ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಕೆಂದರೆ ಬೆಳಕಲ್ಲ..

ಅರಿವೆಂಬುದುಂಟೇ

-ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಮೌನಕ್ಕೆ
ಎಲ್ಲೆಲ್ಲಿಂದಲೋ ತಂತಿ
ಒಮ್ಮೆ ಬೆಳಕು
ಒಮ್ಮೆ ಬೆಂಕಿ

ಕಗ್ಗತ್ತಲಲ್ಲಿ
ಬೆಂಕಿ
ಬೀಡಿ
ಕುಕ್ಕರಗಾಲಿನ ಧ್ಯಾನ
ಬೆಂಕಿ ನಂದಿ
ಬೆಳಕಾಗಿ
ಕತ್ತಲಲ್ಲಿ ಕಡೆದಿಟ್ಟದ್ದೆಲ್ಲಾ ಭಂಗ

ಈ ತಂತಿಗಳ
ಸುಮ್ಮನೇ ಬಿಡದೆ
ಗಳ ಗಳ ಅಲ್ಲಾಡಿಸಿ
ಚಟರುಮಟರು ಬೆಂಕಿ ಹೊತ್ತಿಸಿ
ಭಂಗಕ್ಕೆ ಭಂಗಿ ಕುಡಿಸಿ
ಒಂದು ಅಭಂಗ ಪ್ರಸಂಗದಲ್ಲಿ
ಗೊಮ್ಮಟನ ಕಡೆದೆ

ಅವನು
ಬೆಳಕೆಂದರೆ ಬೆಳಕಲ್ಲ
ಬೆಂಕಿಯೆಂದರೆ ಬೆಂಕಿಯಲ್ಲ
ಕಣ್ಮುಂದೆ ಕಡೆದಿಟ್ಟುಕೊಂಡು
ಈಗ ಅರಿಯುವ ಪೀಕಲಾಟ

ಹೋಗಲಿ
ಈ ಅರಿವೆಂಬುದುಂಟೇ?

ಮರೆತೇ ಹೋಗಿತ್ತು
ಈ ತಂತಿಯೊಳಗೆ ಬಂದದ್ದು
ಬೆಳಕೋ
ಬೆಂಕಿಯೋ

ಸಮುದ್ರ ದಂಡೆಯಲಿ
ಮರಳ ಗೂಡ ಮಾಡಿ
ಸಮುದ್ರವನ್ನೇ
ವಾಸಿಸಲು ಕರೆದ ಮಗುವ
ಕೇಳಿ ನೋಡಲೇ?

‍ಲೇಖಕರು Admin

8 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading