ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬೆಳದಿಂಗಳ ಗುರುತು ಉಳಿಸಿಕೊಳ್ಳುವುದಿಲ್ಲ ಭೂಮಿ' – ಹೇಮಾ ಕಳ್ಳಂಬೆಳ್ಳ

10668337_1469615603315741_108162996_n

– ಹೇಮಾ ಕಳ್ಳಂಬೆಳ್ಳ

1
ಮುಳ್ಳುಗಳ ನಡುವೆಯೇ ಗುಲಾಬಿಯು ಅರಳುವುದು ಕೇಳು ಗೆಳೆಯ
ಮುಂಜಾನೆ ಉದಯಕೆ ಬೇಕು ಒಂದೆರಡು ಹಕ್ಕಿಗಳ ಚಿಲಿಪಿಲಿಯ ಸಂಗ
ಧರೆ ಚಿಗುರಿ ಹಸಿರಾಗಿ ಉಸಿರಾಡಲು ಕುದಿಯಲೇಬೇಕು ಕಡಲು
ನಿನ್ನೊಲವ ಸವಿಯಲು ಸಹಿಸುವೆನು ವಿರಹವನು ಸರಿ ಇರಲಿ ಬಿಡು
ಮಾಮರಕೆ ಕೋಗಿಲೆ ಮಾವಿನ ಹಣ್ಣು ಗಿಳಿಗೆ
ಮತ್ತೆ ಚಿಗುರು ಮತ್ತೆ ಹಣ್ಣು ವರುಷಕೊಮ್ಮೆ ವಸಂತಕೆ
ಇರುಳೆಲ್ಲ ಬೆಳಗಿದ ಚಂದಿರನ ಬೆಳದಿಂಗಳ ಗುರುತು ಉಳಿಸಿಕೊಳ್ಳುವುದಿಲ್ಲ ಭೂಮಿ
ತನು ಮನದಿ ಗುಡಿಕಟ್ಟಿ ಪೂಜಿಸುವೆ ನಿನ್ನ ಧರೆಯಂತೆ ಮರೆಯುವುದಲ್ಲ ನನ್ನ ಪ್ರೀತಿ
ನೀನು ಗಾಜಿನ ಚೂರು ಪಾದರಸ ನಾನು ನನ್ನೊಳಗೆ ನಿನ್ನದೇ ಬಿಂಬ ಕಂಡಿದೆ
ಹೂವು ನಾನಾಗಿ ಬಣ್ಣ ನೀನಾಗಿ ಪರಿಮಳಕೆ ಒಲವೆಂದು ಹೆಸರನಿಡುವೆ
ಶಂಕೆಯನು ಸುಡಬೇಕೆ ಮತ್ತೊಮ್ಮೆ ಬೆಂಕಿ ಈಗಾಗಲೇ ನಾನು ಪುಟವಿಟ್ಟ ‘ಚಿನ್ನ’
ಸಂಶಯವೆ ಬೇಡ ನಾ ಸೀತೆಯಂತ ಹೆಣ್ಣು ನಿನಗಾಗಿ ಕಾಯುವೆನು ಶಬರಿಯಂತೆ

‍ಲೇಖಕರು avadhi-sandhyarani

3 September, 2015

2 Comments

  1. aanand kunchanur

    Kavithe thumbaa aapthavaagide. Ishtavaayithu…:-)

  2. Ravikumar.K

    Hema padya tumba sundaravagide tumba days mele olleya kavite bantu nimminda

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading