ಆಸೆಯ ಕೂಸು ಮನುಜ ಎಂದಿದ್ದ ಅಪ್ಪ

ಸವಿತಾ ರವಿಶಂಕರ
ಬೇಡಿ ಬಂದು ಬಾಗಿಲಲಿ ಕನವರಿಸಿದಿರಿ
ಬರುವೆಯಾ ಎಂದು?
ಕಂಗಳಲಿ ಆಸೆ, ಹೃದಯದಲಿ ಬೇಡಿಕೆ
ಒಲ್ಲೆ ಎನ್ನದಾದ.
ಅರಸ ನೀ ಅಸುರಿ ನಾ
ಅಹಂ ನಿಮ್ಮ ನಡೆ
ಒಲವೇ ನಮ್ಮ ನುಡಿ
ನಿಯತ್ತು ಒಂದೇ ಸಂಪತ್ತು.
ಹರಿವ ಗುಣ ನಮ್ಮಲ್ಲಿ
ನಿಂತಲ್ಲೇ ಕೊಳೆಯುವಿಕೆ ನಿಮ್ಮಲ್ಲಿ
ನಡೆದೆ, ಮೂರು ಮಕ್ಕಳ ಕೊಟ್ಟೆ.
ಬಳಸಿದಿರಿ ಅವರನ್ನು ಆರ್ಯಹೆಣ್ಣಿಗಾಗಿ.
ಬೇಡವಾಗಿತ್ತೇನೋ ಈ ಸಲುಗೆ ,
ಆಸೆಯ ಕೂಸು ಮನುಜ ಎಂದಿದ್ದ ಅಪ್ಪ
ಕಳೆದದ್ದು ಎಣಿಸದವರು, ಕೊರಗದವರು,
ನಕ್ಕು ಮುನ್ನಡೆದಿದ್ದೆ. ಇಂದೂ ಹಾಗೇ..
ಅಪ್ಪನಿಲ್ಲ, ನೀನಿಲ್ಲ, ಅಂಗಳದಲ್ಲಿನ ಇಂದ್ರಜಿತನೂ ಇಲ್ಲ.
ಅಗೋ ವಿಭೀಷಣ ನಿಂತಿದ್ದಾನೆ,
ರಾಮನಾಜ್ಞೆಯಂತೆ ಕಾಪಿಡುವನಂತೆ
ಕಂಡೆನಿಲ್ಲಿ ರೀತಿ, ಅದರಲ್ಲೊಂದು ನೀತಿ
ಹರಿಯುವೆ ಹೀಗೆ.
ಅಮ್ಮ ನೀನು black ಕೂ,
ನಾನುwhite ಊ.
ಹೌದು ಚಿನ್ನ ನಾವಿಬ್ಬರೂ
ಸಿಂಧೂ ನಾಡಿನ ಸಂಕೇತಗಳು.





ತುಂಬಾನೇ ಅರ್ಥ ಪೂರ್ಣ ಲೇಖನ