ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಕಿತ್ತಾ ಗಾಯ ಕೆರೆಯುವ ಕೆಲಸ?

ಗೀರ್ವಾಣಿ

ಹೀಗೆ ಒಂದಿಷ್ಟು ಹೊತ್ತು ಇದ್ದು ಬಿಡಬಹುದಿತ್ತು
ನಾನು ನನ್ನ ತುಮುಲಗಳ ಜೊತೆ !

sheಕಣ್ಣೀರು ಕೆನ್ನೆ ಮೇಲೂ ಆರುತ್ತಿತ್ತು,
ಮಾತು ಗಂಟಲಲ್ಲೂ ಉಳಿಯುತ್ತಿತ್ತು.

ಭಾವಗಳ ದಿಬ್ಬಣ ಹೊರಡಿಸಿದೆ,
ನೋವುಗಳ ಹೊಸ ಖಾತೆ ತೆರೆದೆ,
ತಕರಾರುಗಳ ಪಟ್ಟಿ ಉದ್ದ ಮಾಡಿದೆ
ಕೊಟ್ಟಿದ್ದಕ್ಕೂ ರಶೀದಿ ಮರೆತೆ

ತಿಕ್ಕಿ ತೊಳೆದು ಉಜ್ಜಿದ್ದು ಬರೀ ಪಾತ್ರೆಗಳನ್ನಲ್ಲ !
ತುಕ್ಕು ಹಿಡಿದ ಸಂಬಂಧಗಳನ್ನು,
ರಚ್ಚೆ ಹಿಡಿದ ಮೌನಗಳನ್ನು.
ಒಂದಿಷ್ಟು ಹಿಡಿ ಮಣ್ಣು ಕೊಟ್ಟಿದ್ದರೆ
ಹೂತು ಬಿಡುತ್ತಿದ್ದೆ
ತಿರಸ್ಕಾರಗಳನ್ನು !

ಈಗ್ಯಾಕೋ ಎಲ್ಲದಕ್ಕೂ ಲೆಕ್ಕ ಕೇಳಿದ ಭಾವ.
ಏನು ಲೆಕ್ಕ ಕೊಡಬಲ್ಲೆ ನಾನು?
ಕೇಜಿಗಟ್ಟಲೆ ದೂರು
ಮಣ ಭಾರದ ಅಪಮಾನ
ಕಿಲೋ ಮೀಟರ್ ಉದ್ದದ ನಿಟ್ಟುಸಿರು ಹಾಗೂ
…….
ಬೇಕಿತ್ತಾ ಗಾಯ ಕೆರೆಯುವ ಕೆಲಸ ???

 

‍ಲೇಖಕರು Admin

24 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading