ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೀಮರಾಯ…

 ಉತ್ತಮ ಎ ದೊಡ್ಮನಿ

ಮತ್ತೆ  ಮರುಕಳಿಸಿದೆ ಅದೆ ಜೀವನ
ನೀವು ಹೋದ ದಿನದಿಂದ ಭೀಮರಾಯ

ಬರಿ ಮೋಸ ವಂಚನೆ ತುಂಬಿದ ಜಗದಲ್ಲಿ
ನಿಯತಿಗೆ ಕಿಮ್ಮತಿಲ್ಲ ಇಲ್ಲಿ ಭೀಮರಾಯ

ಹಾದಿ ಉದ್ದಕು ಕಿತ್ತು ತಿನ್ನುವ ನರ ರಾಕ್ಷಸರು
ಹೊಂಚ್ಚು ಹಾಕಿ ಕಾಯುತ್ತಿದ್ದಾರೆ ಭೀಮರಾಯ

ನಮ್ಮವರೆ ನಮ್ಮನು ಶೋಷಿಸುತಿರುವರು
ನಿಮ್ಮ ಹೆಸರೇಳಿ ಬದಕುತಿರುವರು ಭೀಮರಾಯ

ನಂಬಿಕೆ ಸತ್ತಿ ಹೋಗಿದೆ
ಸತ್ಯದ ಮೇಲೆ ಸುಳ್ಳು ಕುಣಿಯುತ್ತದೆ ಭೀಮರಾಯ

ಪ್ರೀತಿ ಕರುಣೆ ನಂಬಿಕೆಯ ನಾಟಕವಾಡಿ
ಜಾತಿ ಧರ್ಮದ ಆಟ ಹೆಚ್ಚಾಗಿದೆ ಭೀಮರಾಯ

ಬಡವರ ಬದುಕು ಹಸನಾಗಲೆಯಿಲ್ಲ
ನಿನ್ನ ಆಶೆ ಇಡೆರಲೇಯಿಲ್ಲ ಭೀಮರಾಯ

ಮುಗ್ಧತೆ ಬಂಡವಾಳ ಮಾಡಿಕೊಂಡು
ಭಾವನೆ ಜೋತೆ ಆಡುತಿರುವರು ಭೀಮರಾಯ

ತಮ್ಮನೂ ತಾವು ನಾಯಕರೆನ್ನುವರು
ಜನಗಳಿಗೆ ಹಗಲು ನಕ್ಷತ್ರ ತೋರಿಸುತ್ತಿರುವರು ಭೀಮರಾಯ

ಬಂಡವಾಳ ಶಾಹಿಗಳ ದಬ್ಬಾಳಿಕೆಗೆ
ಬಡವರ ಬದುಕು ಬೀದಿಗೆ ಬಿದ್ದಿದೆ ಭೀಮರಾಯ

ಇಂದಲ್ಲ ನಾಳೆ ಬದುಕು ಬದಲಾಗುತ್ತೆಂದು
ಕಾಯುತ್ತಿರುವರು ಭರವಸೆಯೊಂದಿಗೆ ಭೀಮರಾಯ

‍ಲೇಖಕರು Admin

14 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading