ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡಲಗಿರಿ ಪ್ರಸನ್ನ ಹೊಸ ಕವಿತೆ – ಕ್ಷಣ ಬಂದಿದೆ ಹೋಗಬೇಕು…

ಮಂಡಲಗಿರಿ ಪ್ರಸನ್ನ

ಕತ್ತಲಾಗುತಿದೆ ಮೇಲೊಂದು ಮನೆಯಿದೆ ಹೋಗಬೇಕು
ಕಾಯುತ ಕುಳಿತಿಹೆ ಸುಮ್ಮನೆ ಹೋಗಲಿದೆ ಹೋಗಬೇಕು

ಸಾಕು ನೋಡಲೇನಿದೆ ವೃಥಾ ಕಾಲ ತಳ್ಳುತ್ತಾ ಕೂಡಲು
ಬಂದ ಕೆಲಸ ಅಪೂರ್ಣವೇನಲ್ಲ ಸಾಗುತಿದೆ ಹೋಗಬೇಕು

ಮಿಂಚುಳ್ಳಿ ಬದುಕಲಿ ನೂರಾರು ಆಸೆ ಕೆಲ ಉಳಿದಿವೆ ನಿಜ
ಹಿಂದಿನವರಿಗೆ ದಾರಿಬಿಡುವ ಕ್ಷಣ ಬಂದಿದೆ ಹೋಗಬೇಕು

ಬದುಕಿನ ಜೊತೆಗೆ ಹರಿದ ನಗು ಅಳುವಿನ ಹೊಳೆ ಸಾಲು
ಆಗಾಗ ಮಿಂಚಂತೆ ಬಿಸಿಲ್ಗುದುರೆ ಕಂಡಿದೆ ಹೋಗಬೇಕು

ಇಷ್ಟು ವಸಂತ ಕಳೆದಿವೆ ಹಗಲಿನಂತಲ್ಲ ಇರುಳು ದೀರ್ಘ
ʻಗಿರಿʼ ಸಾಕಿನ್ನು ಪ್ರಯಾಸ ದೇಹ ಬಳಲಿದೆ ಹೋಗಬೇಕು

‍ಲೇಖಕರು Admin

17 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading