ದೀಪದವಳು

-ರಮೇಶ ಹೆಗಡೆ
ಬೊಗಸೆಯಲಿ ಬೆಳಕಿರಿಸಿ
ಬಂದಿಹಳು ಹುಡುಗಿ
– ನಿಶೆಯೇ ನೀ ತೊಲಗಿ ಬಿಡು
ಕಾಣದಂತೆ . . .
ಪ್ರೀತಿಯನೇ ಹನಿಸುತ್ತ
ಕೂತಿರಲು ಅವಳು
– ನಾ ಬೆಳಗಿ ಹೋಗುವೆನು
ಆರದಂತೆ . . .
ಖುಷಿಯವಳು ಒಳಗಿಳಿದು
ಕುಣಿಸಲೀ ಮನಸನ್ನು
– ಅನುದಿನವು ಸಡಗರದ
ದೀಪಾವಳಿ . . .
ಹೂ ನಗೆಯ ಗರಿ ಹಗುರ
ಭಾರದಲಿ ತೇಲುವುದು
– ನಂದನದ ಅಂದವಿರೆ
ಬದುಕಿನಲ್ಲಿ . . .





0 Comments