ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬೆಳಕು ಒಮ್ಮೆ ಸ್ವತ಼಼ಂತ್ರಗೊಳ್ಳಲಿ..', ಕಾಮ್ರೇಡನೊಬ್ಬನ ಸ್ವಗತ

– ಜಾನ್ ಸು಼ಂಟಿಕೊಪ್ಪ


ತಾಯೇ
ನನ್ನ ಬಟ್ಟಲಿಗೊ಼ಂದಿಷ್ಟು
ಕ್ರಾ಼ತಿಯ ಸುರಿ…
ನನ್ನ ಒಡಲಾಳದ
ಬ಼ಂಡಾಯದ ಕಿಡಿ
ಹೊತ್ತಿ ಉರಿಯಲಿ.
ಒಮ್ಮೆ ನೋಡು,
ನನ್ನೊಳಗಿನ ಕಿಚ್ಚು
ಸುಡಲು ಪರಿತಪಿಸುತಿದೆ…
ಕೊಳಪೆ ಹಿಡಿದು
ಫೂ  ಫೂ ಎಂದು
ಊದಿ ಸಾಕಾದ ಬ್ರೆಕ್ಟ್..
ಹೊಗೆಯ ಕಪ್ಪನೇ ದೂರುವ ವಾಲ್ಟೈರ್,
ಕಣ್ಣು ರಿಯೆನ್ನುತ ಕಾಣೆಯಾಗಿದ್ದಾರೆ..
ಹಬೆಯಾಡುವ ಆತ್ಮಗಳಿಂದಲೋ ಏನೋ
ನೆತ್ತರ ನೆಕ್ಕಿನೆಕ್ಕಿ
ಆ ಗಿಲೋಟಿನಿಗೇ ತುಕ್ಕು ಹಿಡಿದಿದೆ..
ಉಳಿದದ್ದು ನನ್ನ ನಾಲಗೆಯಷ್ಟೇ.
ಕಿರುನಾಲಗೆಗೇ ಕುಣಿಕೆ ಬಿಗಿವ ಮುನ್ನ
ನನ್ನ ರುದ್ರಗೊಳಿಸು
ಬೆಳಕು ಒಮ್ಮೆ ಸ್ವತ಼಼ಂತ್ರಗೊಳ್ಳಲಿ..
 

‍ಲೇಖಕರು G

21 May, 2014

3 Comments

  1. Anonymous

    Please read my poem in Avadhi.

  2. ashwini rao.k.n.

    kavitheya mruduthva istavaaythu very nice saar..

  3. Kashyap

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading