ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗುವಿನೊಂದಿಗೆ ತಾಯಿ ಮುಂದೆ ಹೋದವಳು ಹಿಂದೆ ಬರಳು…

ಸ್ತಬ್ಧ ಭಾವಗಳು…

ಮೋಹನ್ ವಿ ಕೊಳ್ಳೇಗಾಲ

1.

ಮುಂಜಾನೆ ಚಳಿಗದುರಿ ಮೌನವಾಗಿ

ಮಲಗಿದೆ ರಸ್ತೆ

ಪೇಪರ್ ಮಾರುತ್ತಿದ್ದ ಹುಡುಗ

ಹಂಚಿದ್ದಾನೆ ತನ್ನ ವ್ಯಥೆ!

 

2.

ಮೈಕೊರೆವ ಚಳಿಗೆ ಹರಿದ ಕಂಬಳಿ

ಎಳೆದುಕೊಂಡಿತು ಅಜ್ಜ

ಮನಸ್ಸು ಮುದುಡಿದೆ, ಹೇಳಲು

ಪದಗಳಿಲ್ಲ, ನಡುಗುವ ಸಜ

 

3.

ಆ ಏಕಮುಖ ಸಂಚಾರದ ದಾರಿಯಲ್ಲಿ

ಮಗುವಿನೊಂದಿಗೆ ತಾಯಿ

ಮುಂದೆ ಹೋದವಳು ಹಿಂದೆ ಬರಳು

ಬೊಗಳಿದೆ ಬೀದಿನಾಯಿ

 

4.

ರಾತ್ರಿ ಒಂದೇ ಹಾಸಿಗೆಯಲ್ಲಿ ನಡೆದ

ಜಗಳಕ್ಕಿನ್ನೂ ಕುದಿವ ಮನ

ಮುಂಜಾನೆಯ ಚಳಿಗೂ ಕಿಚ್ಚಿಟ್ಟಿದೆ

ಮನೆಯೊಳಗೇ ಸ್ಮಶಾಣ

 

5.

ಬಸ್ ನಿಲ್ದಾಣದಲ್ಲಿ ಮಲಗಿದ್ದವನಿಗೆ

ಸೂರ್ಯೋದಯದ ತವಕ

ದೊಣ್ಣೆಯ ಏಟಿಗೂ ಏಳಲಿಲ್ಲ

ತೀರದ ಮೈ ಕೈ ನಡುಕ

 

6.

ಚಳಿ ಮುಗಿದು ಬಿಸಿಲು ನೆತ್ತಿ ಸುಟ್ಟರೂ

ಇವರುಗಳು ಮೌನಿಗಳು

ಹೇಳಿಕೊಳ್ಳಲು ಪದ ಭಂಡಾರವಿಲ್ಲ

ಕಣ್ಣಿಲ್ಲದ ಅಂಧ ಕವಿಗಳು

‍ಲೇಖಕರು G

10 December, 2012

7 Comments

  1. mmshaik

    chennaagide..

  2. chalam

    hanchiddane thanna vyathe…. sooooooooooo nice

  3. Shashidhar

    Nice poem. Thumba chennaagidhe. Ishta aaithu

  4. Gopaal Wajapeyi

    ನಿಮ್ಮ ‘ಚಳಿಗವನಗಳು’ ಚೆನ್ನಾಗಿವೆ…

  5. Badarinath Palavalli

    ಈ ಭಾವಗಳು ನಮ್ಮದೇ ಸಾಲುಗಳು.

    ಬೆಳಗಿನ ವಾಯು ಸಂಚಾರದಲಿ
    ಬಿಸ್ಕತ್ತಿಗೆ ಬಾಲ ಅಲ್ಲಾಡಿಸಿದ್ದು,
    ನಡು ರಾತ್ರಿಯಲಿ ಸ್ಕೂಟರಿನ
    ಹಿಂದೆ ಬೊಗಳುತ್ತ ಬಂದ
    ಆ ನಾಯಿ ಇದೇನಾ?

  6. Mohan V Kollegal

    ವಂದನೆಗಳು ಓದಿದವರಿಗೆ ಮತ್ತು ನೆಚ್ಚಿನ ಅವಧಿ ಬಳಗಕ್ಕೆ… 🙂

  7. bellala Gopinatha rao

    ಸ್ತಬ್ದ ಚಿತ್ರಗಳು ನಮ್ಮನ್ನೇ ನಡೆಸುತ್ತಾ ಮುಂದೆ ಸಾಗಿದವು ವ್ಯಥೆಗಳ ಅನಾವರಣ ಮಾಡುತ್ತಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading