ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಂದ್ರೆ ಅಂದ್ರs… ಏನಂತ ಮಾಡೀರಿ…?

ಬೇಂದ್ರೆ ಅಂದ್ರ… ಚಿತ್ರ ಕೃಪೆ : ಬಿ ವಿ ರಾಮ ಮೂರ್ತಿ

-ಹನುಮೇಶ ಮಳಗಿ

ಬೇಂದ್ರೆ ಅಂದ್ರs… ಏನಂತ ಮಾಡೀರಿ…?

ಅವ್ರು ಬಂದ್ರ, ಬಂದು ನಿಂತ್ರ, ಕೂತು ಮಾತಾಡೀದ್ರ

ಹರೀತಿತ್ತ ಹಾಡ… ಮೆರೀತಿತ್ತ ನಾಡ…

ವೇದವನ ಕವನ ನವನವ ಧಾಟಿಯೊಳಗ ಹಾಡತಿದ್ರ

ಕೇಳಿದವರ ತಲೀ ತಿರಗತಿತ್ತ,

ಒಳಗ ಹೊಕ್ಕ ವಿಷಯಕ್ಕ ಕಣ್ಣ ತೆರೀತಿತ್ತ…

ಝರಿಝರಿಯಾಗಿ ಹನಿದ ಹಾಡ

ನಾಡ ತುಂಬ ಗುಣಗುಣಿಸತಿತ್ತ…

ತಿಳಧಾಂಗ ಆಗತಿತ್ತ ಹಾಡ, ತಿಣಕಿದರ

ತಿಳೀದ ತಲೀ ನರ ಹರೀತಿತ್ತ…

ಅರ್ಥ ಮಾತ್ರ ‘ಪೂಜಿ’ಯಾಗತಿತ್ತ…

ಇಲ್ಲೇ ಇದ್ರೂ, ಎತ್ತರಕ್ಕೇರಿದ್ರೂ

ಕೈಗೆ ಸಿಕ್ಕಂಗ ಅನಸ್ತಿದ್ರೂ –

ಎಲ್ಲಾ ಕಡೆ ಕಾಣಸ್ತಿದ್ರು…

ಮನ ಅವರು ಏರಿದ ಎತ್ತರ ನೋಡತಿತ್ತ ನೆನೀತಿತ್ತ,

ತೆಳಗಿಳದು ಬಂದು ಅರ್ಥಾ ತಿಳಸಂತ ಕೇಳತಿತ್ತ…

ನಮ್ಮನೀ ಅಜ್ಜ ಇದ್ದಾಗ ತಿಳೀಲಿಲ್ಲ ನಮಗ ‘ಮಾತಿನ’ ಬೆಲಿ

ಕೂತೀವೀಗ ಮಂಗ್ಯಾನಂಗ ಕೆರಕೋಂತ ತೆಲಿ…

ಬೇಂದ್ರೆ ಅಂದ್ರs… ಏನಂತ ಮಾಡೀರಿ…?

 

‍ಲೇಖಕರು G

24 November, 2012

2 Comments

  1. Gopaal Wajapeyi

    ಬೇಂದ್ರೆ ಅಂದ್ರ ಊಹೆಗೆ ನಿಲುಕದ, ವ್ಯಾಖ್ಯೆಗೆ ಸಿಲುಕದ ಪ್ರತಿಭೆ…

  2. Kiran kumar Shetty

    nadige obbare Varakavi Namma bendre ajjaara..
    nadigobbare Varanata Meyar muttanna..Dr raj..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading