ಹಚ್ಚಿಟ್ಟ ಹಣತೆಯಲಿ
ಸುರೇಶ ಎಲ್ ರಾಜಮಾನೆ
ರನ್ನಬೆಳಗಲಿ
ಗಟ್ಟಿಯಾಗಿ ಕಟ್ಟಿದ ಗೋಡೆಯ ಮೇಲೆ
ತನ್ನತಾಸುಟ್ಟುಕೊಂಡು ಬೆಳಕಾಗೋ ದೀಪವೊಂದು ಉರಿಯುತ್ತಿತ್ತು ಪಾಪ ಬತ್ತಿ ಮೈ ಸುಟ್ಟುಕೊಂಡಿತ್ತು.
ಕಠೋರವಾದ ಮನಸನ್ನೊಬ್ಬ ಶಿಲ್ಪಿ ಕಟೆಯುತ್ತಿದ್ದನು
ಹೃದಯದಮೇಲೆ ಬಿತ್ತೊಂದು ಜೋರಾದ ಏಟು
ಚೂರಾಗಿ ಹೋಯ್ತು ಉಳಿ ಉಳಿಯಿತು.
ಅಂದಕಾರದಲಿ ಆಲಂಗಿಸಿಕೊಂಡ ಆ ಆಸೆಗೆ
ಹಾವ ಭಾವವಿಲ್ಲದ ಬಗೆ-ಬಗೆಯ ಭಾಷೆಗಳು
ನಗೆಗೆ ನೂಕಲು ಬೇಕು ಸಾಕುಗಳ ಸಿಹಿ ಹೂರಣ
ಹುಟ್ಟು ಸಾವಿನಲಿ ನೆಟ್ಟ ಪ್ರೀತಿಗೆ
ದಿಟ್ಟ ಉತ್ತರವೇ ಕತ್ತಲು
ಸ್ಪಷ್ಟವಾಗಿ ಕಾಣದ ಕಣ್ಣೆಗೆ ಬೆಣ್ಣೆಯ ಬಣ್ಣದ ಕುರುಹು.

ಹಚ್ಚಿಟ್ಟ ಹಣತೆಯಲಿ ಬಚ್ಚಿಕೊಂಡಿದೆ ಬೆಳಕು,
ಕಚ್ಚಿಕೊಂಡಿದೆ ಬದುಕು, ಮುಚ್ಚಿಕೊಂಡಿದೆ ಕೊಳಕು,
ಸಡಗರದ ಹಬ್ಬ ದೂರದ ದಿಬ್ಬ.
ಹರಿದ ಹಾಳೆಗೊಂದಿಷ್ಟು ಹರಿದುಬಂದ ಅಕ್ಷರಗಳು
ಬರೆದ ಸಾಲುಗಳ ಮದ್ಯೆ ಬರಿ ಕತ್ತಲು ಬೆಳಕಿನ ಆಟ
ಬದುಕಿಗಾಗಿ ಬೆಳಕಿಗಾಗಿ ನಿಲ್ಲದ ಹೋರಾಟ.
ಸೃಷ್ಟಿಯೊಳಗಿನ ಕಲೆ ದೃಷ್ಟಿಯೊಳಗೂ….
ದೋಷವೊಂದು ಮಾತ್ರ ಮನದ ಒಳ-ಹೊರಗೂ
ಸಾವಿಲ್ಲದ ಮನೆಯ ಸಾಸಿವೆಗೆ
ನೋವಿಲ್ಲದ ಮನೆಯ ವಗ್ಗರಣೆಯಾಗುವ ಬಯಕೆ
ನುಗ್ಗಿ ಬಗ್ಗಿ ಬರುವ ಈ ಮುದುಕಿಯ ಕೋಲೊಳಗೂ
ದಂಡ ವಸುಲಿಮಾಡುವ ದಿಟ್ಟ ಆಸೆ
ನಾಶವಾಗುವ ಮುನ್ನ ಘಾಸಿಯಾಗದಂತೆ
ಸೋಸಿ ತೆಗೆದು ವಾಸಿಮಾಡಬೇಕೆಂಬ
ಬೆಳಕಿನ ಬಯಕೆಗೆ ಇರುಳೊಂದು ಸ್ಪಂಧಿಸಲಿ
ಬಾಗಿ ನಡೆಯುವವರ ಬೆನ್ನು ಬದುಕಿನ
ನೇರ ನಡೆಗೆ ನೆರವಾಗಲಿ ಕರುಳ ಹರಿದುಕೊಟ್ಟವಳಿಗಾಗಿ
ಬೆಳಕಿನ ಮದ್ಯದಲ್ಲಿರುವ ದೀಪಾವಳಿಯ ಸಡಗರವಾದರೂ ಒದಗಿಬರಲಿ..!!






ತುಂಬ ಚೆನ್ನಾಗಿದೆ.
padya chennaagide..aksharagala anuranana teeraa agatyavilla anivaaryavuu alla…sahaja vaagi barali suresh avare.
Channagide geleya
Savillada maneya sasivege novillada manege vaggaraneyaguva bayake, estawaytu..
Uttama Kaavyavidu. mandalkke iliyblfl kavite. Congrates
Good poem. It enters the realms of hearts and is clad with meaning.
ತುಂಬು ಹೃದಯದ ಧನ್ಯವಾದಗಳು, ವಾಸುದೇವ್ ನಾಡಿಗ್ ಸರ್,ಅರುಣ್ಕುಮಾರ್ ಹಬ್ಬು ಸರ್ , ನಾಗರಾಜ್, ಡಾ,ಕುಬಸದ್ ಸರ್ ನಿಮ್ಮೆಲ್ಲರ ಪ್ರೀತಿ ಹಾಗು ಮೆಚ್ಚುಗೆಯ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯ್ತು.. ನಿಮ್ಮೆಲ್ಲರ ಸಲಹೆಗಳು ಹೀಗೆ ಸದಾ ನನ್ನೊಂದಿಗಿರಲಿ…