ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೋದಿಲೇರನ ಒಂದು ಕವಿತೆ

ನಿಶೆಯಲ್ಲಿರು…

(ತರ್ಜುಮೆ)

ಮೋಹನ್ ವಿ ಕೊಳ್ಳೇಗಾಲ

ನೀನು ಯಾವಾಗಲೂ ಕುಡಿತದ
ಅಮಲಿನಲ್ಲಿರಬೇಕು
ಅಷ್ಟೇ
ನಿನ್ನ ಬೆನ್ನನ್ನು ಮುರಿದು
ದೇಹವ
ನೆಲಕ್ಕೊರಗಿಸುವ
ಈ ಕೆಟ್ಟ ಘಳಿಗೆಗಳನ್ನು
ಮರೆಯಲು
ನೀನು ನಿರಂತರವಾಗಿ
ಕುಡಿಯುತ್ತಿರಬೇಕು
ಆದರೆ ಏನನ್ನು?
ವೈನ್, ಕವಿತ್ವ ಅತವಾ ಸದ್ಗುಣ
ನಿನ್ನಿಷ್ಟ
ಆದರೆ ಕುಡಿಯುತ್ತಿರು

ಕೆಲವು ಸಮಯದಲ್ಲಿ
ಅರಮನೆಯ
ಮೆಟ್ಟಿಲುಗಳಲ್ಲಿ
ಗಟಾರದ ಹಸಿರ ಹುಲ್ಲಿನ
ಮೇಲೆ
ಅಥವಾ
ಅಳುವ ನಿನ್ನ ಕೋಣೆಯ
ಏಕಾಂತದಲ್ಲಿ
ನಿನಗೆ ಎಚ್ಚರವಾಗಬಹುದು
ಅಂದರೆ
ನಿನ್ನ ಕುಡಿತದ ನಿಶೆ
ಇಳಿದಿದೆ
ಎಂದದರರ್ಥ
ಆಗ
ನಿನ್ನ ಸುತ್ತಲ ಗಾಳಿ, ನೀರಿನಲೆ
ನಕ್ಷತ್ರ, ಪಕ್ಷಿ, ಗಡಿಯಾರ
ಜೊತೆಗೆ
ಹಾರುತ್ತಿರುವ ಎಲ್ಲವನ್ನೂ
ಅಳುತ್ತಿರುವ ಸಕಲವನ್ನೂ
ಉರುಳುತ್ತಿರುವ
ವಸ್ತುಗಳನ್ನೂ
ಹಾಡುತ್ತಿರುವ
ಮಾತನಾಡುತ್ತಿರುವ
ಉಳಿದೆಲ್ಲವುಗಳನ್ನೂ
‘ಇದು ಯಾವ ಘಳಿಗೆ ಎಂದು ಕೇಳು’
 
ಗಾಳಿ, ನೀರಿನಲೆ, ನಕ್ಷತ್ರ, ಪಕ್ಷಿ, ಗಡಿಯಾರ
‘ಇದು ಕುಡಿಯುವ ಸಮಯ’
ಎಂದು ಕೂಗುತ್ತವೆ
ಕಾಲನ ಕಾಲಡಿಯಾಳಾಗಬಾರದೆಂದರೆ
ನಿರಂತರವಾಗಿ ಕುಡಿಯುತ್ತಿರು
ವೈನ್, ಕವಿತ್ವ ಅಥವಾ ಸದ್ಗುಣ
ನಿನ್ನಿಷ್ಟ
ಒಟ್ಟಿನಲ್ಲಿ ಕುಡಿಯುತ್ತಿರು
 
 

‍ಲೇಖಕರು avadhi

10 April, 2014

3 Comments

  1. Naren

    beautiful!

  2. hvB

    ಬೋದಿಲೇರ್… ಅದ್ಭುತ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading