗಂಡುಕವಿಗಳ ಕೃತಿಗಳನ್ನು ತಿರಸ್ಕರಿಸಬಹುದು‌. ಇನ್ನು ಹೆಣ್ಣನ್ನು ಸೂಳೆಯಾಗಿ ನೋಡುವ ಪ್ರವೃತ್ತಿ ನಮ್ಮ‌  ಪ್ರಾಚೀನ ‌ಕೃತಿಗಳಲ್ಲಿ ಇದೆ, ಉದಾಹರಣೆಗೆ ಅಷ್ಟದಶ ವರ್ಣನೆಯಲ್ಲಿ‌ ಈ ಕಾಮದ ವರ್ಣನೆಯೂ ಒಂದು ಆದರೆ ಹೆಣ್ಣನ್ನು ಕೀಳಾಗಿ ಅವಳ‌ ಅಂಗಾಂಗಗಳ ವರ್ಣಿಸಿ ಭೋಗಿಸುವ ಕವಿಗಳೆ ಹೆಚ್ಚು. ಇವೆಲ್ಲವನ್ನು ಬದಿಗಿಟ್ಟು ವಚನಕಾರರು ಹೇಳಿರುವ ಕಾಮದ ವರ್ಣನೆ ಶೂನ್ಯವಾಗಿ ನಿಲ್ಲುತ್ತದೆ. 

ಕಾಮ ಮತ್ತು ಪ್ರೇಮ ಎರಡೂ ಕೂಡಾ ಹೂ – ದುಂಬಿಯ ಹಾಗೆ ಆದರೆ ವಿವೇಕ‌ ಪ್ರಜ್ಞೆ ಮುಖ್ಯ. ಲೈಂಗಿಕ ಕ್ರಿಯೆ ಇಡೀ‌ ಜಗತ್ತಿನ‌ ಸೃಷ್ಟಿ ಕ್ರಿಯೆ. ಅದರ ಬಗ್ಗೆ ಭಯ, ತಾರತಮ್ಯ, ಅಸಹ್ಯ‌ ಪಡುವಂತದ್ದು ಇಲ್ಲವೇ ಇಲ್ಲ. ಆದರೆ ನಾನು ವಿವೇಕ ಪ್ರಜ್ಞೆ ಮುಖ್ಯವೆಂದು ಹೇಳುವಾಗ ಅದರ ಆಯ್ಕೆ ನಿಮಗೆ ಬಿಟ್ಡಿದ್ದು. ಕಾಮಶಾಸ್ತ್ರಗಳ‌ ಓದಿದರೆ ದೇಶವೇ ಹಾಳಾಗುತ್ತದೆ ಎಂದು ಹೇಳುವರು ಶತಮೂರ್ಖರು. ಇಂದಿನ ಶೈಕ್ಷಣಿಕ ವಲಯದಲ್ಲಿ ಕಾಮದ ತಳಹದಿಯನ್ನಾದರೂ ಮಕ್ಕಳಿಗೆ ತಿಳಿಸಬೇಕಾದ ಅನಿವಾರ್ಯವಿದೆ.

ಅಮೇರಿಕಾ, ಜರ್ಮನ್,‌ ಬ್ರಿಟನ್, ಜಪಾನ್ ಅಂತ ದೇಶಗಳಲ್ಲಿ ಹೇಗೆ ಮುಕ್ತವಾಗಿ ಲೈಂಗಿಕ ಕ್ರಿಯೆಯನ್ನು ಸಹಜವಾಗಿ ಅಂಗೀಕರಿಸಿದ್ದಾರೆಯೋ ಹಾಗೆಯೇ ಅವರ ಪ್ರಜ್ಞೆಗೆ ಬಿಟ್ಟುಕೊಡಬೇಕು. ಸನಾತನಾದಿಗಳೆಂದು ಕರೆಯುವ ಇಂದಿನವರೆಗೆ ದೇವಾಲಗಳಲ್ಲಿ ನಡೆಯುತಿದ್ದ ವೇಶ್ಯಾವಾಟಿಕೆ, ದೇವದಾಸಿ ಪದ್ದತಿ, ಹೆಣ್ಣನ್ನು ಬೆತ್ತಲೆ ಕುಣಿಸುವ ಸಂಸ್ಕಾರವನ್ನು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹಾಗೂ ಯಾರೂ ವಿರೋಧಿಸುವರೋ‌‌‌ ಅವರೊಮ್ಮೆ ದೇವಾಲಯದ ಶಿಲ್ಪಗಳನ್ನು ಲೈಂಗಿಕ ಶಿಕ್ಷಣವನ್ನು ಪಡೆದುಕೊಳ್ಳಲಿ.

ಜಪಾನ್‌ ದೇಶದಲ್ಲಿ ಇಂದಿಗೂ ಶಿಶ್ನದ ಪೂಜೆ ಮಾಡಿತ್ತಾರೆ ಅಲ್ಲಿ ಯೋನಿಯ ಪೂಜೆಯಿಲ್ಲ‌ ಏಕೆ ಎಂದು ನೀವೆ ಪ್ರಶ್ನಿಸಿಕೊಳ್ಳಿ. ಇನ್ನು ಬ್ಯಾ ಕಾಂಗ್ ಅಂತ ಪ್ರದೇಶಗಳಲ್ಲಿ ಮುಕ್ತವಾಗಿ ಕ್ರೂರವಾಗಿ ವರ್ತಿಸುವ ಅತಿರೇಕವನ್ನು ಕೂಡ ಗಮನಿಸಬೇಕಾಗುತ್ತದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಲೈಂಗಿಕತೆಯ ಕ್ರಿಯೆಯನ್ನು ವಿಜ್ಞಾನದ ಮೂಲಕ ನೋಡುವುದು ಪ್ರಮುಖವಾಗಿದೆ. 

‍ಲೇಖಕರು Admin

October 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: