ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆವರು ಹಸಿರು ಪೈರಾಗಲಿ ಸಖಿ

ಡಿ.ಎಂ.ನದಾಫ್

ನಿಶೆಯ ಮಾತಾಡುವುದನಿನ್ನು ಬಿಟ್ಟುಬಿಡು ಸಖೀ
ಕುಡಿನೋಟ ಮುಂಗುರುಳ ಚಂಚಲತೆಗಳೇ ಸಾಕು ಸಖೀ

ಅವರು ಬಳಸುವ ಅಮಲು ಪಡಿಪದಾರ್ಥಗಳು ಬೇಡ ಸಖಿ
ನಾವು ಬದುಕಿದ ಘಮಲು ಗಳಿಗೆಗಳ ನೆನಪೇ ಸಾಕು ಸಖೀ

ಇರಬಹುದು ಅವರಲ್ಲಿ ಬಿ ಎಂ ಡಬ್ಲ್ಯೂ ರೋಲ್ಸ್ ರಾಯ್ಸನ ಎಸಿ ಗಳು
ನಾವೇರಿದ ಸ್ಕೂಟರಿಗೆ ಹಿಂಗಾರಿನ ತಂಗಾಳಿಯೆ ಸಾಕು ಸಖಿ

ನಶೆಯ ಹೆಸರಲ್ಲವರಿಗೆ ಕಸಿಯಬೇಕಿದೆ ಹೆರವರ ಕಾಸು
ಬೇವರ ಹರಿಸಿದೀ ದೇಹಕೆ ಚಕೋರ ಚಂದ್ರಮರಾಲಿಂಗನವೇ ಸಾಕು ಸಖಿ

ಕಡಲ ನೀರು ಹರಳುಗಟ್ಟಿ ಉಪ್ಪಾಗುವ ತೆರದಿ
“ದಮನ” ಹರಿಸಿದ ಬೆವರು ಹಸಿರು ಪೈರಾಗಲಿ ಸಖಿ

‍ಲೇಖಕರು Avadhi

8 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading