ಒಂದಷ್ಟು ಜಪಾನ್ ಹಾಯ್ಕುಗಳ ಬಾಲಿಶ ಅನುವಾದ ಪ್ರಯತ್ನ
ಮೋಹನ್ ವಿ ಕೊಳ್ಳೇಗಾಲ
ಅದೊಂದು ಮೌನ ಹೊದ್ದ ಹಳೆಯ ಕೆರೆ
ಅಷ್ಟಕ್ಕೇ ಕಪ್ಪೆಯೊಂದು ನೆಗೆಯಿತು
ಗದ್ದಲ; ಮತ್ತೆ ಮೌನ
–
ಬೆಳದಿಂಗಳು
ಪಶ್ಚಿಮಕ್ಕೆ ಚಲಿಸಿದರೆ, ಹೂವಿನ ನೆರಳು
ಪೂರ್ವಕ್ಕೆ ತೆವಳುತ್ತದೆ
–
ಪ್ರತಿಯೊಂದನ್ನೂ ನಾನು ಮುಟ್ಟುತ್ತೇನೆ
ನವಿರಾಗಿ, ಅಯ್ಯೋ!
ಮುಳ್ಳಿನಂತೆ ಚುಚ್ಚುತ್ತದೆ
–
ನೆಲದ ಮೇಲಿನ ಅಳಿಲು
ಬೇಲಿ ಮೇಲಿನ ಟೊಮ್ಯಾಟೋವನ್ನು
ದಿಟ್ಟಿಸುತ್ತಿದೆ
–
ಮೋಡಗಳು ಗೆಳೆತನ ಬೆಳೆಸುತ್ತಿವೆ
ನೀರು ಶಾಂತವಾಗಿದೆ
ಜಪಾನ್ ಪ್ರಶಾಂತವಾಗಿದೆ ಎನಿಸುತ್ತಿದೆ
–
ಮೋಡಗಳು ಮೂಡಿಕೊಳ್ಳುತ್ತವೆ
ಚಂದ್ರನನ್ನು ನೋಡಿ ವಿರಮಿಸಿಕೊಳ್ಳಲು
ಮನುಷ್ಯರಿಗೊಂದವಕಾಶವ ನೀಡಿ
–
ಬಡತನದ ಮಗು
ಅಕ್ಕಿಯನ್ನು ನುರಿಸುವುದನ್ನು ಪ್ರಾರಂಭಿಸುತ್ತದೆ
ಬೆಳದಿಂಗಳನ್ನೇ ಸೇವಿಸುತ್ತ
–
ನನ್ನ ಗೊಣಗಾಡುವ ಹೆಂಡತಿ
ಇಂದಿಲ್ಲಿದ್ದರೆ ಮಾತ್ರ
ಚಂದ್ರ ಮೂಡುತ್ತಾನೆ
–
ಕಾಗದದ ಕಿಟಕಿಯ ರಂಧ್ರದಲ್ಲಿ ನೋಡಿದಾಗ
ಕಾಣುವ ಒಂದು ಸುಂದರ ವಸ್ತುವೇ
ಈ ಕ್ಷೀರಪಥ
–
ಒಂದು ಹಠಾತ್ತನೆಯ ಮಳೆ ಬಿದ್ದಾಗ
ಬೆತ್ತಲೆ ಕುದುರೆ ಓಡಿಸುವ
ನಾನೂ ಕೂಡ ಬೆತ್ತಲೆ
–
ರಾತ್ರಿಯ ವೇಳೆಯಲ್ಲಿ ಮತ್ತೊಮ್ಮೆ
ನಿನ್ನನ್ನು ನೆನಪಿಸಿಕೊಂಡ ಕ್ಷಣ
ಕುಳಿರ್ಗಾಳಿ ಮಳೆಯಾಗಿಬಿಡುತ್ತದೆ
–
ಒಂದು ಇರುವೆಯನ್ನು ಸಾಯಿಸುವಾಗ
ಅದನ್ನೇ ನೋಡುವ
ನನ್ನ ಮಕ್ಕಳು ಕಾಣುತ್ತಾರೆ







0 Comments