ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬೆನ್ನ ಬೆತ್ತಲೆ ಖಾಲಿ ಹಾಳೆಯ ಮೇಲೆ..’ – ಶಾಂತಿ ಅಪ್ಪಣ್ಣ ಕವಿತೆ

ಒಂದು ಕವಿತೆ

– ಶಾಂತಿ ಅಪ್ಪಣ್ಣ

ಬಾ…ನಲ್ಲಾ, ಎದೆಯೊಳಗೆ ಆಸೆಯಲೆಗಳು ಹೊಯ್ದಾಡಿವೆ… ಒಂಟಿ ನಾವೆ ನಾ… ಹತ್ತಿ ಓಘದಲಿ ತುಯ್ದುಬಿಡು… ಮುಂಗುರುಳ ಸರಿಸಿ.. ಕಿವಿಯಂಚಿಗೆ ಹಾಗೇ ತುಟಿ ತಾಕಿಸಿ.. ಕೊರಳ ಇಳಿಜಾರಿನಲಿ ಜಾರಿಬಿಡು… ಬೆನ್ನ ಬೆತ್ತಲೆ ಖಾಲಿ ಹಾಳೆಯ ಮೇಲೆ.. ನಿನ್ನೊಲವ ಚಿತ್ತಾರಗಳ ಹರಡಿಬಿಡು… ಎದೆ ಕಣಿವೆಗೆ ಕಿವಿಯಾನಿಸಿ.. ಹೃದಯಮಿಡಿತಕೆ.. ಮಿದುವಿನಂದಕೆ ಹಾಗೇ ಕರಗಿಬಿಡು.. ಅಧರ ಮಧುಪರ್ಕವ ಹೀರಿ ನನ್ನೊಳಗನ್ನೆಲ್ಲ…ಅರ್ತಿಯಲಿ ಬರಿದು ಮಾಡು.. ಹೊಟ್ಟೆಯ ಮಡತೆಯಲಿ ಬೆವರಹನಿಗಳ ಸಾಲು.. ನಿನ್ನ ತುಟಿಯನೊತ್ತಿ ಹೀರಿ ಬಿಡು.. ಹೊಕ್ಕುಳ ಚಿಪ್ಪಿನಾಳಕ್ಕೆ ನಿನ್ನೊಂದು ಸುಖದ ಬೆವರ ಸುರಿದು.. ಮುತ್ತಾಗಿ ಅರಳಬಿಡು.. ದಿಕ್ಕುತಪ್ಪಿದ ಹಾಗೆ ಪರಿತಪಿಸುವ ಬೆರಳುಗಳ, ನಿನ್ನಂಗೈಲಿ ಬೆಚ್ಚಗೆ ಬಿಗಿದುಬಿಡು.. ಸೋಲುವ ಕಾಲುಗಳ ನೀವಿ.. ಈ ಲೋಕದೆಲ್ಲೆಯಾಚೆಗೆ ದಾಟಿಸಿಬಿಡು.. ನನ್ನೊಳಗೆ ನಾನೇ ಅರಿಯದ ಹಲವು ಹಳವಂಡಗಳ ಬೆರಗಿನಲಿ ಬಯಲು ಮಾಡು.. ಹೇಗೆಂದು ಏನೆಂದು ಹೇಳತಿಳಿಯದ ವಿಸ್ಮಯದ ಸೌಖ್ಯವನು.. ದೋಚಿಬಿಡು..,ಬಾಚಿಬಿಡು… ಬಾ……  ]]>

