ರಾಜಶೇಖರ ಬಂಡೆ
ಬೆನ್ನ ಬಿಲ್ಲುಮಾಡಿ ಗೇದ ಅಪ್ಪನ
ಪ್ರತಿ ಬೆವರ ಹನಿಯಲ್ಲೂ ಗಂಧ
ಹೊಮ್ಮುತ್ತಿತ್ತು, ಕೂತುಣ್ಣುವ ಮಗನಿಗೆ
ಅಟ್ಟಿಕ್ಕುವ ಅವ್ವ ಸುಕ್ಕುಗಟ್ಟುವವರೆಗೆ,
ಉರಿಬಿಸಿಲಿನಲ್ಲಿ ಕೆಂಡ ಭೂಮಿಯ ತುಳಿದು
ಅಗೆದು, ಅಗುಳು ಅಗುಳೂ ನನ್ನದೆನ್ನುವ
ಹೊತ್ತಿಗೆ ನನ್ನಪ್ಪ ಪೂರ್ತಿ ಬಡಕಲು
ಬೋಳಿಮಗ ದೇವರು ತಟ್ಟೆಯಲ್ಲಿದ್ದ,
ಇಸಾ ಕುಡಿದ ತೇರುಬೀದಿ ಚಿಕ್ಕಣ್ಣನ
ದವಾಖಾನೆಗೊಯ್ದ ಸಣ್ಣಪ್ಪ, ದೊಡ್ಡಪ್ಪನಾಗುವ
ಹೊತ್ತಿಗೆ ದೇವರು ಆಡುವವರ ಬಾಯ್ಗಳಲ್ಲಿ
ಎಂಜಲಿನ ಜೊತೆಗಿದ್ದ,
ಬಿಕಾರಿ ಹೆಣ್ಣುಮಗಳು ದಾರಿಯಲ್ಲೇ
ದೊಡ್ಡವಳಾಗಿ ಹಿತ್ತಲಿಗೆ ಬರುವಾಗ
ರೋಡೆಲ್ಲಾ ಕೆಂಪು ಕುಂಕುಮದಂತಿತ್ತು
ಎಂದವನ ಹೆಗಲ ಮೇಲೆ ಝಾಂಡಾ ಹೂಡಿದ್ದ
ದೇವರು ಕೊಡವಿದರೂ, ಕೆಂಡ ಹಾಯ್ದರೂ ಇಳಿಯಲಿಲ್ಲ,
ಹಜಾರದಲ್ಲಿ ಕೊಂಟಾಗಿ ಮಲಗಿದ್ದವನ
ಕಾಲ್ಮುರಿದು ಕೊಳ್ಳಿಹೊತ್ತಿಸಿ
ಬೀಡಿ ಸೇದುವ ತೋಟಿಯವನ
ತಮಟೆಗಿನ್ನೇನು ಬಿಸಿ ಎನ್ನುವ ಹೊತ್ತಿಗೆ
ಗಡಿಯಾರದ ಮಳ್ಳುಗಳಲ್ಲಿ ನೇಣು
ಬಿಗಿದಿದ್ದ ದೇವರು ದೇವರಾದ,
ಮೊನ್ನೆ ಪಳೇಕು ಮಾರಿ ತಗುಲಿ
ಮೈಕೈ ಸೆಟೆದವನಂತೆ ಗುಡಿಯೊಳಗೆ
ಕೂತಿದ್ದಾಗಲೂ ಬೋಳಿಮಗ ದೇವರು
ದೇವರಾಗಿದ್ದ.







ನಿಜಕ್ಕೂ “ಬಂಡೆ” ಯಷ್ಟೇ ಗಟ್ಟಿ ಕವಿತೆ
ಬಂಡೆಯ ದೇವರು ಭಯಂಕರ…!!
very good! after so long, a fresh and strong voice!
Nice one..!!!
ವಾವ್
p.lankeshara deshabahkata… suulemaga…. emba kavite odhidaaga aguva aaghata igluuuaaytu..!vasudev nadig
ಬಂಡೆ…… ಸೂಪರ್ ಮಗಾ!
ಬಹಳ ದಿನಗಳ ನಂತರ ಒಳ್ಳೆಯ ಕವನ…
ಕಟ್ಟಿರುವ ಪ್ರತಿಮೆಗಳು ಕಾಡುತ್ತಿವೆ…
ಕಣ್ಣು ತುಂಬಿದೆ…
ಧನ್ಯವಾದಗಳು ಬಂಡೆಯವರೇ…
Good one! ……
ಈ ಹುಡುಗನ ಹೆಸರು ಮಾತ್ರ ಬಂಡೆ ಆದ್ರೆ ಎಂಥ ಹೃದಯವನ್ನಾದರು ಕರಗಿಸಿಬಿಡಬಲ್ಲ … ತಾನೂ ಕರಗಬಲ್ಲ… ತುಂಬು ಕವಿತೆಯ ಸಡಗರದಲ್ಲಿ …..
chennagide
sir. nimm kavite tubma channagide. ede reeti nimm kavite mattastu oduva aase. Tirupati. Bhangi
ದೇವರಿಗೆ ಈ ತರಹನೂ ಬೈಬಹುದು ಅಂತ … ಈವಾಗಲೇ ಗೊತ್ತಾಗಿದ್ದು .
ಬಂಡೆ, ವ್ಯವಸ್ಥೆಯ ಬಗ್ಗೆ ಮನಸ್ಸು ಕಲ್ಲುಗಟ್ಟಿದಾಗ ಹೊರಹೊಮ್ಮುವ ಮೌನದ ಸಿಟ್ಟು ತಕ್ಷಣಕ್ಕೆ
‘ಬೋಳಿಮಗ ‘ ಎಂದು ಉಸುರಿದೆ .
ಹಾಗೆ ಉಸುರಿದ್ದನ್ನು ಎಷ್ಟೊಂದು ಕಸುವಿಟ್ಟುಕೊಂಡು ಬರಹ ಕಟ್ಟಿದ್ದೀರಿ ..!
ಬಂಡೆ ಕವಿತೆ. ಚೆನ್ನಾಗಿದೆ
ಕವಿತೆ ಚನ್ನಾಗಿದೆ ,ಈ ಕವಿತೆ ಪ್ರಸವಿಸುವ ಕವಿಯ ಮನಸ್ಸು ಹೇಗಿದ್ದೀತು ? ಕವಿತೆಗಿಂತ ,ಕವಿತೆ ಹುಟ್ಟಲು ಕಾರಣವಾದ ಸನ್ನಿವೇಶ , ಅದನ್ನು ಭಟ್ಟಿ ಇಳಿಸಿದ ಕವಿಯ ಮನಸ್ಥಿತಿಗೆ ನನ್ನದೊಂದು ಸಲ್ಯೂಟ್ !
ಹೃದಯ ಕರಗಿಸಿಬಿಡಬಲ್ಲ … ಕವಿತೆ nice ya
ನಿಘಂಟಿನಲ್ಲಿ ಎಲ್ಲಾ ರೀತಿಯ ಶಬ್ಧಗಳು ಹೇರಳವಾಗಿ ಸಿಗುತ್ತವೆ. ಹಾಗೆಂದು ನಾಲ್ಕೈದು ನಿಘಂಟುಗಳನ್ನು ಇಟ್ಟುಕೊಂಡು ಕೂತರೆ ಕವನ ಹುಟ್ಟುವುದಿಲ್ಲ. ಕವನದಲ್ಲಿ ಅವ್ಯಾಚ ಶಬ್ಧಗಳು/ಅಶ್ಲೀಲ ಪದಗಳು ಬರಬಾರದು ಎಂಬ ನಿಯಮವೇನಿಲ್ಲ. ಆದರೆ ಕವನವೊಂದರಲ್ಲಿ ಅಂತಹ ಶಬ್ಧಗಳನ್ನು ಉಪಯೋಗಿಸಿದ್ದರಿಂದ ಅಭಿವ್ಯಕ್ತಿಗೆ ಏನಾದರೂ ಪ್ರಯೋಜನವಾಗಿದೆಯೇ ಎಂಬುದು ಮುಖ್ಯ. ಪದಗಳ ಉಪಯೋಗ ಕೇವಲ ಬೆಚ್ಚಿ ಬೀಳಿಸುವುದೊಂದೇ ಆದರೆ ಕವನಕ್ಕೆ ಆಗುವ ಪ್ರಯೋಜನ ಅತ್ಯಲ್ಪ. ಕಣ್ಣು ಕೋರೈಸುವ ಬೆಳಕು ನಮ್ಮ ದೃಷ್ಟಿಯನ್ನೂ ಮಂಜು ಮಾಡುತ್ತದಲ್ಲವೇ?— ಎಂ ಎ ಶ್ರೀರಂಗ ಬೆಂಗಳೂರು.
ಎಂ ಎ ಶ್ರೀರಂಗರು “Super ಮಗಾ’ ಅನ್ನದೆ ಸೂಚ್ಯವಾಗಿ ತಿಳಿಸಿದ್ದಾರೆ. ಅಸಹಾಯಕತೆಯ ಸಾಲುಗಳಲ್ಲಿ ರೋಷದ ‘dosage’ ಹೆಚ್ಚಾದರೂ ಕವಿತೆ ಕಿರಿಕಿರಿ ಅನುಭವಿಸುತ್ತದೆ.
ಖುಷಿಯಾಯ್ತು! ತುಂಬಾ ಚೆನಾಗಿದೆ!
ಅಗುಳು ಅಗುಳೂ ನನ್ನದೆನ್ನುವ
ಹೊತ್ತಿಗೆ ನನ್ನಪ್ಪ ಪೂರ್ತಿ ಬಡಕಲು
ಬೋಳಿಮಗ ದೇವರು ತಟ್ಟೆಯಲ್ಲಿದ್ದ,…. ಇದೇಕೋ ಅರ್ಥವಾಗಲಿಲ್ಲ.
ಙ್
ನನ್ನಪ್ಪ ಗೇದು ರಕ್ತ ಬಸಿದು ಬೆಳೆದ ಅನ್ನವನ್ನ ನನ್ನದೆನ್ನುವ ಹೊತ್ತಿಗೆ
ಬಡಕಲಾಗಿದ್ದ,
ಜನ ಆ ಅನ್ನವನ್ನ ದೇವರು ಕೊಟ್ಟಿದ್ದು ಅಂದುಬಿಟ್ರು ಅಂತ ಸಾರ್
Chennagide
ಬಂಡೆಯವರಿಗೆ ನಮಸ್ಕಾರ. ನನಗೆ ಪದ್ಯ ಪೂರ್ತಿಯಾಗಿ ಅರ್ಥವಾಗಿಲ್ಲ. ಇದೊಂದು ಕಲ್ಲುಬಂಡೆಯ ಕಡಲೆಯಂತಾಗಿದೆ(ಬಹುಶಃ ನನ್ನ ತಿಳುವಳಿಕೆಯ ಮಟ್ಟ ಸೀಮಿತವಾಗಿರಬಹುದು).ಇಲ್ಲಿನ ಕಾಮೆಂಟುಗಳನ್ನು ನೋಡಿದರೆ,ಕವಿತೆ ಚನ್ನಾಗಿರಲೇಬೇಕು.ಅರ್ಥ ತಿಳಿಯಲು ಕಾತುರನಾಗಿದ್ದೇನೆ.
ಆದ್ದರಿಂದ ದಯವಿಟ್ಟು ಪದ್ಯದ ತಾತ್ಪರ್ಯವನ್ನು ಅಥವಾ ಯಾವ ವಿಷಯದ ಮೇಲೆ ಇದನ್ನು ಬರೆದಿರುವಿರಿ ಎಂದು ತಿಳಿಸಿದರೆ ಅನುಕೂಲವಾಗುತ್ತದೆ.
supr
chennagide. thaajaathana feel aythu.
ಅಂಗಡಿ ಇಂದುಶೇಖರ ಅವ್ರೆ
ಅಪ್ಪ ಕೊಟ್ಟ ಅನ್ನವನ್ನ, ಅವ್ವ ಕೊಟ್ಟ ಜನ್ಮವನ್ನ ದೇವರು ಕೊಟ್ಟದ್ದು ಅಂದಾಗ ಆ ಕೋಪವನ್ನ ಇಲ್ಲಿ ತೋಡಿಕೊಂಡಿದ್ದೇನೆ ಅಷ್ಟೆ, ಇದಕ್ಕಿಂತಲೂ ಸುಲಭವಾಗಿ ಹೇಳೋಕೆ ಬರಲ್ಲ.
ಧನ್ಯವಾದ, ಬಂಡೆಯವರಿಗೆ.
Nelada agaadha kasuvu iruva kavite.bande geleya nimmolage desi kavi iddane.keep it up mitra.
Awesome Bande….