ನಗ್ನಜಿತ
ಛಾಯಾನುವಾದ: ಗೀತಾ ದೊಡ್ಮನೆ
ನಾನು ನನ್ನ ಗೀತವನ್ನು
ಒಂದು ನಿಲುವಂಗಿಯಾಗಿಸಿದೆ
ಹೊಚ್ಚಿದೆ- ಕಸೂತಿ, ನಕ್ಷೆ, ಚಿತ್ತಾರಗಳನ್ನು
ಹೊಮ್ಮಿಸಿ- ಪುರಾಣ, ಐತಿಹ್ಯಗಳಿಂದ-
ಅಡಿಯಿಂದ ಮುಡಿಯವರೆಗೆ..
ಆದರೆ..
ಲಪಟಾಯಿಸಿದರು ಮೂರ್ಖರದನ್ನು
ತೊಟ್ಟುಕೊಂಡರು
ಲೋಕದ ಕಣ್ಣಿಗೆ,
ಥೇಟ್ ತಾವೇ ಅದನ್ನು ಬರೆದ
ಚಿಂತಕರೆಂದು-
ಭಾವಿಸುವ ಹಾಗೆ..
ಆದರೆ,
ಮಿಗಿಲಾದ ಸಾಹಸ ಇರುವುದು-
ಅಲ್ಲಿ-
ಬೆತ್ತಲೆಯಾಗಿ ನಡೆಯುವುದರಲ್ಲಿ!
(ಸಾಭಾರ: ಈ ಕವಿತೆಯ ಮೂಲ ಕವಿಯ ಹೆಸರು ಲಭ್ಯವಾಗಿಲ್ಲ. ಇದರ ಆಂಗ್ಲ ಆವೃತ್ತಿಯ ಕನ್ನಡ ಛಾಯಾನುವಾದ ಇಲ್ಲಿದೆ)






0 Comments