‍ಲೇಖಕರು G

11 September, 2012

2 Comments

  1. D.RAVI VARMA

    ಕಾವ್ಯ ಓದುಗನ ಮನ ತಟ್ಟುವುದು, ಮನಮುಟ್ಟುವುದು.ಅದರ ಒಡಲಾಳದ ಆಶಯದಿಂದ, ಮತ್ತು ಅದರ ಪಿಸುಮಾತಿನಿಂದ. ಅದರ ಅಂತಸತ್ವದಿಂದ. ನಿಮ್ಮ ಈ ದೃಶ್ಯ ಕಾವ್ಯ ಈ ನಿಟ್ಟಿನಲ್ಲಿ ಘಟ್ಟಿಯಾದ,ಭಾವನೆಗಳನ್ನು,ಕನಸುಗಳನ್ನು,ಆಶಯಗಳನ್ನು ನವಿರಾದ ಬಾಷೆಯಲ್ಲಿ ಹಿಡಿದಿಟ್ಟಿದೆ. “ಬೆನ್ನ ಬೆತ್ತಲ ಖಾಲಿ ಹಾಳೆಯ ಮೇಲೆ ” ಅದ್ಬುತವಾದ ಕಾನ್ಸೆಪ್ಟ್…. ನನಗೆ ಘಾಲಿಬ್ ಅವರ “ಹಂ ಸೆ ಖುಲ್ ಜಾವೋ ” ಕವನ ನೆನಪು ಬರ್ತಿದೆ.
    “ಅರಳಿಕೊ ನನ್ನ ಜೊತೆ ಅಮಲಿನ ಒಂದು ದಿನ
    ಇಲ್ಲ ,ಇದೆಯಲ್ಲ ಅಮಲನೆಪ; ಛೇಡಿಸುವೆ ಒಂದು ದಿನ ”
    ಮತ್ತೊಂದೆಡೆ ಹೀಗೆ ಹೇಳುತ್ತಾರೆ ಘಾಲಿಬ್
    “ಕಾಗದಗಳು ಇಲ್ಲವಾದವು ಆದರೆ ನಿನ್ನ ಪ್ರಶಂಸೆ ಇನ್ನು ಬಾಕಿ ಇದೆ ದೋಣಿ ಬೇಕಾಗಿದೆ ದಡವಿಲ್ಲದ ಸಾಗರದಲ್ಲಿ ವಿಹರಿಸಲು ”
    ಯಾಕೋ ಗೊತ್ತಿಲ್ಲ ಸುಮ್ಮನೆ ಒಮ್ಮೆ ಘಾಲಿಬ್ ಸುಳಿದಾಡಿದ .
    ನಿಮ್ಮ ಕವನದ ಆಹ್ವಾನ ನನಗೆ “ಅಮರಶಿಲ್ಪಿ ಜಕಣಾಚಾರಿ ” ಚಿತ್ರದ ಈ ಹಾಡು ನೆನಪಿಗೆ ತಂತು
    “ಚೆಲುವಾಂತ ಚೆನ್ನಿಗನೆ ನಲಿದಾಡು ಬಾ ..
    ಈ ಸಿಂಗಾರ ಶಿಲೆಯೊಡನೆ ಕುನಿದಾದು ಬಾರಾ
    ತಾಳಮೆಳದೊಳು ಕಳೆಯುವ ಬಾರಾ
    ಗಾಲಿಗಂಧದೊಲು ಸೇರುವ ಬಾರಾ
    ಭಾವ ಭಂಗಿಯಲು ಬೆರೆಯುವ ಬಾರಾ
    ಪ್ರೇಮನಂದವ ನೀ ತಾರಾ …….
    ಒಮ್ಮೊಮ್ಮೆ ಹೀಗೆ ಆಗುವುದು ಉಂಟು .. ಒಂದು ಕಾವ್ಯ ಓದಿದಾಗ adenelegattinalli ಓದಿದ ಕೇಳಿದ ಮಾತು,ಹಾಡು ಮನ ಕಾಡುತ್ತವೆ.. ಮತ್ತೆ ಮತ್ತೆ ಕಾಡುತ್ತಲೇ ಇರುತ್ತವೆ…
    ರವಿ ವರ್ಮ ಹೊಸಪೇಟೆ

  2. ambarish

    Tumba Rasavattada kavana.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading