
“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….”
“ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….”
“ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು ಕಾದಂಬರಿಯನ್ನೇ ಬರೆಯಬೇಕಷ್ಟೇ.ಹಾಂ..ಮುಂದಕ್ಕೆ ಬರ್ಕೊಳಪ್ಪ. ಐದಡಿ ಎರಡಿಂಚು ಎತ್ತರ. ದಿನಾಂಕ …….ರಿಂದ ತ್ಯಾಗರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿರುತ್ತಾರೆ”.
“ಸರ್ ಹೋಗುವಾಗ ಇಪ್ಪತ್ತು ಸಾವಿರ ರೂಪಾಯಿ ಎಟಿಎಂನಿಂದ ವಿತ್ ಡ್ರಾ ಮಾಡಿದ್ದಾಳೆ. ನಾನ್ ಹೇಳಿದ್ನಲ್ಲ ಸರ್ ಬೇಡ ಬೇಡ ಅಂದ್ರೂ ಆ ಹುಡುಗನ ಜೊತೆ ತಿರಗ್ ತಿದ್ಲು. ಬಹುಶಃ ಅವನ ಜೊತೆಯೇ…..”
“ನೋಡಿಮ್ಮ…ನಾವು ಎಲ್ಲಾ ಸಾಧ್ಯತೆನೂ ಪರಿಶೀಲಸ್ ತೀವಿ. ಅವ್ಳು ನಿಮ್ಮ ಮಗಳು. ನಾವು ಹಾಗೆಲ್ಲ ಈಗ್ಲೇ ಕನ್ಕ್ಲೂಷನ್ ಗೆ ಬರಬಾರ್ದು. ಹೋಗಿದ್ರೆ ಎಲ್ಲ ಹೋಗಿರ್ತಾರೆ ಹೇಳಿ…ತಿರುಪತಿ, ಧರ್ಮಸ್ಥಳ, ಉಡುಪಿ ಅಷ್ಟೇ. ಮೊಬೈಲ್ ಪ್ರಿಂಟ್ ಔಟ್ ಬಂದ ಮೇಲೆ ಟ್ರೇಸ್ ಮಾಡಲು ಈಝಿ ಆಗುತ್ತೆ. ಆದ್ರೆ ನಿಮ್ಮ ಮಗಳು ಮೊಬೈಲ್ ಆನ್ ಮಾಡಿಟ್ಟುಕೊಂಡಿರಬೇಕು ಅಷ್ಟೇ”.
ಎಸ್ ಐ ಡಿಕ್ಟೆಷನ್ ಮುಂದುವರೆಸಿದ. ರೈಟರ್ ಬರೆದುಕೊಳ್ಳುವುದನ್ನು ಮುಂದುವರೆಸಿದ
ಸಂಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮಿರ್ಚಿ





0 Comments